ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರು ತ್ತಿದೆ.ನಾ ಮುಂದು ನೀ ಮುಂದು ಎನ್ನುತ್ತಾ ಆಯಾ ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರವನ್ನು ಕಟ್ಟಿಕೊಂ ಡು ಅಬ್ಬರದ ಪ್ರಚಾರ ಮಾಡುತ್ತಾ ಅಬ್ಬರದ ಭರವ ಸೆಯನ್ನು ನೀಡುತ್ತಾ ಕಣದಲ್ಲಿದ್ದರೆ ಇತ್ತ ಹೊಸ ಕನಸು ಹೊಸದಾದ ಅಭಿವೃದ್ದಿಯ ಉತ್ಸಾಹದೊಂ ದಿಗೆ ವಾರ್ಡ್ 2 ರಲ್ಲಿ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಕಣಕ್ಕಿಳಿಸಿದ್ದಾರೆ.
ಈ ಹಿಂದೆ ಕೇವಲ ಅಲ್ಪ ಮತಗಳಿಂದ ಸೋಲನ್ನನು ಭವಿಸಿದ್ದ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಎರಡನೇಯ ಬಾರಿಗೆ ಪಾಲಿಕೆಯ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.ಈ ಹಿಂದೆ ಕೆಜಿಪಿ ಯಿಂದ ಸ್ಪರ್ಧೆ ಮಾಡಿ ಕೇವಲ ಅಲ್ಪ ಮತಗಳಿಂದ ಸೋಲನ್ನನುಭ ವಿಸಿದ್ದ ಇವರು ಈ ಬಾರಿ ಮತ್ತೆ ಸ್ಪರ್ಧೆ ಮಾಡಿದ್ದಾರೆ.
ಧಾರವಾಡದ ವಾರ್ಡ್ 2 ರಲ್ಲಿ ಬಿಜೆಪಿ ಯ ಅಭ್ಯರ್ಥಿ ಯಾಗಿ ಕಣಕ್ಕಿಳಿದ್ದಾರೆ.ಇವರ ಪತಿ ಶಂಕರ ಹಾರಿಕೊಪ್ಪ ಬಿಜೆಪಿ ಪಕ್ಷದ ಮುಖಂಡರಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ವಾರ್ಡ್ 2 ಕ್ಕೆ 10 ಕೋಟಿ ರೂಪಾಯಿ ಅನುದಾನವನ್ನು ತಗೆದುಕೊಂಡು ವಾರ್ಡ್ ನಲ್ಲಿ ಅಭಿವೃದ್ದಿಯನ್ನು ಮಾಡಿ ಸಾರ್ವಜನಿ ಕರ ಪ್ರೀತಿಗೆ ಪಾತ್ರರಾಗಿ ಸಧ್ಯ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡುವ ಉದ್ದೇಶದಿಂದಾಗಿ ಈಗ ಪಾಲಿಕೆಯ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.
ವಾರ್ಡ್ ನಲ್ಲಿ ಮಾಡಿದ ಕೆಲಸ ಕಾರ್ಯಗಳು
ಸಿಸಿ ರಸ್ತೆಗಳ ನಿರ್ಮಾಣ,ಒಳಚರಂಡಿ ವ್ಯವಸ್ಥೆ
ಎತ್ತಿನಗುಡ್ಡ ಮೆಹಬೂಬ ನಗರಕ್ಕೆ ಮೆಟ್ಲಿಂಗ್ ವ್ಯವಸ್ಥೆ,ದುರ್ಗಾದೇವಿ ದೇವಸ್ಥಾನಕ್ಕೆ ಕುಡಿಯುವ ನೀರಿನ ವ್ಯವಸ್ಥೆ,ಸಮರ್ಪಕ ವಿದ್ಯುತ್ ಸೌಲಭ್ಯದ ವ್ಯವಸ್ಥೆ,ಹೀಗೆ ಹತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಈಗಾಗಲೇ ಶಾಸಕರ ಅನುದಾನ ದಲ್ಲಿ ವಾರ್ಡ್ ಗೆ ತಗೆದುಕೊಂಡು ಮಾದರಿಯನ್ನಾಗಿ ಮಾಡಿ ಇನ್ನಷ್ಚು ಮಾಡುವ ಉದ್ದೇಶದಿಂದಾಗಿ ಈಗ ಸ್ಪರ್ಧೆ ಮಾಡಿದ್ದಾರೆ.
ವಾರ್ಡ್ ಗಾಗಿ ಕೈಗೊಂಡ ಕನಸುಗಳು ಇನ್ನಷ್ಟು ಅಭಿವೃದ್ದಿಯೊಂದಿಗೆ ಸುಸಜ್ಜಿತ ಮಾದರಿ ವಾರ್ಡ್ ಮಾಡುವ ಯೋಜನೆ ವಾರ್ಡ್ ತುಂಬೆಲ್ಲಾ ಸಿಸಿ ಟಿವಿ ಗಳ ಅಳವಡಿಕೆ ವಾರ್ಡ್ ಜನತೆಗಾಗಿ ತುರ್ತು ಬಳಕೆಗಾಗಿ ಉಚಿತವಾಗಿ ಅಂಬ್ಯೂಲೆನ್ಸ್ ವಾಹನ ಮತ್ತು ಇತರೆ ಸೌಲಭ್ಯಗಳ ವ್ಯವಸ್ಥೆ ಸುಸಜ್ಜಿತವಾದ ಪಾರ್ಕ್ ವಾಯು ವಿಹಾರಕ್ಕೆ ವ್ಯವಸ್ಥೆ ವಾರ್ಡ್ ನಲ್ಲಿ ಪ್ರತ್ಯೇಕವಾದ ಆಸ್ಪತ್ರೆಯ ಸೌಲಭ್ಯ ಹೀಗೆ ಇದರೊಂದಿಗೆ ಇನ್ನೂ ಕೂಡಾ ಹತ್ತು ಹಲವಾರು ಕನಸು ಭರವಸೆಗಳೊಂದಿಗೆ
ಅದರಲ್ಲೂ ವಿಶೇಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಮಾರ್ಗ ದರ್ಶನದೊಂದಿಗೆ ವಾರ್ಡ್ ಜನತೆಯ ಪ್ರೀತಿ ವಿಶ್ವಾಸ ಅಭೂತಪೂರ್ವ ವಾದ ಬೆಂಬಲದಿಂದಾಗಿ ಅಖಾಡ ಕ್ಕಿಳಿದಿದ್ದಾರೆ.
ಇವರೊಂದಿಗೆ ವಿಠ್ಠಲರಾವ್ ಗುಡುದೂರು.,ವಿರೇಶ ಹಿರೇಮಠ,ಹನಮಂತ ಮೂಶನ್ನವರ, ಮಂಜುನಾಥ ಚೌಹಾನ್, ಸೋಮಲಿಂಗಪ್ಪ ಧೂಳಪ್ಪನವರ ಬಸವರಾಜ ಕುರಬೇಟ,ದ್ಯಾಮಣ್ಣ ಕುರುಬೇಟ. ಯಲ್ಲಪ್ಪ ಪವಾರ,ರಮೇಶ ಹೂಗಾರ,ಸತೀಶ ಕೀಟದಾಳ,ನಿರ್ಮಲಾ ಪಳೋಟಿ ಮಂಜುಳಾ ಮಡಿವಾಳರ ಭಾರತಿ ಹಿಂಚಿಗೇರಿ,ಲೀಲಾಲತಿ ಹದ್ದಣ್ಣನವರ,ಆಶಾ ಆರ್ ಬಡಿಗೇರ, ರಶ್ಮೀ ಎಸ್ ಈಂಗಳಹಳ್ಳಿ ಹೀಗೆ ಟೀಮ್ ಕಟ್ಟಿಕೊಂಡು ಪ್ರಚಾರ ವನ್ನು ಮಾಡುತ್ತಿದ್ದಾರೆ.
ಹೋದಲ್ಲೆಲ್ಲ ಸಾಕಷ್ಟು ಬೆಂಬಲ ಅಭೂತಪೂರ್ವ ವಿಶ್ವಾಸ ವ್ಯಕ್ತವಾಗುತ್ತಿದ್ದು ಈಬಾರಿ ಇದನ್ನೇಲ್ಲವನ್ನು ನೋಡಿದರೆ ಖಂಡಿತವಾಗಿ ಯೂ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ವಿಜಯದ ಪತಾಕೆ ಹಾರಿಸಲಿ ದ್ದಾರೆ.ಈಗಾಗಲೇ ವಾರ್ಡ್ ನಲ್ಲಿ ತಾವು ಮಾಡಿರುವ ಕೈಗೊಂಡಿರುವ ಕೆಲಸ ಕಾರ್ಯಗಳನ್ನು ಮುಂದಿಟ್ಟು ಕೊಂಡು ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತಿದ್ದಾರೆ.