ಶಿಕ್ಷಕಿ ಕೊಲೆ – ಶಿಕ್ಷಕಿಯ ಕೊಲೆ ಯಿಂದ ಬೆಚ್ಚಿಬಿತ್ತು ರಾಜ್ಯ….. ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ…..

Suddi Sante Desk

ಭುವನೇಶ್ವರ –

ನಾಪತ್ರೆಯಾಗಿದ್ದ ಶಿಕ್ಷಕಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಭುವನೇಶ್ವರ ದಲ್ಲಿ ನಡೆದಿದೆ.ಒಡಿಶಾದ 24 ವರ್ಷದ ಶಿಕ್ಷಕಿ ಮಮಿತಾ ಮೆಹೆರ್ ಅವರೇ ಈಗ ಶವವಾಗಿ ಪತ್ತೆ ಯಾಗಿದ್ದಾರೆ‌.ನಾಪತ್ತೆಯಾಗಿದ್ದ ಇವರು ಶವವಾಗಿ ಸಿಕ್ಕಿ ದ್ದಾರೆ.ಹೀಗಾಗಿ ಇದೊಂದು ಪೂರ್ವನಿಯೋಜಿತ ಕೊಲೆ ಇಡೀ ರಾಜ್ಯವನ್ನು ಆಘಾತಕ್ಕೆ ದೂಡಿದೆ.ಕೊಲೆ ಪ್ರಕರಣದ ಪ್ರಮುಖ ಆರೋಪಿ ಗೋವಿಂದ್ ಸಾಹು ಎಂಬಾತನನ್ನು ಬಂಧಿಸಿದ ಬಳಿಕ ವಿಚಾರಣೆಯಲ್ಲಿ ಮತ್ತಷ್ಟು ಭಯಾನಕ ಸಂಗತಿಗಳು ಬೆಳಕಿಗೆ ಬಂದಿವೆ.ಮಮಿತಾ ಅವರು ಒಡಿಶಾದ ಕಲಹಂಡಿ ಜಿಲ್ಲೆಯ ಮಹಾಲಿಂಗದಲ್ಲಿರುವ ಸನ್ಸೈನ್ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದರು. ಇದ್ದಕ್ಕಿದ್ದಂತೆ ಅ.8 ರಂದು ಮಮಿತಾ ನಾಪತ್ತೆಯಾಗಿದ್ದರು. ಇದರ ಹಿಂದೆ ಅದೇ ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದ ಗೋವಿಂದ್ ಸಾಹು ಕೈವಾಡ ಇದೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ದಾಖಲಿಸಿದ್ದರು.

ಇದಾದ ಬಳಿಕ ಸಾಹುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಮಮಿತಾರನ್ನು ಕೊಂದು ಆಕೆಯ ಮೃತದೇಹವನ್ನು ಸಮಾಧಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಕ್ಟೋ ಬರ್ ರಂದು ಸಾಹು ತನ್ನ ಕಾರಿನಲ್ಲಿ ಮಮಿತಾರನ್ನು ಭವಾನಿಪಟ್ಟಣಕ್ಕೆ ಕರೆದೊಯ್ದಿದ್ದಾನೆ.ಮರಳಿ ಬರುವಾಗ ಕಾರಿನ ಒಳಗಡೆಯೇ ಮಮಿತಾರನ್ನು ಸಾಹು,ಉಸಿರುಗ ಟ್ಟಿಸಿ ಕೊಲೆ ಮಾಡಿದ್ದಾನೆ.ಈ ವೇಳೆ ತಪ್ಪಿಸಿಕೊಳ್ಳಲು ಮಮಿತಾ, ಸಾಕಷ್ಟು ಯತ್ನಿಸಿದಾದರೂ ಅದು ಸಾಧ್ಯವಾಗ ಲಿಲ್ಲ.

ಮಮಿತಾ ಬಳಿ ಸಾಹುಗೆ ಸಂಬಂಧಿಸಿದ ಎರಡು ಆಕ್ಷೇಪಾರ್ಹ ವಿಡಿಯೋಗಳಿದ್ದವು ಎಂದು ತಿಳಿದುಬಂದಿದೆ. ಆಕೆಯನ್ನು ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಸಮಸ್ಯೆ ಯಾಗಬಹುದು ಅಂತಾ ದುರಾಲೋಚನೆಯಿಂದ ಆಕೆಯನ್ನು ಸಾಹು ಕೊಲೆಗೈದಿದ್ದಾನೆ.ಶಾಲೆಯಲ್ಲಿದ್ದ ಮಹಿಳಾ ಉದ್ಯೋಗಿಗಳ ಮೇಲೆ ಸಾಹು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ.ಅಲ್ಲದೆ, ಆತನ ಅಕ್ರಮ ಸಂಬಂಧಗಳನ್ನು ಬಯಲಿಗೆಳೆದು ಮುಖವಾಡವನ್ನು ಕಳಚುವುದಾಗಿ ಮಮಿತಾ ಎಚ್ಚರಿಕೆ ನೀಡಿದ್ದಾಳೆಂದು ಹೇಳಲಾಗಿದೆ.

ಅ.7ರಂದು ಸಾಹು, ಶಾಲೆಯ ಸ್ಟೇಡಿಯಂ ನಿರ್ಮಾಣದ ಸೈಟಿನಲ್ಲಿ ಹಳ್ಳ ತೆಗೆಯಲು ಜೆಸಿಬಿ ಕೆಲಸಗಾರನಿಗೆ ಹೇಳಿ ದ್ದಾನೆ.ಮಮಿತಾ ಕೊಲೆಯ ಬಳಿಕ ಆಕೆಯ ಮೃತದೇಹ ವನ್ನು ಪೆಟ್ರೋಲ್ ಸುರಿದು ಬೆಂಕಿಯಿಟ್ಟು ನಂತರ ಮೊದಲೇ ತೋಡಲು ಹೇಳಿದ್ದ ಹಳ್ಳಕ್ಕೆ ತಳ್ಳಿ, ಮೃತದೇಹ ಬೇಗ ಕೊಳೆಯಲಿ ಎಂದು ಅದರ ಮೇಲೆ ಉಪ್ಪನ್ನು ಸುರಿದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅ. 9ರಂದು ಅರ್ಧ ಮುಚ್ಚಿದ್ದ ಹಳ್ಳವನ್ನು ಪೂರ್ತಿಯಾಗಿ ಮುಚ್ಚುವಂತೆ ಸಾಹು,ಜೆಸಿಬಿ ಆಪರೇಟರ್ ಗೆ ಹೇಳಿದ್ದಾನೆ. ಇನ್ನು ಈ ಘಟನೆಯಲ್ಲಿ ಅನೇಕ ಮಂದಿ ಕೈಜೋಡಿಸಿದ್ದು, ಇದೊಂದು ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖವಾಗಿದೆ.

ಅ.14ರಂದು ಪೊಲೀಸರು ಸಾಹುವಿನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿ ಕಾಲು ಗೆಜ್ಜೆ ಮತ್ತು ಪೆಟ್ರೋಲ್ ಜಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಅ.19 ರಂದು ಮಮಿತಾ ಮೃತದೇಹವನ್ನು ಹೂತಿಟ್ಟಿದ್ದ ಸ್ಟೇಡಿಯಂ ನಿರ್ಮಾಣ ಜಾಗದಿಂದ ಹೊರತೆಗೆಯಲಾಗಿದ್ದು, ಸ್ಥಳದಲ್ಲಿ ಚೈನ್ ಮತ್ತು ಬ್ಯಾಗ್ ಅನ್ನು ವಶಕ್ಕೆ ಪಡೆಯಲಾಗಿದೆ.

ಈ ಘಟನೆ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶದ ಜತೆಗೆ ಪ್ರತಿಭಟನೆಯು ವ್ಯಕ್ತವಾಗಿದೆ. ಆರೋಪಿ ಸಾಹುವಿಗೆ ಮತ್ತು ಆತನಿಗೆ ಸಹಕಾರ ನೀಡಿದ ಇತರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒಡಿಶಾ ಮಂದಿ ಆಗ್ರಹಿಸಿದ್ದಾರೆ. ಸದ್ಯ ಸಾಹುನನ್ನು ಬಂಧಿಸಿರುವ ಪೊಲೀಸರು ಈ ಕೊಲೆ ಯಾಗಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.