ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ಇತ್ತ ಧಾರವಾಡ ದಲ್ಲಿ ವಾರ್ಡ್ 7 ರಲ್ಲಿ ಕಾಂಗ್ರೆಸ್ ಪಕ್ಷದ ಶ್ರೀಮತಿ ದೀಪಾ ಸಂತೋಷ ನೀರಲಕಟ್ಟಿ ಜನ ಸೇವೆ ಆರಂಭ ಮಾಡಿದ್ದಾರೆ.
ಹೌದು ಈಗಷ್ಟೇ ಚುನಾವಣೆ ಮುಗಿಸಿರುವ ಇವರು ಗೆದ್ದ ಖುಷಿಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಹಬ್ಬ ಹರಿದಿನ ಎನ್ನುತ್ತಾ ಮನೆಯಲ್ಲಿ ಇರದೇ ಹೊಸ ಕನಸು ಹೊಸ ಭರವಸೆಗಳನ್ನು ಮುಂದಿಟ್ಟುಕೊಂಡು ಗೆಲ್ಲಿಸಿರುವ ವಾರ್ಡ್ ಜನರ ಸೇವೆಯನ್ನು ಮಾಡಲು ಮುಂದಾಗಿದ್ದಾರೆ
ಹೌದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಯ ಚುನಾವಣೆಯಲ್ಲಿ ಆಯ್ಕೆ ಮಾಡಿದ ಮತದಾರರ ಸೇವೆಯನ್ನು ಮುಂಜಾನೆಯ ಸ್ವಚ್ಚತಾ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಸಾರ್ವಜನಿಕ ರೊಂದಿಗೆ ಸಹಕರಿಸಿ ಕಾರ್ಯ ನಿರ್ವಹಿಸಲು ಸೂಚಿಸುವ ಮೂಲಕ ಇಂದು ನನ್ನ ಸೇವಾ ಕಾರ್ಯ ಪ್ರಾರಂಭಿಸಿದ್ದಾರೆ ನೂತನ ಪಾಲಿಕೆಯ ಸದಸ್ಯರಾ ಗಿರುವ ಶ್ರೀಮತಿ ದೀಪಾ ಸಂತೋಷ ನೀರಲಕಟ್ಟಿ ಅವರು