ಧಾರವಾಡ –
ಸೋರುತಿಹುದು ಧಾರವಾಡದ ಹೊಸ ಬಸ್ ನಿಲ್ದಾಣ ವ್ಯಾಪಾರಿಗಳ ಪರದಾಟ….ಲಕ್ಷ ಲಕ್ಷ ಬಾಡಿಗೆ ಬಂದ್ರು ಹೈಟೇಕ್ ಆಗದ ಹೊಸ ಬಸ್ ನಿಲ್ದಾಣ…..ಇದು ಧಾರವಾಡ ಹೊಸ ಬಸ್ ನಿಲ್ದಾಣದ ಅವ್ಯವಸ್ಥೆ
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಣಿಜ್ಯ ಮಳಿಗೆಗಳಿದ್ದು ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಬಾಡಿಗೆ ಬರುತ್ತಿದೆ. ಇಪ್ಪತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು ಇನ್ನೊಂದೆಡೆ ಒಂದು ಭಾಗವನ್ನು ಟೆಂಡರ್ ನೀಡಲಾಗಿದ್ದು ತಿಂಗಳಾ ಗುತ್ತಿದ್ದಂತೆ ಲೆಕ್ಕ ಮಾಡಿದ್ರೆ ಕೋಟ್ಯಾಂತರ ರೂಪಾಯಿ ಬಾಡಿಗೆ ರೂಪದಲ್ಲಿ ಬರುತ್ತದೆ ಹೀಗಿರುವಾಗ ಇಲಾಖೆ ಯಿಂದ ಹಣ ಬಳಕೆ ಮಾಡಿಕೊಳ್ಳದೇ ಬಾಡಿಗೆಯಿಂದ ಬರುವ ಇದೇ ಹಣವನ್ನು ತಗೆದುಕೊಂಡು ಒಂದಿಷ್ಟು ಹೊಸ ಬಸ್ ನಿಲ್ದಾಣವನ್ನು ಅಭಿವೃದ್ದಿ ಮಾಡಿದ್ರೆ ಸಾಕು ಹೈಟೇಕ್ ಆಗುತ್ತದೆ
ಪ್ರತಿದಿನ ಇಲ್ಲಿಗೆ ಬರುವ ಲಕ್ಷಾಂತರ ಪ್ರಯಾಣಿಕರು ಮೆಚ್ಚಿಕೊಂಡು ಹೋಗುತ್ತಾರೆ.ಇನ್ನೂ ಇಲ್ಲಿನ ರಸ್ತೆಯನ್ನು ಬಿಟ್ಟರೆ ಇನ್ನೂಳಿದಂತೆ ಎಲ್ಲವೂ ಸರಿಯಾಗಿದ್ದರೂ ಕೂಡಾ ನಿಲ್ದಾಣದ ಮಾಳಿಗೆ ಸೋರುತ್ತಿದೆ ಹೌದು ಮಳೆ ಬಂದರೆ ಸಾಕು ನಿಲ್ದಾಣದ ಮೇಲಿನ ನೀರು ಸರಿಯಾಗಿ ಹೋಗದೆ ದಾರಿ ಇಲ್ಲದ ಕಾರಣ ಸ್ಲಾಬ್ ನಲ್ಲಿ ಬಂದು ಕೆಳಗಡೆ ಬರುತ್ತದೆ ಹೀಗಾಗಿ ವಾಣಿಜ್ಯ ಮಳಿಗೆಗಳಿಗೆ ತೊಂದರೆಯಾಗಿದ್ದರೆ ಇನ್ನೊಂದೆಡೆ ನಿಲ್ದಾಣದ ಹಲವೆಡೆ ನೀರು ಸೋರುತ್ತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ
ಹೆಸರಿಗೆ ಮಾತ್ರ ಬಸ್ ನಿಲ್ದಾಣವಾಗಿದ್ದು ಇದ್ದು ಇಲ್ಲ ದಂತಾಗಿದೆ.ಈ ಒಂದು ಕುರಿತಂತೆ ಇಲ್ಲಿನ ವ್ಯಾಪಾರಿಗಳು ಸಾರ್ವಜನಿಕರು ದೂರು ನೀಡಿದ್ರು ಕೂಡಾ ಯಾರು ನೋಡುತ್ತಿಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತಿಲ್ಲ ಹೀಗಾಗಿ ಮಳೆ ಬಂದರೆ ಸಾಕು ಥಟ ಥಟ ಅಂತಾ ನೀರು ಸೋರುತ್ತಾ ಹೊಸ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಯನ್ನು ತೋರಿಸುತ್ತಿದ್ದು ಸಧ್ಯ ಬಂದಿರುವ ಉತ್ಸಾಹಿ ಡಿಸಿಯವರು ಈ ಒಂದು ಸಮಸ್ಯೆಯತ್ತ ಗಮನ ಹರಿಸಿ ಸ್ಪಂದಿಸುತ್ತಾರೆ ಎಂಬೊದನ್ನು ನೋಡಬೇಕಿದೆ.
ಇದರೊಂದಿಗೆ ಲಕ್ಷ ಲಕ್ಷ ಬಾಡಿಗೆ ತಗೆದುಕೊಳ್ಳುತ್ತಾ ದುಡಿದು ತಿನ್ನುವವರನ್ನು ಸುಲಿದು ತಿನ್ನುವವರ ಮೇಲೆ ಕೂಡಲೇ ಕ್ರಮವನ್ನು ಕೈಗೊಳ್ಳಿ ಈ ಒಂದು ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇಧ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……