ನವಲಗುಂದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಯು.ಎಮ್.ನದಾಫ್ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕಾರ – ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಗೌರವ

Suddi Sante Desk

ಧಾರವಾಡ –

ನವಲಗುಂದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ನಂ – 04 ಬಸವೇಶ್ವರ ನಗರದ ಶಿಕ್ಷಕಿಯರಾದ ಶ್ರೀಮತಿ ಯು.ಎಮ್.ನದಾಫ್ ಗುರುಮಾತೆಯವರಿಗೆ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿ ಅಭಿನಂದಿಸಲಾಯಿತು.ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ನವಲಗುಂದ ವತಿಯಿಂದ ಈ ಒಂದು ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗಿತ್ತು.ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರವನ್ನು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ಕ್ರಿಯಾಶೀಲ ಶಿಕ್ಷಕ ಶಿಕ್ಷಕಿಯರನ್ನು ಆಯ್ಕೆ ಮಾಡಿ ಶಿಕ್ಷಕ-ಶಿಕ್ಷಕಿಯರು ಸೇವೆ ಮಾಡುತ್ತಿರುವ ಶಾಲೆಗೆ ಹೋಗಿ ಆಯಾ ಶಾಲೆಯ ಮುದ್ದು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಲೆಯ ಪ್ರಧಾನ ಗುರುಗಳು ಹಾಗೂ ಗುರುಬಳಗ,ಎಸ್.ಡಿ.ಎಮ್.ಸಿ ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮ ಆಯೋಜಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಚಾಲನೆಗೊಳಿಸಲಾಗಿದೆ

ಗುರುಮಾತೆಯವರು ಸಂಪನ್ಮೂಲ ಶಿಕ್ಷಕಿಯಾಗಿ ಸೇವೆ ಗೈದವರು ಅಲ್ಲದೆ ಗ್ರಾಮಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿ ಸಲು ಇಲಾಖೆಯ ವಿನೂತನ ಕಲಾತಂಡದಲ್ಲಿ ವಿವಿಧ ಪಾತ್ರಗಳನ್ನು ಮಾಡುತ್ತಾ ಶಿಕ್ಷಣದ ಮಹತ್ವದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಅಮೋಘ ಸೇವೆ ಪರಿಗಣಿಸಿ ಸಂಘವು ಅವರಿಗೆ ಪುರಸ್ಕಾರ ನೀಡಿ ಗೌರವಿಸ ಲಾಯಿತು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಸ್ಫಾಖ್ ಅಲಿ. ಚಾಹುಸೆನ್ ಮುಖ್ಯ ಅತಿಥಿಗಳಾಗಿ ಎಸ್. ಸಿ. ಹೊಳೆಯ ಣ್ಣವರ ಎಸ್.ಎಮ್.ಬೆಂಚಿಕೇರಿ ಪ್ರಧಾನ ಗುರುಮಾತೆಯ ವರಾದ ಶ್ರೀಮತಿ ಶಾಹಿನಾಕೌಸರ.ತಟಗಾರ ಬಿ.ಎಮ್. ಕಲಬುರ್ಗಿ.ಎಮ್.ಬಿ.ಪವಾಡಶೆಟ್ಟರ, ಬಿ.ವ್ಹಿ.ಅಂಗಡಿ ಹಾಗೂ ಶಾಲಾ ಗುರುಗಳು,ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.