LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ.....ಸಿಡಿದೆದ್ದ ಪೋಷಕರಿಂದ ಹೋರಾಟ.....

ಬೆಂಗಳೂರು -

ರಾಜಧಾನಿಯ ಬೆಂಗಳೂರು ಪೂರ್ವ ವಲಯದ ಹೂಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಅಭಾವ ಹಾಗೂ ಶೈಕ್ಷಣಿಕ ನಿರ್ಲಕ್ಷ್ಯವನ್ನು ಖಂಡಿಸಿ ಪೋಷಕರು ಶಾಲೆಯ ಮುಂಭಾಗ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರನ್ನು ಚುನಾವಣಾ ಆಯೋಗದ 'ವಿಶೇಷ ಸಾಂದ್ರಿತ ಪರಿಷ್ಕರಣೆ'  ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯಕ್ಕೆ ನಿಯೋಜಿ ಸಿರುವುದರಿಂದ, ಶಾಲೆಗಳಲ್ಲಿ ಮಕ್ಕಳಿಗೆ ಪಾಠ-ಪ್ರವಚನಗಳೇ ಇಲ್ಲದಂತಾಗಿದೆ

ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದ್ದರೂ, ಕೇವಲ ಎರಡು ವಾರಗಳಷ್ಟೇ ಸರಿಯಾಗಿ ತರಗತಿಗಳು ನಡೆದಿವೆ ಎಂದುಪೋಷಕರು ಆರೋಪಿಸಿದ್ದಾರೆ ಇನ್ನೇನು ಸೆಪ್ಟೆಂಬರ್ ತಿಂಗಳು ಅಂತ್ಯಗೊಳ್ಳುತ್ತಿದ್ದು, ಇಂದಿನಿಂದ ಮಧ್ಯವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ. ಆದರೆ, ತರಗತಿ ಯಲ್ಲಿ ಯಾವುದೇ ಪಾಠ ಮಾಡದೆ ಮಕ್ಕಳು ಪರೀಕ್ಷೆ ಯನ್ನು ಹೇಗೆ ಬರೆಯುತ್ತಾರೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ತರಗತಿಗಳು ನಡೆಯದಿರುವ ಬಗ್ಗೆ ಪೋಷಕರು ಶಿಕ್ಷಕರನ್ನು ಪ್ರಶ್ನಿಸಿದರೆ, "ನಾವು ಏನು ಮಾಡಲು ಸಾಧ್ಯ? ಸರ್ಕಾರವೇ ನಮ್ಮನ್ನು ಎಸ್‌ಐಆರ್ ಕೆಲಸಕ್ಕೆ ನಿಯೋಜಿಸಿದೆ, ನೀವು ಸರ್ಕಾರದವರನ್ನೇ ಕೇಳಿ" ಎಂದು ಉತ್ತರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ದಿನನಿತ್ಯ ಮಕ್ಕಳು ಶಾಲೆಗೆ ಬಂದು ಬಿಸಿಯೂಟ ಸೇವಿಸಿ ಮನೆಗೆಮರಳು ವಂತಾಗಿದೆ ಎಂದು ಪೋಷಕರು ಕಿಡಿಕಾರಿದ್ದಾರೆ.

ರಾಜಕಾರಣಿಗಳು ಕೇವಲ ತಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ನೋಡುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. "ದಯವಿಟ್ಟು ನಮ್ಮ ಮಕ್ಕಳ ಜೀವನ ಹಾಳು ಮಾಡಬೇಡಿ, ಶಾಲೆಯಲ್ಲಿ ಸರಿಯಾದ ಶಿಕ್ಷಣ ನೀಡಿ" ಎಂದು ಪೋಷಕರು ಆಕ್ರೋಶ ದೊಂದಿಗೆ ಮನವಿ ಮಾಡಿದ್ದಾರೆ.ಕೂಡಲೇ ಶಿಕ್ಷಕರನ್ನು ಎಸ್‌ಐಆರ್ ಕರ್ತವ್ಯದಿಂದ ಮುಕ್ತಗೊಳಿಸಿ ತರಗತಿ ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಬೆಳಗಾವಿಗೆ ಬಂತು Big Mishra… ರುಚಿಯ ಹೊಸ ಸಾಮ್ರಾಜ್ಯ ಆರಂಭ.....ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮಳಿಗೆ.....ಶಿಕ್ಷಣ ಸಚಿವ ಮಧು ಬಂಗಾರಪ್ಪ PA 25 ಲಕ್ಷ ಲಂಚಕ್ಕೆ ಬೇಡಿಕೆ.....ಸಂಚಲನ ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ನಾಯಕನ ಬಾಂಬ್.....ಸರ್ಕಾರಿ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ.....CM ಗೆ ಮನವಿ ನೀಡಿದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ.....ರಾಜ್ಯ ಸರ್ಕಾರಿ ನೌಕರರ ದಶಕದ ಕನಸು ಈಡೇರಿಕೆ.....ಶೀಘ್ರದಲ್ಲೇ ಹೊರಬೀಳಲಿದೆ ಅಧಿಕೃತ ಆದೇಶ.....ಸರ್ಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ.....ಸಿಡಿದೆದ್ದ ಪೋಷಕರಿಂದ ಹೋರಾಟ.....ಶಿಕ್ಷಕರಿಗೆ ತಲೆನೋವಾಗಿದ್ದ ಶಿಕ್ಷಕಿ ಅಮಾನತು.....ಇಲಾಖೆಯಲ್ಲಿ ಇದ್ದುಕೊಂಡು ಶಿಕ್ಷಕರ ವಿರುದ್ಧ ಪದೇ ಪದೇ ದೂರು ನೀಡುತ್ತಿದ್ದ ಶಿಕ್ಷಕಿ.....ಮನೆಯನ್ನೇ ಮಿನಿಬಾರ್ ಮಾಡಿಕೊಂಡ ಸರ್ಕಾರಿ ಅಧಿಕಾರಿ.....ಮಿನಿ ಬಾರ್ ಕಂಡು ಶಾಕ್ ಆದ ಲೋಕಾ ಅಧಿಕಾರಿಗಳು.....8 ಸರ್ಕಾರಿ ಅಧಿಕಾರಿಗಳ ಮನೇಲಿ ₹23 ಕೋಟಿ ಅಕ್ರಮ ಆಸ್ತಿ ಪತ್ತೆ.....ಯಾರ ಬಳಿ ಎಷ್ಟಿದೆ ಗೊತ್ತಾ.....ದಸರಾ ರಜೆಯಲ್ಲಿ ಬದಲಾವಣೆ.....ಶಾಲಾ ಮಕ್ಕಳಿಗೆ ಭರ್ಜರಿ ಗುಡ್‌ನ್ಯೂಸ್‌.....ಬೆಳಗಾವಿಯಲ್ಲಿ Big Mishra ಆರಂಭ ಗ್ರ್ಯಾಂಡ್ ಓಪನಿಂಗ್.....ಒಂದೇ ಸೂರಿನಡಿ ಸ್ವೀಟ್ ನೊಂದಿಗೆ ಪ್ಯಾಮಿಲಿ ರೆಸ್ಟೋರೆಂಟ್..... ಸರ್ವರಿಗೂ ಸ್ವಾಗತ ಕೋರಿದ ಸಂಜಯ ಮಿಶ್ರಾ......