BRTS ಸಮಸ್ಯೆ ಗೆ ಹೊಸ ಪ್ಲಾನ್ ಏನಾದರೂ ಸಮಸ್ಯೆ ಆದರೆ ಕೂಡಲೇ ವಾಟ್ಸ್ ಆಪ್ ಗೆ ಪೊಟೊ ಕಳಿಸಿ ಸಮಸ್ಯೆ ಹಂಚಿಕೊಳ್ಳಿ…..

Suddi Sante Desk

ಹುಬ್ಬಳ್ಳಿ ಧಾರವಾಡ –

BRTS ಸೇವೆಯಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಸ್ನೇಹಿಯಾಗಿ ನೀಡಲು ನಿರ್ಧರಿಸಲಾಗಿದ್ದು ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಟೋಲ್ ಫ್ರೀ ನಂಬರ್ ಅಥವಾ ವಾಟ್ಸಾ ಆಪ್ ಮೂಲಕ ತಮ್ಮ ಸಮಸ್ಯೆಗಳನ್ನು ಕಂಟ್ರೋಲ್ ರೂಮ್ ಗೆ ಹಂಚಿಕೊಳ್ಳಬಹುದಾಗಿದೆ. ಹೌದು ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯದಲ್ಲಿ ತ್ವರಿತ ಸಾರಿಗೆ ಸೇವೆ ಕಲ್ಪಿಸುವ ಸದುದ್ದೇಶದಿಂದ ಜಾರಿಗೆ ತಂದಿ ರುವ ಬಿಆರ್ಟಿಎಸ್ ಸೇವೆಯಲ್ಲಿ ಸಾರ್ವಜನಿಕರು ಒಂದಿ ಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿ ದ್ದಾರೆ.ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗೆ ಸೂಕ್ತ ಕ್ರಮಗಳನ್ನು ಜರುಗಿಸುವ ಹಾಗೂ ಕುಂದುಕೊರತೆಗಳನ್ನು ನಿವಾರಿಸಲು BRTS ನಿರ್ಧಾರ ಮಾಡಿದೆ.

ಈ ಹಿಂದೆ ಚಿಗರಿ ಬಸ್ ಸೇವೆಯಲ್ಲಿ ಕೆಲವೊಂದು ನ್ಯೂನತೆ ಗಳನ್ನು ಅನುಭವಿಸುವ ಮೂಲಕ ಜನರು ಪ್ರಯಾಣ ಮಾಡಬೇಕಾಗಿತ್ತು ಆದರೆ ಈಗ ಯಾವುದೇ ಸಮಸ್ಯೆ ಇದ್ದರೂ ಟೋಲ್ ಫ್ರೀ ನಂಬರ್,ವಾಟ್ಸ್ ಆಪ್ ಮೂಲಕ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದಾಗಿದೆ.ಸ್ವಚ್ಚತೆ, ಸಿಬ್ಬಂದಿ ಅನುಚಿತ ವರ್ತನೆ,ಸಮಯದಲ್ಲಿ ವ್ಯತ್ಯಾಸ, ಸಂಚಾರ ನಿಯಮ ಉಲ್ಲಂಘನೆ ಹೀಗೆ ಎಲ್ಲ ರೀತಿಯ ಕುಂದುಕೊರತೆಗಳನ್ನು BRTS ಕಂಟ್ರೋಲ್‌ ರೂಮ್ ಗಮನಕ್ಕೆ ತರುವ ಕಾರ್ಯವನ್ನು ಮಾಡಬಹುದಾಗಿದೆ.

ಇನ್ನೂ ಬಿ.ಆರ್.ಟಿ.ಎಸ್ ಸಾರ್ವಜನಿಕ ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆ ಹಾಗೂ ಕುಂದು ಕೊರತೆಗಳು ಕಂಡುಬಂದಲ್ಲಿ 9611537436 ನಂಬರ್ ಗೆ ವಿಡಿಯೋ ಹಾಗೂ ಪೋಟೋ ಕಳಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹು ದಾಗಿದೆ. ಅಲ್ಲದೇ 1800 5991010 ಸಂಖ್ಯೆಗೆ ಕರೆ ಮಾಡುವ ಮೂಲಕ ಸಮಸ್ಯೆಗಳನ್ನು ಕೂಡ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಕೈ ಜೋಡಿಸಿ ಎಂಬುವುದು ಬಿ.ಆರ್.ಟಿ.ಎಸ್ ಯೋಜನೆ ಉದ್ದೇಶವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.