LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ ನೀಡಿದ CM DKC.....

ಬೆಂಗಳೂರು -

ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದ್ದಾರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೌದು ನ.1 ರಿಂದ ಯಾವುದೇ ವರ್ಗಾವಣೆಗೆ ಅವಕಾಶವಿಲ್ಲ ಎನ್ನುತ್ತಾ  ಖಡಕ್ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ
ನವೆಂಬರ್ 1ರಿಂದ ನಿಯಮಿತ ವರ್ಗಾವಣೆ ಹೊರತು ಪಡಿಸಿ ಬೇರೆ ಯಾವುದೇ ರೀತಿಯ ವರ್ಗಾವಣೆ ಗಳಿಗೂ ಅವಕಾಶ ನೀಡುವುದಿಲ್ಲ ವರ್ಗಾವಣೆ ಚೀಟಿ ಹಿಡಿದುಕೊಂಡು ಯಾರೂ ನನ್ನ ಬಳಿ ಬರಬಾರದು ಸರಕಾರಿ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ತರಲು ಹಾಗೂ ಆಡಳಿತಕ್ಕೆ ಚುರುಕು ಮುಟ್ಟಿಸಲು ಈ ನಿರ್ಧಾರ ತಳೆಯಲಾಗಿದೆ ಎಂದರು

ಅಷ್ಟೇ ಅಲ್ಲದೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ವರ್ಗಾವಣೆ ಶಿಫಾರಸುಗಳಿಗಾಗಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ಇವತ್ತಿನಿಂದಲೇ, ಈ ಕ್ಷಣದಿಂದಲೇ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಅನಗತ್ಯ ವರ್ಗಾವಣೆ ಒತ್ತಡಗಳು ಸರ್ಕಾರದ ದೈನಂದಿನ ಕಾರ್ಯವೈಖರಿಗೆ ಅಡ್ಡಿಯಾಗುತ್ತಿದ್ದು, ಇದಕ್ಕೆ ತಕ್ಷಣವೇ ತೆರೆ ಎಳೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.ನಾವೆಲ್ಲರೂ ಸರ್ಕಾರದ ಕೆಲಸ ಮತ್ತು ಜನಸೇವೆಗೆ ಮೊದಲ ಆದ್ಯತೆ ನೀಡ ಬೇಕಾಗಿದೆ.

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸು ವುದು ಹಾಗೂ ಸಾರ್ವಜನಿಕರ ದಿನನಿತ್ಯದ ಸಮಸ್ಯೆ ಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಂಡುಕೊಳ್ಳು ವುದಕ್ಕೆ ಹೆಚ್ಚಿನ ಗಮನ ಹರಿಸಬೇಕಿದೆ. ವರ್ಗಾವಣೆ ಗಾಗಿ ಶಿಫಾರಸು ಮಾಡುವುದಾಗಲಿ ಅಥವಾ ಅನಗತ್ಯ ಒತ್ತಡ ಹೇರುವುದನ್ನಾಗಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಆಡಳಿತ ಯಂತ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಸಹ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಸಿಎಂ ಪೂರ್ವಾನುಮತಿ ಇಲ್ಲದೆ ಇಲಾಖಾ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಿದರೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನೇ ನೇರ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.

ಇದೀಗ ಅದೇ ಹಾದಿಯಲ್ಲಿ ಸಾಗಿರುವ ಡಿ.ಕೆ. ಶಿವಕುಮಾರ್ ಅವರು, ವರ್ಗಾವಣೆ ವಿಚಾರದಲ್ಲಿ ಇನ್ಮುಂದೆ ಶಿಫಾರಸ್ಸು ತರುವವರ ವಿರುದ್ಧ ಕಠಿಣ ಧೋರಣೆ ತಳೆಯುವುದಾಗಿ ಎಚ್ಚರಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರ್ಗಾವಣೆ ಗೊಂಡ ಮಹಿಳಾ ಅಧಿಕಾರಿಗೆ ಸರ್ಕಾರಿ ನೌಕರರಿಂದ ಸನ್ಮಾನ ಗೌರವ ಬೀಳ್ಕೊಡುಗೆ.....ಸ್ಟಾಫ್ ರೂಂನಲ್ಲೇ ಪ್ರಾಧ್ಯಾಪಕನಿಗೆ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರುಸರ್ಕಾರಿ ನೌಕರರ ರಜೆಗೆ ತ್ವರಿತ ಸ್ವಯಂಚಾಲಿತ ಮಂಜೂರಾತಿ.....ರಜೆಗಾಗಿ ಮೇಲಾಧಿಕಾರಿಗಳ ಕಿರಿಕಿರಿ ತಪ್ಪಿಸಿದ ರಾಜ್ಯ ಸರ್ಕಾರ.....ಶಿಕ್ಷಕ ಪ್ರದೀಪ್ ಬಂಧನ..... ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​.....ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ.....ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ ನೀಡಿದ CM DKC.....ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.....71 ಸಾಧಕರಿಗೆ ಒಲಿದ ಗೌರವ.....ಬ್ಯಾಂಕಾಕ್‌ನಲ್ಲೂ ಬಿಗ್ ಮಿಶ್ರಾ ಸಿಹಿ ಸಾಮ್ರಾಜ್ಯದ ವಿಸ್ತರಣೆಗೆ ಸಿದ್ಧತೆ.....ಶೀಘ್ರದಲ್ಲೇ ಥೈಲ್ಯಾಂಡ್ ರಾಜಧಾನಿಯಲ್ಲಿ ಆರಂಭವಾಗಲಿದೆ ಬಿಗ್ ಮಿಶ್ರಾ ಮಳಿಗೆ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..... ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಅಪ್ಡೇಟ್.....ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ.....ಪ್ರತಿ 3 ತಿಂಗಳಿಗೊಮ್ಮೆ ಹೆಚ್ಚಳವಾಗಲಿದೆ ತುಟ್ಟಿಭತ್ಯೆ.....