ಬೆಂಗಳೂರು -
ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ತುಟ್ಟಿಭತ್ಯೆ (DA) ಹೆಚ್ಚಳ ಹೌದು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾ ರರಿಗೆ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.ಹೊಸ ವೇತನ ಆಯೋಗದ ಮುಂದೆ ನೌಕರರ ಸಂಘಟನೆಗಳು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಈ ಪೈಕಿ ತುಟ್ಟಿಭತ್ಯೆ (DA) ಮತ್ತು ತುಟ್ಟಿಭತ್ಯೆ ಪರಿಹಾರ (DR) ಕುರಿತ ಮೂರು ಪ್ರಮುಖ ಬೇಡಿಕೆಗಳು ಈಗ ಗಮನ ಸೆಳೆದಿವೆ.
ಪ್ರತಿ ಮೂರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಪರಿಷ್ಕರಣೆ ಮಾಡಬೇಕು, ಡಿಎ ಶೇ.25ರ ಮಟ್ಟ ತಲುಪಿದಾಗ ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸ ಬೇಕು ಹಾಗೂ ತುಟ್ಟಿಭತ್ಯೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆ ಗಳಾಗಿವೆ. ಈ ಪ್ರಸ್ತಾವನೆಗಳು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ತೆರಿಗೆ ಹೊರೆ ಮೇಲೆ ಪರಿಣಾಮ ಬೀರಬಹುದು.
ಆದರೆ ಈ ಬೇಡಿಕೆಗಳಿಗೆ 8ನೇ ವೇತನ ಆಯೋಗ ವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇನ್ನೂ ಅಧಿಕೃತ ಅನುಮೋದನೆ ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಇವುಗಳನ್ನು ಜಾರಿಯಲ್ಲಿರುವ ನಿಯಮಗಳೆಂದು ಪರಿಗಣಿಸಬಾರದು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....