ಧಾರವಾಡ –
ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮ ಪಂಚಾಯತಿ ಯನ್ನು ಬಿಜೆಪಿ ಪಕ್ಷ ತನ್ನ ಮಡಿಲಿಗೆ ಹಾಕಿಕೊಂಡಿದೆ. ಗ್ರಾಮ ಪಂಚಾಯತಿಯ ಒಟ್ಟು 26 ಸದಸ್ಯರ ಬಲಾಬಲವನ್ನು ಹೊಂದಿರುವ ಪಂಚಾಯತ ನಲ್ಲಿ ಹೆಚ್ಚು ಬಹುಮತವನ್ನು ಹೊಂದಿದ್ದ ಬಿಜೆಪಿ ಕೊನೆಗೂ ಸರಳವಾಗಿ ಗದ್ದುಗೆಯನ್ನು ತೆಕ್ಕೆಗೆ ಹಾಕಿಕೊಂಡಿದೆ.
ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಎರಡು ಸ್ಥಾನದಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿ ಗಳು ಕೊನೆಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಶ್ರೀಮತಿ ಗಂಗವ್ವ ರವಿ ನಿರಂಜನ, ಉಪಾಧ್ಯಕ್ಷರಾಗಿ ಆತ್ಮಾನಂದ ಹುಂಬೇರಿ ಆಯ್ಕೆಯಾದರು.
ಇನ್ನೂ ಪ್ರಮುಖವಾಗಿ ಇಂದು ನಡೆದ ಚುನಾವಣೆಯಲ್ಲಿ ಸರಳವಾಗಿ ಯಾವುದೇ ರೀತಿಯ ಗದ್ದಲ ಗಲಾಟೆ ಇಲ್ಲದೇ ಎರಡು ಸ್ಥಾನಗಳಿಗೆ ಶಾಂತಿಯುತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಧಾರವಾಡ ಗ್ರಾಮೀಣ ಯುವ ಮೋರ್ಚಾ ಘಟಕದ ಅಧ್ಯಕ್ಷ ಶಂಕರ್ ಕೋಮಾರ ದೇಸಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಕೊನೆಗೂ ಪಂಚಾಯತ ಗದ್ದುಗೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇನ್ನೂ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಪ್ರೇಮಾ ಕೋಮಾರದೇಸಾಯಿ,ಬಿಜೆಪಿ ತಾಲ್ಲೂಕು ಅಧ್ಯಕ್ಷ ರುದ್ರಪ್ಪ ಹರಿವಾನ,ಯುವ ಮೋರ್ಚಾ ಘಟಕದ ಅಧ್ಯಕ್ಷ ಶಂಕರ್ ಕೋಮಾರ ದೇಸಾಯಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.