ಶಿರಗುಪ್ಪಿ-
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಧಾರವಾಡದ ಶಿರಗುಪ್ಪಿಯಲ್ಲಿ ರೈತರು ಪ್ರತಿಭಟನೆ ಮಾಡಿದರು. ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಶಿರಗುಪ್ಪಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಇದೇ ವೇಳೆ ರೈತ ವಿರೋಧಿ ಸಂಬಂಧಿತ ಕಾನೂನುಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಹಾಗೇ ರೈತರ ಬೇಡಿಕೆಗಳನ್ನು ಮೋದಿ ಸರಕಾರ ಕೂಡಲೇ ಈಡೇರಿಸುಂತೆ ರೈತರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ರೈತರು ಶಿರಗುಪ್ಪಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಶಿವಣ್ಣ ಹುಬ್ಬಳ್ಳಿ, ಅಮೃತ ಇಜಾರಿ, ಮಹೇಶ ಪತ್ತಾರ, ಗುರಣ್ಣ ದೇಸಾಯಿ, ಗುರನಗೌಡ ಬೆಳವಟಗಿ, ಶೇಖಣ್ಣ ನಾಯ್ಕರ, ಶಿದ್ದಪ್ಪ ಹಳ್ಳೂರು ಮತ್ತು ಶಿರಗುಪ್ಪಿ ಭಾಗರ ಸುತ್ತಮುತ್ತಲಿನ ರೈತರು ಹೋರಾಟಗಾರರು ಭಾಗವಹಿಸಿದ್ದರು.