ಟೋಕಿಯೊ –
ಹತ್ತು ವರ್ಷಗಳ ನಂತರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟು ಒಬ್ಬರು ಚಿನ್ನದ ಪದಕವನ್ನು ಮುಡಿಗೆ ಹಾಕಿಕೊಂಡು ಐತಿಹಾಸಿಕ ದಾಖಲೆಯೊಂದಿಗೆ ಸಾಧನೆಯನ್ನು ಮಾಡಿದ್ದಾರೆ. ಹೌದು ಈ ಒಂದು ಗೆಲುವಿನೊಂದಿಗೆ ಭಾರತದ ಬಂಗಾರದ ಬರವನ್ನು ಇವರು ನೀಗಿಸಿದ್ದಾರೆ.
ಹೌದು ಇಂದು ನಡೆದ ಪುರುಷರ ಜಾವೆಲಿನ್ ನಲ್ಲಿ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ.ಇಂದು ನಡೆದ ಫೈನಲ್ ಪಂದ್ಯ ದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್,ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು.ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು.
ನಾಲ್ಕನೇ ಸುತ್ತಿನಲ್ಲಿ ಫೌಲ್ ಆಯಿತು. ಐದನೇ ಸುತ್ತು ಕೂಡಾ ಫೌಲ್ ಆಯಿತು.ಅಂತಿಮ ಸುತ್ತಿನ ವರೆಗೂ ಗರಿಷ್ಠ ದೂರ ಕಾಪಾಡಿದ ನೀರಜ್ ಚೋಪ್ರಾ ಜಯಶಾಲಿಯಾದರು.
ಇನ್ನೂ ಭಾರತದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದಿತು. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಬಂಗಾರದ ಪದಕ ಗೆದ್ದುಕೊಂಡಿದ್ದರು.