ಹುಬ್ಬಳ್ಳಿ –
ಹುಬ್ಬಳ್ಳಿಯ ಹಿರಿಯ ಪೊಟೊ ಜರ್ನಲಿಸ್ಟ್ ಹೇಮಂತ್ ಅವರು ತಮ್ಮ ಕ್ಯಾಮೆರಾ ದಲ್ಲಿ ಸೆರೆ ಹಿಡಿದ ಮಾಸ್ಕ್ ಕುರಿತಾದ ಪೊಟೊ ವನ್ನು ಗುರುತಿಸಿ ನಾಡಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವಿಟರ್ ನಲ್ಲಿ ಪೊಟೊ ವನ್ನು ಪೊಸ್ಟ್ ಮಾಡಿದ್ದಾರೆ.

ರಾಜ್ಯದ ಜನರಿಗೆ ಮಾಸ್ಕ್ ಹಾಕುವ ವಿಚಾರದಲ್ಲಿ ಸಂದೇಶ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ತಮ್ಮ ಟ್ವಿಟರ್ ನಲ್ಲಿ ಹೇಮಂತ್ ಅವರು ತಗೆದ ಪೊಟೊ ವನ್ನು ಪೊಸ್ಟ್ ಮಾಡಿದ್ದಾರೆ.

ಒರ್ವ ಅಜ್ಜಿ ತಮ್ಮ ಮೊಮ್ಮಗಳಿಗೆ ಮಾಸ್ಕ್ ಹಾಕುತ್ತಿ ದ್ದಾರೆ.ಈ ಒಂದು ದೃಶ್ಯವನ್ನು ತಮ್ಮ ಕ್ಯಾಮೆರಾ ದಲ್ಲಿ ಹೇಮಂತ್ ಅವರು ಸೆರೆಹಿಡಿದಿದ್ದು ಈ ಒಂದು ಪೊಟೊ ವನ್ನು ಗುರುತಿಸಿ ನಾಡ ದೊರೆ ಪೊಸ್ಟ್ ಮಾಡಿದ್ದಾರೆ.

ಈ ಒಂದು ಪೊಟೊ ವನ್ನು ಗುರುತಿಸಿ ಪೊಸ್ಟ್ ಮಾಡಿದ್ದು ಸಂತೋಷದ ವಿಚಾರ ಎಂದು ಪೊಟೊ ಜರ್ನಲಿಸ್ಟ್ ಹೇಳಿದ್ದಾರೆ.