ಬೆಂಗಳೂರು -
ಕರ್ನಾಟಕದಲ್ಲಿ ಶಾಲೆಗಳು ಆರಂಭಗೊಂಡು ಅರ್ಧ ಶೈಕ್ಷಣಿಕ ವರ್ಷವೇ ಕಳೆದಿದೆ ರಾಜ್ಯದಾದ್ಯಂತ ಮಧ್ಯ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು ಈ ನಡುವೆ ದಸರಾ ರಜೆಗೆ ದಿನಗಣನೆ ಶುರುವಾಗಿದೆ. ನಡುವಲ್ಲೇ ಈ ಬಾರಿ ದಸರಾ ರಜೆಯಲ್ಲಿ ಬಾರೀ ಬದಲಾವಣೆ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ.
ನವರಾತ್ರಿಯ ಕಾಲದಲ್ಲಿ ಸಾಮಾನ್ಯವಾಗಿ ದಸರಾ ರಜೆ ನೀಡುವುದು ವಾಡಿಕೆ ಸಾಮಾನ್ಯವಾಗಿ ದಸರಾ ರಜೆ 1 ತಿಂಗಳು ಹಾಗೂ ಬೇಸಿಗೆ ರಜೆ 2 ತಿಂಗಳು ನೀಡಲಾ ಗುತ್ತಿತ್ತು. ಆದರೆ ಕೊರೊನಾ ಕಾಲಘಟ್ಟದ ನಂತರದಲ್ಲಿ ದಸರಾ ರಜೆ ಕತ್ತರಿ ಬಿದ್ದಿದೆ. ಕಳೆದ 2024ರಲ್ಲಿ 17 ದಿನ, 2025ರಲ್ಲಿ 18 ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು.
2026ರ ಸಾಲಿನ ದಸರಾ ರಜೆಯು ಅಕ್ಟೋಬರ್ 3 ರಿಂದ ಆರಂಭಗೊಂಡು ಅಕ್ಟೋಬರ್ 21ಕ್ಕೆ ಕೊನೆ ಯಾಗಲಿದೆ. ಅಕ್ಟೋಬರ್ 22ರಂದು ಕರ್ನಾಟಕ ದಲ್ಲಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಆರಂಭಗೊಳ್ಳಲಿವೆ ಆದರೆ ಅಲ್ಪ ಸಂಖ್ಯಾತ ಶಾಲೆಗಳು ಕ್ರಿಸ್‌ಮಸ್ ಅವಧಿಯಲ್ಲಿ ರಜೆ ನೀಡುವ ಹಿನ್ನೆಲೆಯಲ್ಲಿ ದಸರಾ ರಜೆಯಲ್ಲಿ ಬದಲಾವ ಣೆಯನ್ನು ಮಾಡಿಕೊಳ್ಳುತ್ತಿವೆ
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಎರಡು ದಿನಗಳ ಕಾಲ ಹೆಚ್ಚುವರಿ ರಜೆ ಸಿಗಲಿದೆ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಹಿನ್ನೆಲೆ ಯಲ್ಲಿ ಸರಕಾರಿ ರಜೆ ಇರಲಿದೆ ಅಲ್ಲದೇ ಈ ಬಾರಿ ಒಟ್ಟು 19 ದಿನಗಳ ಕಾಲ ಶಾಲೆಗಳಿಗೆ ರಜೆ ಇರೋ ದ್ರಿಂದ 20 ದಿನಗಳ ಕಾಲ ಮತ್ತು ದಸರಾ ರಜೆಯನ್ನು ಅನುಭವಿಸಬಹುದಾಗಿದ್ದು ಅಪ್ಡೇಟ್ ಮಾಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......