ಹುಣಸೂರು –
ಸಮೀಕ್ಷೆ ಗೆ ಕೈಕೊಟ್ಟ 80 ಕ್ಕೂ ಹೆಚ್ಚು ಶಿಕ್ಷಕರು ಗೈರಾದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ DC ಹೌದು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವನ್ನು ಡಿಡಿಪಿಐ ಜವರೇಗೌಡ ಪರಿಶೀಲಿಸಿದರು. ನಗರದ ರಂಗನಾಥ ಬಡಾವಣೆಯಲ್ಲಿ ಶಿಕ್ಷಕರು ನಡೆಸುತ್ತಿದ್ದ ಗಣತಿ ವೇಳೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿ ಗಣತಿದಾರರಿಗೆ ಸಮೀಕ್ಷೆ ವೇಳೆ ಕುಟುಂಬ ಗಳು ನೀಡುವ ಮಾಹಿತಿಯನ್ನಷ್ಟೆ ದಾಖಲಿಸಿಕೊಳ್ಳ ಬೇಕು
ಜನರಿಗೆ ಗೊತ್ತಿಲ್ಲದ ಮಾಹಿತಿಯ ಬಗ್ಗೆ ತಿಳಿಸಿಕೊಡಿ. ಬಲವಂತವಾಗಿ ಯಾವುದೇ ಮಾಹಿತಿ ಪಡೆಯುವಂ ತಿಲ್ಲಾ ಆಥವಾ ದಾಖಲಿಸದಂತೆ ತಾಕೀತು ಮಾಡಿದರು ನಂತರ ಮಾತನಾಡುತ್ತಾ ಮಾಹಿತಿ ನೀಡಿದ ಡಿ ಡಿ ಪಿ ಐ. ಜವರೇಗೌಡರು ಹುಣಸೂರು ತಾಲೂಕಿನಲ್ಲಿ 32 ಮಂದಿ ಮೇಲ್ವಿಚಾರಕರು ಸೇರಿದಂತೆ 541 ಬ್ಲಾಕ್ ಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 5184 ಬ್ಲಾಕ್ ಮೂಲಕ 4867 ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆಂದರು. ಈವೇಳೆ ರಂಗನಾಥ ಬಡಾವಣೆ ಹಿರಿಯ ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕಿ ಲಕ್ಷ್ಮಿನರಸಮ್ಮ ಇಸಿಒ ರುದ್ರಪ್ಪ. ಶಿಕ್ಷಕರಾದಬಸವರಾಜು. ಶಿವಣ್ಣ. ಸರಸ್ವತಿ. ಮಂಜು ಇದ್ದರು.
ಹುಣಸೂರು ತಾಲೂಕಿನಲ್ಲಿ ಈವರೆಗೂ 70 ಮಂದಿ ಶಿಕ್ಷಕರು ಲಾಗಿನ್ ಆಗಿಲ್ಲವೆಂಬ ಮಾಹಿತಿ ಇದ್ದು. ನೋಟೀಸ್ ಜಾರಿ ಮಾಡಲು ಸೂಚಿಸಲಾಗಿದೆ. ಈವರೆಗೆ ಲಾಗಿನ್ ಆಗದವರು ತಕ್ಷಣವೇ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಸುದ್ದಿ ಸಂತೆ ನ್ಯೂಸ್ ಹುಣಸೂರು…..