ಧಾರವಾಡ –
ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಎನ್. ಕೆ. ಸಾವಕಾರ ಅವರನ್ನು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಗುರು ತಿಗಡಿ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು ಸಂಘದಿಂದ ಸ್ವಾಗತಿಸಿ ಸನ್ಮಾನಿಸಿ ಶುಭವನ್ನು ಸಂಘ ದಿಂದ ಕೋರಲಾಯಿತು
ಸಂಘದ ಪದಾಧಿಕಾರಿಗಳ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಘಟ್ಟಿ, ಜೀವನ ಶಿಕ್ಷಣ ಮಾಸಪತ್ರಿಕೆ ಸಹ ಸಂಪಾದಕರಾದ ಗುರುಮೂರ್ತಿ ಯರಗಂಬಳಿಮಠ ಹಾಗೂ ವಿವಿಧ ಹಂತದ ಪದಾಧಿಕಾರಿಗಳಾದ ಕಾಶಪ್ಪ ದೊಡವಾಡ, ಆರ್ ಬಿ ಮಂಗೋಡಿ, ಶ್ರೀಮತಿ ಶಾರದಾ ಶಿರಕೋಳ ಶ್ರೀಮತಿ ಮಹಾದೇವಿ ದೊಡ್ಡಮನಿ, ಚಂದ್ರಶೇಖರ ತಿಗಡಿ,
ಶ್ರೀಮತಿ ಶಕುಂತಲಾ ಅರಮನಿ,ಆರ್ ಎಸ್ ಹಿರೇಗೌಡರ,ಆಯ್ ಎಚ್ ನದಾಫ್, ಚಿದಾನಂದ ಹೂಲಿ,ಲಿಂಗರಾಜ ಕೊಂಗವಾಡ,ಎನ್ ಬಿ ತೋರಣಗಟ್ಟಿ,ರಾಜು ಬೆಟಗೇರಿ, ಶ್ರೀಮತಿ ರೇಣುಕಾ ಜೊಂಜಾಳೆ ಮುಂತಾದವರು ಉಪಸ್ಥಿತರಿದ್ದರು