ಧಾರವಾಡ –
ದೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈತರ ಹಿತವನ್ನು ಮರೆತು, ರೈತರಿಗೆ ವಿರುದ್ಧವಾದ, ರೈತ ಮರಣ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದನ್ನು ಉಗ್ರವಾಗಿ ಪ್ರತಿಭಟಿಸುತ್ತಾ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ ಉಪಸ್ಥಿತಿಯಲ್ಲಿ ಮಹಿಳಾ ಕಾಂಗ್ರೇಸ್ ನಡಿಗೆ ಅನ್ನದಾತ ಬಳಿಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ದೀಪಾ ನಾಗರಾಜ ಗೌರಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಈ ಒಂದು ಮಾಹಿತಿಯನ್ನು ನೀಡಿದ್ದಾರೆ. ಡಿಸೆಂಬರ್ 23 ರಂದು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ನಾಗರಾಜ್ ಗೌರಿ ಯವರ ನೇತೃತ್ವದಲ್ಲಿ ವಿಭಿನ್ನವಾದಂತಹ ಹಾಗೇ ವಿನೂತನವಾದಂತಹ ಪ್ರತಿಭಟನೆಯನ್ನು ಕೇಂದ್ರ ಸರ್ಕಾರದ ವಿರುದ್ಧ ಡಿಸೆಂಬರ್ 23 ರಂದು ಹುಬ್ಬಳ್ಳಿಯಲ್ಲಿ ನಾಳೆ ವಿಶ್ವ ರೈತರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ನಮ್ಮ ಬೆಂಬಲ ಅನ್ನದಾತರ ಹೋರಾಟಕ್ಕೆ ಎನ್ನುವ ಘೋಷಣೆಯೊಂದಿಗೆ ” ಮಹಿಳಾ ಕಾಂಗ್ರೆಸ್ ನ ನಡಿಗೆ ಅನ್ನದಾತರ ಬಳಿಗೆ” ಎನ್ನುವಂತಹ ಶೀರ್ಷಿಕೆ ಅಡಿಯಲ್ಲಿ ವಿನೂತನವಾದಂತಹ ಕಾರ್ಯಕ್ರಮವನ್ನು ನಾಳೆ 23.12.2020 12.00 ಮಧ್ಯಾಹ್ನ ನವಲೂರ ನ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನೂ ಈ ಪ್ರತಿಭಟನೆಗೆ ಕಾಂಗ್ರೆಸ್ ನ ಮುಖಂಡರು ಎಲ್ಲ ಘಟಕದ ಅಧ್ಯಕ್ಷರು,ಮಹಿಳಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಕಮಿಟಿಯ ಎಲ್ಲ ಪದಾಧಿಕಾರಿಗಳು, ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ.