ಬೆಳಗಾವಿ -
ಬೆಳಗಾವಿಯಲ್ಲಿ ಕಂಗೊಳಿಸಿದ Big Mishra
ಮಧುವಣಗಿತ್ತಿಯಂತೆ ಸಿಂಗಾರಗೊಂಡ Big Mishra ಫ್ಯಾಮಿಲಿ ರೆಸ್ಟೋರೆಂಟ್ ಹೌದು ರುಚಿ, ಪರಂಪರೆ ಹಾಗೂ ಆತಿಥ್ಯದ ಹೊಸ ಅನುಭವ ನೀಡುವ ಉದ್ದೇಶ ದೊಂದಿಗೆ ಸಂಜಯ ಮಿಶ್ರಾ ಅವರ ಕನಸಿನ Big Mishra ಇದೀಗ ಬೆಳಗಾವಿಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.ನಗರದ ಅಂಗೋಲ್ ಮೇನ್ ರೋಡ್ ನಲ್ಲಿ ಆರಂಭಗೊಂಡಿರುವ Big Mishra Pedha & Family Restaurant, ಅದ್ದೂರಿ ಅಲಂಕಾರದಿಂದ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಗ್ರ್ಯಾಂಡ್ ಓಪನಿಂಗ್ ಹಿನ್ನೆಲೆಯಲ್ಲಿ ಮಳಿಗೆಯನ್ನು ಬಣ್ಣಬಣ್ಣದ ಹೂವುಗಳು, ದೀಪಾಲಂಕಾರ ಹಾಗೂ ಆಕರ್ಷಕ ಬಲೂನ್‌ಗಳಿಂದ ಸಿಂಗರಿಸಲಾಗಿದ್ದು, ಹೊರಾಂಗಣದಿಂದಲೇ ಗ್ರಾಹಕರ ಗಮನ ಸೆಳೆಯುತ್ತಿದೆ
ಮಳಿಗೆಯ ಒಳಾಂಗಣವೂ ವಿಶೇಷ ಆಕರ್ಷಣೆಯಾ ಗಿದೆ. ವಿಶಾಲವಾದ ಕುಳಿತುಕೊಳ್ಳುವ ವ್ಯವಸ್ಥೆ, ಸುಂದರ ವಾದ ಒಳಾಂಗಣ ವಿನ್ಯಾಸ ಹಾಗೂ ಕುಟುಂಬ ಸಮೇತ ಕುಳಿತು ಊಟ ಸವಿಯಲು ಅನುಕೂಲವಾಗುವ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗಿದೆ.
ಉದ್ಘಾಟನಾ ಸಂಭ್ರಮದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಹೊಸ ಮಳಿಗೆಗೆ ಶುಭಾರಂಭ ಮಾಡಲಾಗಿದೆ.
Big Mishra Pedha ಜೊತೆಗೆ Family Restaurant ಎಂಬ ವಿಶೇಷತೆಯೊಂದಿಗೆ ಇಲ್ಲಿ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಹಾಗೂ ಚೈನೀಸ್ ಆಹಾರ ಸೇರಿದಂತೆ ವಿವಿಧ ರುಚಿಗಳ ಸವಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಜೊತೆಗೆ Big Mishraಯ ಪ್ರಸಿದ್ಧ ಸಿಹಿತಿಂಡಿಗಳು ಹಾಗೂ ಸ್ನ್ಯಾಕ್ಸ್‌ಗಳಿಗೂ ಇಲ್ಲಿ ವಿಶೇಷ ಸ್ಥಾನ ಕಲ್ಪಿಸಲಾಗಿದೆ.
“ಅದೇ ಪರಂಪರೆ… ಅದೇ ರುಚಿ… ವಿಳಾಸ ಮಾತ್ರ ಬೆಳಗಾವಿ” ಎಂಬ ಆಶಯದೊಂದಿಗೆ ಬೆಳಗಾವಿಗೆ ಕಾಲಿಟ್ಟಿರುವ Big Mishra, ಸಂಜಯ ಮಿಶ್ರಾ ಅವರ ವಿಸ್ತರಣೆಯ ಕನಸಿನ ಮತ್ತೊಂದು ಹೆಜ್ಜೆಯಾಗಿದೆ.
ಬೆಳಗಾವಿ ನಗರದಲ್ಲಿ ಹೊಸ ರೂಪ, ಹೊಸ ವಾತಾವರಣ ಹಾಗೂ ಪರಿಚಿತ ರುಚಿಯೊಂದಿಗೆ ಆರಂಭಗೊಂಡಿರುವ Big Mishra Family Restaurant, ಆಹಾರ ಪ್ರಿಯರು ಹಾಗೂ ಕುಟುಂಬಗಳ ಗಮನ ಸೆಳೆಯುತ್ತಿದ್ದು ಸೆಪ್ಟೆಂಬರ್ 24 ರಿಂದ ಕಾರ್ಯಾರಂಭ ಮಾಡಲಿದ್ದು ಉದ್ಘಾಟನಾ ಸಮಾರಂಭಕ್ಕೆ ಮಾಲೀಕರಾಗಿರುವ ಸಂಜಯ ಮಿಶ್ರಾ ಅವರು ಸ್ವಾಗತ ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ.....