ಮೈಸೂರು –
ಉಡುಗೊರೆ ಯಾಗಿ ಬಂದಿದ್ದ 700 Kg ಬೆಳ್ಳಿ ಯನ್ನು ಕಾಣಿಕೆ ಯನ್ನಾಗಿ ನೀಡಿದ CM ಹಿಂದೂ ವಿರೋಧಿ ಸಿದ್ದರಾಮಯ್ಯ ಎನ್ನುವವರಿಗೆ ಉತ್ತರ ಕೊಟ್ಟ ನಾಡ ದೊರೆ ಹೌದು ಸಭೆ, ಸಮಾರಂಭ ಗಳಲ್ಲಿ ಉಡುಗೊರೆಯಾಗಿ ಬಂದಿದ್ದ 700 ಕೆಜಿ ಬೆಳ್ಳಿಯನ್ನು ಮಲೆ ಮಹದೇಶ್ವರನಿಗೆ ಕಾಣಿಕೆ ಯಾಗಿ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದೆಲ್ಲ ಆಪಾದಿಸುತ್ತಾರಲ್ಲ ಯಾವ ತ್ತಾದರೂ ಸಿದ್ದರಾಮಯ್ಯ ತರಹ 700 ಕೆಜಿ ಯಷ್ಟು ದೊಡ್ಡ ಪ್ರಮಾಣದ ಬೆಳ್ಳಿಯನ್ನು ದೇವಸ್ಥಾನಕ್ಕೆ ಕೊಟ್ಟಿದ್ದಾರಾ ಎಂದು ಹೇಳಿದವರು ಮತ್ಯಾರೂ ಅಲ್ಲ ಹುಣಸೂರು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್. ರಾಜ್ಯದಲ್ಲಿ 77 ಬೆಟ್ಟ ಗಳ ಒಡೆಯ ಉಘೇ ಉಘೇ ಅಂತಾನೆ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆಯುತ್ತಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಇರುವ ದೇವಸ್ಥಾನಗಳಲ್ಲಿ ಈ ಬೆಟ್ಟನ್ನೂ ಒಂದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದಿದ್ದ ಎಲ್ಲಾ ಉಡುಗೊ ರೆಗಳನ್ನು ಸೇರಿಸಿ ಸುಮಾರು 700 ಕೆ.ಜಿ. ಬೆಳ್ಳಿ ಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟಿದ್ದಾ ರೆಂದು ಇದಕ್ಕೆ ಪ್ರಚಾರವನ್ನೂ ಪಡೆಯಲಿಲ್ಲ ಎಂದು ಮಾಜಿ ಶಾಸಕ ಹೇಳಿದ್ದಾರೆ .
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಂವಾದದಲ್ಲಿ ಮಾತನಾಡಿದ ಅವರು, ಸಭೆ, ಸಮಾರಂಭಗಳಲ್ಲಿ ಉಡುಗೊರೆ ಬಂದಿತ್ತು. ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು. ಅದೆಲ್ಲ ವನ್ನೂ ಸಿಎಂ ಸಿದ್ದರಾಮಯ್ಯನವರು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟರು.
ಅದನ್ನು ಪ್ರಚಾರ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ನವರು ಹಿಂದೂ ದೇವರ ವಿರೋಧಿಗಳು ಎಂಬಂತೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ.ನಿಜಕ್ಕೂ ನಾವೇ ನಿಜವಾದ ದೈವ ಭಕ್ತರು ಮತ್ತು ಹಿಂದುಗಳು ಎಂದು ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗು ತ್ತಾರೆ ಎಂದರು.
ಸುದ್ದಿ ಸಂತೆ ನ್ಯೂಸ್ ಮೈಸೂರು…..