ಮಲ್ಲಾಪೂರ –
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದ 93 ವಯಸ್ಸಿನಲ್ಲಿ ಹಿರಿಯ ಜೀವಿ ಈರಮ್ಮ ವೀರುಪಾಕ್ಷಪ್ಪ ಸತ್ತಿಗೇರಿ ನಿಧನರಾಗಿದ್ದಾರೆ.

ವಯಸ್ಸು 93 ಆಗಿದ್ದರು ಉತ್ಸಾಹದಿಂದ ಕುಟುಂಬದ ಎಲ್ಲರೊಂದಿಗೆ ಇದ್ದ ಈರಮ್ಮಜ್ಜಿ ಕಳೆದ ಹದಿನೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮನೆಯಲ್ಲಿಯೇ ಮೊಮ್ಮಗ ವಿರೇಶ ಸತ್ತಿಗೇರಿ ಅವನೊಂದಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಈರಮ್ಮ ಮನೆಯಲ್ಲಿಯೇ ನಿಧನರಾಗಿದ್ದಾರೆ. ಕುಟುಂಬದ ಪರಿಚಯ ಪತಿ ವೀರುಪಾಕ್ಷಪ್ಪ ಸತ್ತಿಗೇರಿ ಮುಖ್ಯೋಪಾಧ್ಯಾ ಯರಾಗಿದ್ದರು ಮೂರು ನಾಲ್ಕು ವರ್ಷಗಳ ಹಿಂದೆ ಇವರ ಪತಿ ವೀರುಪಾಕ್ಷಪ್ಪ ಸತ್ತಿಗೇರಿ ನಿಧನರಾಗಿದ್ದಾರೆ. ಇನ್ನೂ ಇವರಿಗೆ ಮೂವರು ಗಂಡು ಮಕ್ಕಳು ಬಸವರಾಜ ಹಿರಿಯ ಮಗ ಇವರು ಕೃಷಿ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಎರಡನೇ ಮಗ ಹುಬ್ಬಳ್ಳಿಯ ರವಿ ನಗರದಲ್ಲಿ ವಾಸಿಸುತ್ತಿದ್ದು ಐದು ವರುಷದ ಹಿಂದೆ ಇವರು ನಿಧನರಾಗಿದ್ದಾರೆ. ಇನ್ನೂ ಮೂರನೇಯ ಮಗ ಅಶೋಕ ಸತ್ತಿಗೇರಿ ಮಲ್ಲಾಪೂರ ಗ್ರಾಮದಲ್ಲಿ ವಾಸಿಸುತ್ತಿರುವ ಇವರು ವೃತ್ತಿಯಲ್ಲಿ ನ್ಯಾಯವಾದಿ ಆಗಿದ್ದಾರೆ.

ಹೆಣ್ಣು ಮಕ್ಕಳ ಪರಿಚಯ ಅನ್ನಪೂರ್ಣ ಮಲ್ಲಿಕಾರ್ಜುನ ಹೊಸಕೇರಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿದ್ದಾರೆ. ಸರೋಜಾ ರುದ್ರಪ್ಪ ಉಳ್ಳಾಗಡ್ಡಿ ಧಾರವಾಡದಲ್ಲಿದ್ದಾರೆ. ಶಕುಂತಲಾ ಈರಬಸಪ್ಪ ಚಿತ್ತವಾಡಗಿ ಬಾಗಲಕೋಟೆಯ ಶಿರೂರ ಗ್ರಾಮದಲ್ಲಿದ್ದಾರೆ.ಇನ್ನೂ ಯಜಮಾನ ನಿಧನದ ನಂತರ ಮಕ್ಕಳೊಂದಿಗೆ ಮಲ್ಲಾಪೂರ ಗ್ರಾಮದಲ್ಲಿ ಈರಮ್ಮಜ್ಜಿ ನೆಲೆಸಿದ್ದರು.

ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಬಂಧು ಬಳಗ ಅಲ್ಲದೇ ಮಲ್ಲಾಪೂರ ಗ್ರಾಮ ಸೇರಿದಂತೆ ಹೀಗೆ ಅಪಾರ ಬಂಧು ಬಳಗವನ್ನು ಈರಮ್ಮಜ್ಜಿ ಅಗಲಿದ್ದಾರೆ.ಅಜ್ಜಿಯ ನಿಧನಕ್ಕೆ ಸಾಕಷ್ಟು ಪ್ರಮಾಣ ದಲ್ಲಿ ಜನರು ಕಂಬನಿಯನ್ನು ಮೀಡಿದರು. ಇನ್ನೂ ಹಿರಿಯ ಜೀವಿಯ ಅಂತಿಮ ದರ್ಶನವನ್ನು ಮಾಜಿ ಶಾಸಕ ಐ ಕೆ ಪಟ್ಟಣಶೆಟ್ಟಿ ಸೇರಿದಂತೆ ಗ್ರಾಮದ ಮತ್ತು ಸುತ್ತ ಮುತ್ತಲಿನ ಜನರು ಅಪಾರ ಸಂಖ್ಯೆ ಯಲ್ಲಿ ಪಡೆದುಕೊಂಡರು.ಕೊನೆಗೆ ಅಜ್ಜಿಯ ಅಂತಿಮ ಸಂಸ್ಕಾರ ಗ್ರಾಮದ ರುದ್ರಭೂಮಿಯಲ್ಲಿ ಸಂಪ್ರದಾಯದಂತೆ ನೆರವೇರಿತು.ಮಲ್ಲಾಪೂರ ಗ್ರಾಮದ ಬಂಧುಗಳು ಸತ್ತಿಗೇರಿ, ಉಳ್ಳಾಗಡ್ಡಿ, ಕಾಚಟ್ಟಿ,ಪಟ್ಟಣಶೆಟ್ಟಿ ಹೊಸಕೇರಿ, ಬೆಲ್ಲದ, ಬರಡಿಶೆಟ್ಟರ್,ದೇಸಾಯಿ,ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.