ಮೈಸೂರು –
ಗೃಹಲಕ್ಷ್ಮಿ ಯೋಜನೆ ಫೇಕ್ ಸರ್ಟಿಫಿಕೇಟ್ ಕಾಟ ಆರಂಭ ಗೊಂಡಿದೆ ಹೌದು ನಕಲಿ ಪ್ರಮಾಣ ಪತ್ರವನ್ನು ನೀಡುತ್ತಿದ್ದ ಸೈಬರ್ ಸೆಂಟರ್ ಮಾಲೀಕರೊಬ್ಬರನ್ನು ಮೈಸೂರಿನಲ್ಲಿ ಬಂಧನ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕ.
ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಮಾಲೀಕ ಸುರೇಶ್ ಕುಮಾರ್ ಬಂಧತ ನಾದವನಾಗಿದ್ದಾನೆ
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಸೈಬರ್ ಸೆಂಟರ್ ಮೇಲೆ ದಾಳಿ ಮಾಡಲಾಗಿದೆ.ಕೆಲವು ಫೇಕ್ ಸರ್ಟಿಫಿಕೇಟ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದು ಸುಕೇಶ್ ಕುಮಾರ್ ಎಂಬು ವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರ ದಾಳಿ ಮಾಡಿದ್ದಾರೆ
ನಕಲಿ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್‌ಗೆ ಬೀಗ ಜಡಿದಿದ್ದಾರೆ ಪೊಲೀಸರು.
ಮಹಿಳೆಯರಿಗೆ ತಿಂಗಳಿಗೆ 2000 ರೂ ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ತರ ಯೋಜನೆ ಗೃಹಲಕ್ಷ್ಮಿ.ಸಾಕಷ್ಟು ಮಹಿಳೆಯರು ನೊಂದಣಿ ಗಾಗಿ ಸೈಬರ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.
ಇದನ್ನೇ ಲಾಭ ಮಾಡಿಕೊಂಡ ಖದೀಮ ಸುರೇಶ್ ಕುಮಾರ್.ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪ ಡಿಸಿ ದೋಖಾ.ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿ ನಕುಲ್ ನೆಟ್ ವರ್ಲ್ಡ್ ಎಂಬ ಹೆಸರಿ ನಲ್ಲಿ ಅನಧಿಕೃತವಾಗಿ ಸೇವಾ ಕೇಂದ್ರ ಆರಂಭಿಸಿ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿರ ವುದು ಪೊಲೀಸರಿಗೆ ತಿಳಿದು ಬಂದಿದೆ.ಸಧ್ಯ ಸೈಬರ್ ಸೆಂಟರ್ ನ ಕಂಪ್ಯೂಟರ್ ಗಳನ್ನ ಸೀಜ್ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಮೈಸೂರು…..