ಹುಬ್ಬಳ್ಳಿ –
ನ್ಯಾಯವಾದಿ ವಿನೋದ ಪಾಟೀಲ ಬಂಧನದಿಂದ ನವನಗರದಲ್ಲಿನ ಪೊಲೀಸರು ಮತ್ತು ವಕೀಲರ ನಡುವಿನ ಸಂಘರ್ಷ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ವಿನೋದ ಪಾಟೀಲ ಬಂಧನದಿಂದ ಈಗಾಗಲೇ ವಿಕೋಪಕ್ಕೆ ತಿರುಗಿದ ನವನಗರದ ಪೊಲೀಸರು ಹಾಗೂ ವಕೀಲರ ನಡುವಿನ ಸಂಘರ್ಷವನ್ನು ತಿಳಿಗೊಳಿಸಲು ಹಿರಿಯ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.ಈಗಾಗಲೇ ಐಜಿಪಿ ರಾಘವೇಂದ್ರ ಸುಹಾಸ್ ಅವರು ಎರಡು ದಿನಗಳಿಂದ ಧಾರವಾಡದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈಗಾಗಲೇ ಈ ಒಂದು ಪ್ರಕಣದ ತನಿಖೆ ಒಂದು ಕಡೆ ನಡೀತಾ ಇದ್ದರೆ ಮತ್ತೊಂದು ಕಡೆ ಸೋಮವಾರದ ಒಳಗಾಗಿ ಪೊಲೀಸ್ ಅಧಿಕಾರಿಯ ಮೇಲೆ ಸೂಕ್ತ ಕ್ರಮಕ್ಕೇ ಗಡುವು ನೀಡಿದ್ದು ಇದರಿಂದ ಪೊಲೀಸ್ ಹಿರಿಯ ಅಧಿಕಾರಿಗಳು ಶನಿವಾರ ತಡರಾತ್ರಿ ಅಜ್ಞಾತ ಸ್ಥಳದಲ್ಲಿ ಸಂಧಾನ ಸಭೆ ನಡದಿದೆ. ಸಭೆಯಲ್ಲಿ ಕೆಲ ಚರ್ಚೆಗಳಾಗಿದ್ದು ನವನಗರ ಠಾಣೆಯ ಕೆಲ ಸಿಬ್ಬಂದಿಯನ್ನು ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡುವ ಕ್ರಮವನ್ನು ಇಲಾಖೆ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದವು.ಶನಿವಾರ ಅಜ್ಞಾತ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ವಕೀಲರ ಸಂಘದ ಹಿರಿಯ ಪದಾಧಿಕಾರಿಗಳ ನಡುವೆ ಸಂಧಾನ ಮಾತುಕತೆ ಜರುಗಿತು. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಂಥದ್ದೊಂದು ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ವಕೀಲ ವಿನೋದ ಪಾಟೀಲ ಬಂಧನ ಹಿನ್ನೆಲೆಯಲ್ಲಿ ನವನಗರ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಕೀಲರು ಬೀದಿಗಿಳಿದು ಪ್ರತಿಭಟಿಸಿದ್ದರು.ಅಲ್ಲದೇ ಸೋಮವಾರದವರೆಗೆ ಗಡುವನ್ನು ಈಗಾಗಲೇ ನೀಡಿದ್ದಾರೆ. ಇದರ ಬೆನ್ನಲ್ಲೇ ಎಪಿಎಂಸಿ ಠಾಣೆ ಪೊಲೀಸರು ವರ್ಗಾವಣೆಗೆ ಸಾಮೂಹಿಕ ಅರ್ಜಿ ಸಲ್ಲಿಸಿ ಪ್ರತಿಭಟನೆ ಮಾಡಿದ್ದರು. ಇದಕ್ಕೇ ಹಿರಿಯ ಅಧಿಕಾರಿಗಳು ಕೂಡಾ ಸ್ಪಂದಿಸಿ ನಿಮ್ಮೊಂದಿಗೆ ನಾವಿದ್ದೇವಿ ನಿಮಗೆ ಅನ್ಯಾಯವಾಗೊದನ್ನು ನಾವು ಬಿಡೊದಿಲ್ಲ ಎಂದು ಧೈರ್ಯವನ್ನು ಹೇಳಿದ್ದರು. ಇವೆಲ್ಲದರ ನಡುವೆ ಈ ಕುರಿತು ತನಿಖೆ ಕೈಗೊಳ್ಳುವಂತೆ ವಿದ್ಯಾನಗರ ಠಾಣೆ ಇನ್‌ಸ್ಟೆಕ್ಟರ್ ಆನಂದ ವನಕುದರಿ ಯವರಿಗೆ ನೀಡಲಾಗಿದೆ. ತನಿಖೆ ಕೂಡಾ ಆರಂಭವಾಗಿದೆ. ಇನ್ನೂ ಹುಬ್ಬಳ್ಳಿ ಧಾರವಾಡದಲ್ಲಿ ನ್ಯಾಯವಾದಿಗಳೊಂದಿಗೆ ಒಂದಿಷ್ಟು ಪೊಲೀಸ್ ಇಲಾಖೆಯ ಗದ್ದಲ ಗಲಾಟೆಗಳಾಗುತ್ತಿದ್ದು ಸಧ್ಯ ನವನಗರದ ಪ್ರಕರಣವು ಕೂಡಾ ಸಾಕ್ಷಿಯಾಗಿದ್ದು ‘ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಇಂಥ ಘಟನೆಗಳು ಮರುಕಳಿಸಬಾರದು.ವಕೀಲರು ಹಾಗೂ ಪೊಲೀಸರು ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಉತ್ತಮ.
ಪ್ರಕರಣದಲ್ಲಿ ಯಾರೇ ತಪ್ಪೆಸಗಿದ್ದರೂ ಅವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಐಜಿಪಿ ರಾಘವೇಂದ್ರ ಸುಹಾಸ್ ಸಭೆಯಲ್ಲಿ ಭರವಸೆ ನೀಡಿದ್ದಾರೆ ಹೀಗಾಗಿ ಸಂಧಾನ ಸಭೆಯನ್ನು ಮಾಡಲಾಯಿತು. ನೀವು ಕೈಗೊಂಡಿರುವ ನಿರ್ಧಾರಗಳ ಪ್ರತಿಯೊಂದನ್ನು ನಮಗೆ ಲಿಖಿತ ರೂಪದಲ್ಲಿ ಕೊಡಿ ಅವುಗಳನ್ನು ನಾವು ಸಂಘದಲ್ಲಿ ಚರ್ಚೆ ಮಾಡಿ ತಿರ್ಮಾನಿಸುತ್ತೆವೆ ಎಂದು ವಕೀಲರ ಸಂಘದ ಮುಖಂಡರು ಐಜಿಪಿ ಗೆ ಹೇಳಿದ್ದಾರೆ ಇವತ್ತು ಸಂಜೆಯೊಳಗಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದ್ದಿಗಳ ಮೇಲೆ ಕೈಗೊಂಡ ಕ್ರಮಗಳ ಪ್ರತಿ ಸಿಗದಿದ್ದರೇ ಮತ್ತೇ ನಾಳೆ ಬೆಳಿಗ್ಗೆ 10 ಘಂಟೆಗೆ ಧಾರವಾಡದಲ್ಲಿ ವಕೀಲರ ಸಭೆ ಕರೆದು ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ ಕುರಿತಂತೆ ಸಂಘದಲ್ಲಿ ಚರ್ಚಿಸಿ ಸಭೆ ಮಾಡುವ ಮುನ್ನವೇ ಪೊಲೀಸ್ ಹಿರಿಯ ಅಧಿಕಾರಿಗಳು ಗಬ್ಬಿಯ ಮೇಲೆ ಬ್ರಹ್ಮಾಸ್ತ ಮಾಡಿದಂತೆ ತಮ್ಮ ಸಿಬ್ಬಂದ್ದಿಯ ಮೇಲೆ ಕ್ರಮವನ್ನು ಕೈಗೊಳ್ಳುವ ಬಹುತೇಕ ಲಕ್ಷಣಗಳು ಕಾಣುತ್ತಿವೆ. ಸೋಮವಾರ ತಮ್ಮ ಅಭಿಪ್ರಾಯ ತಿಳಿಸುವುದಾಗಿ ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು ಇತ್ತ ಈ ನಡುವೆ ನವನಗರ ಠಾಣೆಯ ಕೆಲ ಪೊಲೀಸರನ್ನು ಬೇರೆಡೆ ವರ್ಗಾಯಿಸುವ ತೀರ್ಮಾನವನ್ನು ಪೊಲೀಸ್ ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಮುಂದೇನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸಂಧಾನ ಸಭೆಯಲ್ಲಿ ಐಜಿಪಿ ರಾಘವೇಂದ್ರ ಸುಹಾಸ್ ರೊಂದಿಗೆ ಡಿಸಿಪಿ ಯವರಾದ ರಾಮರಾಜನ್, ಮತ್ತು ಬಸರಗಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಘೋಡ್ಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.