ಧಾರವಾಡ
ಪೊಲೀಸರಿಂದಲ್ಲೇ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ.ಸಾಮೂಹಿಕ ವರ್ಗಾವಣೆಗೆ ಒತ್ತಾಯಿಸಿ ಪೊಲೀಸರೇ ಪ್ರತಿಭಟನೆ
ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಿಗೆ ರಕ್ಷಣೆ ನೀಡುತ್ತಿದ್ದ, ಪೊಲೀಸರೇ ಈಗ ಸಾಮೂಹಿಕ ವರ್ಗಾವಣೆಗೆ ಮಾಡಿ ಎಂದು ಪ್ರತಿಭಟನೆ ಮಾಡಿದರು. ಹೌದು ಹುಬ್ಬಳ್ಳಿಯ ನವನಗರ ಪೊಲೀಸ್ ಅಧಿಕಾರಿ ಮತ್ತು ವಕೀಲರು ನಡುವೆ ನಡೆದ ಗಲಾಟೆ ಈಗ ಬೇರೆ ರೀತಿಯ ರೂಪ ಪಡೆದುಕೊಳ್ಳುತ್ತಿದೆ.
ಬೆಳಿಗ್ಗೆ ಧಾರವಾಡದಲ್ಲಿ ವಕೀಲರು ಮೇಲೆ ಪೊಲೀಸರ ಕ್ರಮವನ್ನು ಖಂಡಿಸಿ ಪೊಲೀಸರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಇತ್ತ ನವನಗರ ಪೊಲೀಸರು ನಮ್ಮನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ಎಂದು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಠಾಣೆಯಲ್ಲಿ ನಡೆದಿದೆ. ನಗರದ ಎಪಿಎಂಸಿ ಠಾಣೆಯ ಎದುರು ಜಮಾಯಿಸಿರುವ 30 ಕ್ಕೂ ಹೆಚ್ಚು ಠಾಣೆಯ ಸಿಬ್ಬಂದಿಗಳು ಈಗ ಠಾಣೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ಕಳೆದ ನವೆಂಬರ್ 25 ರಂದು, ನ್ಯಾಯವಾದಿ ವಿನೋದ್ ಪಾಟೀಲ್‌ರನ್ನು, ಇನ್ಸ್ ಪೆಕ್ಟರ್ ಪ್ರಭು ಸೂರಿನ್ ಅವರು ಅವಮಾನ ಮಾಡಿ, ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಹಾಗೂ ಸೂಕ್ತ ಕ್ರಮಕ್ಕೆ ಅಗ್ರಹಿಸಿ ಧಾರವಾಡದಲ್ಲಿ ವಕೀಲರು ಪ್ರತಿಭಟನೆ ಮಾಡಿ. ಸೋಮುವಾರದ ವರೆಗೆ ಗಡುವು ನೀಡಿದರು. ಈ ಕಾರಣದಿಂದಾಗಿ ಈಗ ಪೊಲೀಸರೇ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಸಾಮೂಹಿಕ ವರ್ಗಾವಣೆ ಮಾಡಿ ಎಂದು ಈಗ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.