LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಪ್ರದೀಪ್ ಬಂಧನ..... ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....

ತುಮಕೂರು -

ಶಾಲಾ ಶಿಕ್ಷಕನೊಬ್ಬನ ಜೊತೆಗೆ ಪ್ರೇಮ ಸಲ್ಲಾಪದ ಆರೋಪದ ಹೊಂದಿದ್ದ 9ನೇ ತರಗತಿಯ ವಿದ್ಯಾರ್ಥಿ ನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.ಕುಣಿಗಲ್ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿಯ ವಿದ್ಯಾರ್ಥಿನಿ ಮೃತ ದುರ್ದೈವಿಯಾಗಿ ದ್ದಾಳೆ. ಮೃತ ಬಾಲಕಿಯ ತಂದೆ ಶಾಂತರಾಜು ಮೂರು ವರ್ಷದ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದರು. ಅಂದಿನಿಂದ ಬಾಲಕಿ ತನ್ನ ತಾಯಿ ಯೊಂದಿಗೆ ವಾಸವಿದ್ದಳು.

ಅದೇ ಶಾಲೆಯ ಶಿಕ್ಷಕ ಪ್ರವೀಣ್ ಎಂಬಾತ ವಿದ್ಯಾರ್ಥಿ ನಿಯೊಂದಿಗೆ ವಾಟ್ಸ್ ಆಪ್ ಮೂಲಕ ಮೊಬೈಲ್ ಚಾಟ್ ಮಾಡುತ್ತಿದ್ದನು. ವಿದ್ಯಾರ್ಥಿನಿಯ ತಾಯಿಯ ನಂಬರ್‌ಗೆ ಮೆಸೇಜ್ ಮಾಡುತ್ತಿದ್ದ ಈತ, 'ಲವ್ ಯೂ' ಎಂದು ಬರೆದು ಹೃದಯದ ಚಿನ್ಹೆಯನ್ನು ಕಳುಹಿಸಿರು ವುದೂ ಸಹ ಕಂಡು ಬಂದಿದ್ದು, ಶಿಕ್ಷಕ ಕಳುಹಿಸಿದ್ದ ಸಂದೇಶಗಳನ್ನು ವಿದ್ಯಾರ್ಥಿನಿ ಡಿಲೀಟ್ ಮಾಡಿತ್ತು. ಆದರೆ, ಇತ್ತೀಚೆಗೆ ಎರಡು ಮೂರು ದಿನಗಳಿಂದ ಬಾಲಕಿ ಅತಿ ಮಂಕಾಗಿ ಕುಳಿತಿದ್ದಳು. ಮಗಳು ಮಂಕಾಗಿರುವುದನ್ನು ಗಮನಿಸಿದ ತಾಯಿ ವಿಚಾರಿಸಿ ದಾಗ, ಶಿಕ್ಷಕನ ಅಸಲಿ ಮಾಹಿತಿ ಬಹಿರಂಗಗೊಂಡಿದೆ.

ಶಿಕ್ಷಕ ಪ್ರವೀಣ್ ಮೈ-ಕೈ ಮುಟ್ಟಿ ಮಾತನಾಡಿಸುತ್ತಿದ್ದನು ಹಾಗೂ ಈ ಬಗ್ಗೆ ಮನೆಯಲ್ಲಿ ಹೇಳಿದರೆ ಕೊಲ್ಲುವು ದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಮಗಳ ಮೇಲಿನ ಶಿಕ್ಷಕನ ಕೃತ್ಯ ತಿಳಿದು ಆಘಾತಗೊಂಡ ತಾಯಿ, ಶುಕ್ರವಾರ ನೇರವಾಗಿ ಶಾಲೆಗೆ ತೆರಳಿ ಪ್ರಿನ್ಸಿಪಾಲ್ ಅವರಿಗೆ ದೂರು ನೀಡಿದ್ದರುಶಾಲೆಯಿಂದ ವಾಪಸ್ ಮನೆಗೆ ಬಂದ ಬಳಿಕ ಸುಮಾರಿಗೆ ಮನ ನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಮೇರೆಗೆ ಹೆಬ್ಬೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಶಿಕ್ಷಕ ಪ್ರವೀಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಪ್ರವೀಣ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕಾಂಟೇ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಂದೆ ಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದ ಬಾಲಕಿ ಅಸುನೀಗಿರುವುದು ಇಡೀ ಗ್ರಾಮದಲ್ಲಿ ಶೋಕಮೂಡಿಸಿದೆ.

ಸುದ್ದಿ ಸಂತೆ ನ್ಯೂಸ್ ತುಮಕೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರ್ಗಾವಣೆ ಗೊಂಡ ಮಹಿಳಾ ಅಧಿಕಾರಿಗೆ ಸರ್ಕಾರಿ ನೌಕರರಿಂದ ಸನ್ಮಾನ ಗೌರವ ಬೀಳ್ಕೊಡುಗೆ.....ಸ್ಟಾಫ್ ರೂಂನಲ್ಲೇ ಪ್ರಾಧ್ಯಾಪಕನಿಗೆ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರುಸರ್ಕಾರಿ ನೌಕರರ ರಜೆಗೆ ತ್ವರಿತ ಸ್ವಯಂಚಾಲಿತ ಮಂಜೂರಾತಿ.....ರಜೆಗಾಗಿ ಮೇಲಾಧಿಕಾರಿಗಳ ಕಿರಿಕಿರಿ ತಪ್ಪಿಸಿದ ರಾಜ್ಯ ಸರ್ಕಾರ.....ಶಿಕ್ಷಕ ಪ್ರದೀಪ್ ಬಂಧನ..... ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​.....ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ.....ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ ನೀಡಿದ CM DKC.....ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.....71 ಸಾಧಕರಿಗೆ ಒಲಿದ ಗೌರವ.....ಬ್ಯಾಂಕಾಕ್‌ನಲ್ಲೂ ಬಿಗ್ ಮಿಶ್ರಾ ಸಿಹಿ ಸಾಮ್ರಾಜ್ಯದ ವಿಸ್ತರಣೆಗೆ ಸಿದ್ಧತೆ.....ಶೀಘ್ರದಲ್ಲೇ ಥೈಲ್ಯಾಂಡ್ ರಾಜಧಾನಿಯಲ್ಲಿ ಆರಂಭವಾಗಲಿದೆ ಬಿಗ್ ಮಿಶ್ರಾ ಮಳಿಗೆ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..... ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಅಪ್ಡೇಟ್.....ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ.....ಪ್ರತಿ 3 ತಿಂಗಳಿಗೊಮ್ಮೆ ಹೆಚ್ಚಳವಾಗಲಿದೆ ತುಟ್ಟಿಭತ್ಯೆ.....