ಹುಬ್ಬಳ್ಳಿ – ನವನಗರದಲ್ಲಿನ ವಕೀಲರ ಮತ್ತು ಇನ್ಸ್ಪೆಕ್ಟರ್ ನಡುವೆ ನಡೆದ ಜಟಾಪಟಿ ಪ್ರಕರಣದ ತನಿಖೆಯನ್ನು ಬೇರೆ ಇನ್ಸ್ಪೆಕ್ಟರ್ ಗೆ ನೀಡಲಾಗಿದೆ. ವಿನೋದ ಪಾಟೀಲ ಮತ್ತು ಇನ್ನಿಬ್ಬರ ನವನಗರದ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಯೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಈ ಮೂವರ ಮೇಲೆ ನವನಗರ ಠಾಣೆಯ ಇನ್ಸ್ಪೆಕ್ಟರ್ ಪ್ರಭು ಸೂರಿನ FIR ದಾಖಲು ಮಾಡಿದ್ದಾರೆ. ದೂರನ್ನು ನವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನೀಡಿದ್ದಾರೆ.ದೂರನ್ನು ದಾಖಲು ಮಾಡಿದ್ದು ಇವರೇ ದೂರು ದಾಖಲು ಮಾಡಿದ ಹಿನ್ನೆಲೆಯಲ್ಲಿ ತನಿಖೆಗೆ ಯಾರು ಕೂಡಾ ಆಕ್ಷೇಪ ವ್ಯಕ್ತಪಡಿಸಬಾರದು ಎಂದುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಈ ಒಂದು ಪ್ರಕರಣದ ತನಿಖೆಯನ್ನು ಹುಬ್ಬಳ್ಳಿಯ ವಿದ್ಯಾನಗರ ಇನ್ಸ್ಪೆಕ್ಟರ್ ಆನಂದ ವನಕುದರಿ ಅವರಿಗೆ ವಹಿಸಲಾಗಿದೆ.
ಡಿಸಿಪಿ ರಾಮರಾಜನ್ ಈ ಒಂದು ತನಿಖೆಯ ಜವಾಬ್ದಾರಿಯನ್ನು ವಿದ್ಯಾನಗರ ಇನ್ಸ್ಪೆಕ್ಟರ್ ಗೆ ನೀಡಿ ಜವಾಬ್ದಾರಿ ವಹಿಸಿದ್ದಾರೆ. ಕೂಡಲೇ ಪ್ರಕರಣದ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಿದ್ದಾರೆ.ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಹುಬ್ಬಳ್ಳಿಯ ಉತ್ತರ ವಿಭಾಗದ ಎಸಿಪಿ ಶಂಕರ ರಾಗಿ ನವನಗರ ಪೊಲೀಸ್ ಠಾಣೆಗೆ ಆಗಮಿಸಿ ಪರಿಶೀಲನೆ ನಡೆಸಿದರು. ಇನ್ಸ್ಪೆಕ್ಟರ್ ಪ್ರಭು ಸೂರಿನ್ ಮತ್ತು ಸಿಬ್ಬಂದಿ ಗಳೊಂದಿಗೆ ಸಭೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.ಅಲ್ಲದೆ ಹುಬ್ಬಳ್ಳಿಯ ವಿದ್ಯಾನಗರ ಇನ್ಸ್ಪೆಕ್ಟರ್ ಆನಂದ್ ವನಕುದರಿ ಅವರಿಗೆ ಎಸಿಪಿ ಶಂಕರ್ ರಾಗಿ ಕೆಲವೊಂದಿಷ್ಟು ಮಾಹಿತಿಯನ್ನು ನೀಡಿದರು ಅಲ್ಲದೇ ಶೀಘ್ರದಲ್ಲೇ ತನಿಖೆ ಸೂಚಿಸಿದರು.