LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಅಧಿಕಾರಿ ಡೆತ್ ನೋಟ್ ಪತ್ತೆ.....ಸರ್ಕಾರಿ ಅಧಿಕಾರಿ ನಾಪತ್ತೆ ಪ್ರಕರಣ.....

ಗದಗ -

ಗದಗ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫರ್ವೀಜ್ ಧಾರವಾಡ ಎಂಬುವರು ನಾಪತ್ತೆಯಾಗಿ 13 ದಿನ ಕಳೆದರು ಅಧಿಕಾರಿಯ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಈ ನಡುವೆ ಅವರು ಬರೆದಿರುವ ಪತ್ರ ವೊಂದು ವೈರಲ್ ಆಗಿದೆ 

ವ್ಯವಸ್ಥಾಪಕ ನಿರ್ದೇಶಕರಿಗೆ ಸೆ.12ರಂದು ಫರ್ವೀಜ್ ಬರೆದ ಪತ್ರದಲ್ಲಿ, 'ಗದಗ ಉಪವಿಭಾಗದಲ್ಲಿಸುಮಾರು ವರ್ಷಗಳಿಂದ ಅನುದಾನದ Diversion ಆಗಿರುವ ಕಾರಣ, ಕೆಲವು ಕಾಮಗಾರಿಗಳು ಸ್ಥಗಿತಗೊಂಡಿ ರುತ್ತವೆ ಇದರಿಂದ ಜನಪ್ರತಿನಿಧಿಗಳು ಹಾಗೂ ಕಾಮಗಾರಿ ನೀಡಿರುವ ಇಲಾಖೆಗಳು ನಮ್ಮ ಇಲಾಖೆಗೆ ಛೀಮಾರಿ ಹಾಕುತ್ತಿದ್ದಾರೆ. ಕೆಲವು ಹಳೆಯಕಾಮಗಾರಿ ಗಳಿಗೆ ಬೇರೆ ಇಲಾಖೆಯಿಂದ ಅನುದಾನ ಬರಲಾರದೆ, ಅವುಗಳು ನಮ್ಮ ಇಲಾಖೆಯಿಂದ ಹೆಚ್ಚುವರಿ ವೆಚ್ಚ ಮಾಡಿರುತ್ತವೆ (ಸುಮಾರು ₹6 ಕೋಟಿ) ಸದರಿ ಅನುದಾನದ ಬಿಡುಗಡೆ ಬಗ್ಗೆ ಈಗಾಗಲೇ ಹಲವಾರು ಬಾರಿ ಇಲಾಖೆಗಳಿಗೆ ಪತ್ರ ಬರೆದರೂ ಬಿಡುಗಡೆ ಆಗಿರುವುದಿಲ್ಲ.

ಕೆಲವು ಕಾಮಗಾರಿಗಳ ಅನುದಾನ ನಮ್ಮ ಕೇಂದ್ರ ಕಚೇರಿಯಲ್ಲಿ ಲಭ್ಯವಿರುತ್ತದೆ (ಸುಮಾರು ₹2 ಕೋಟಿ). ಕೆಲವು ಮುಕ್ತಾಯವಾದ ಕಾಮಗಾರಿಗಳಿಗೆ ಅನುದಾ ನದ ಕೊರತೆಯಿಂದ Group leadersಗಳಿಗೆ Payment ಮಾಡಲು ಕಷ್ಟ ಸಾಧ್ಯವಾಗಿರುತ್ತದೆ. ಅವರು ಪ್ರತಿನಿತ್ಯ ನನಗೆ ಹಿಂಸೆ ನೀಡುತ್ತಿರುವುದು, ಮನೆಯ ಮುಂದೆ ಬರುವುದು ಹಾಗೂ Officeನಲ್ಲಿ ಕೂಗಾಡುವುದರಿಂದ ನನ್ನ ಮನಸ್ಸಿಗೆ ಅಘಾತವಾಗಿದೆ.news_1790493369_0_836.webp

 

news_1790493370_1_472.webp

 

Paymentಗಳ ವಿಚಾರವಾಗಿ ಈಗಾಗಲೇ ನಾನು ಹಾಗೂ ನಮ್ಮ ಕಾರ್ಯಪಾಲಕ ಎಂಜಿನಿಯರ್‌, ಬೆಳಗಾವಿ ವಲಯ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆಯಲ್ಲಿ ತಮಗೆ ತಿಳಿಸಿರುತ್ತೇವೆ'ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗದಗ ಉಪವಿಭಾಗವನ್ನು easyಯಾಗಿ ಕಾರ್ಯಕ್ಕೆ ತಂದು ನಡೆಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಈ ವಿಷಯ ದಿನನಿತ್ಯ ನನ್ನನ್ನು, ನನ್ನ mental health, ವೈಯಕ್ತಿಕ ಜೀವನ ಹಾಗೂ ಮನಃಶಾಂತಿ ಯನ್ನು ಹಾಳುಮಾಡಿಬಿಟ್ಟಿದೆ. ಇದರಿಂದ ನಾನು ನೊಂದು ನನ್ನ ಜೀವನವನ್ನು ಕೊನೆಮಾಡುತ್ತಿದ್ದೇನೆ'' ನನ್ನನ್ನು ಕ್ಷಮಿಸಿ ಬಿಡಿ ಹಾಗೂ ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿದ್ದೇನೆ. ಗದಗ ಉಪವಿಭಾಗಕ್ಕೆ ಅನುದಾನದ ಕೊರತೆಯನ್ನು Solve ಮಾಡಿ ಸುಗಮವಾಗಿ ನಡೆಸಲು ಅನುವು ಮಾಡಿ ಕೊಡಿ ಹಾಗೂ ಬೇರೆ AEEಯನ್ನು ನಿಯುಕ್ತಿ ಮಾಡಿಕೊಡಿ. Please, ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ'

ಆಂಧ್ರದತ್ತ ಪೊಲೀಸರು ಹೋಗಿದ್ದು 'ಫರ್ವೀಜ್ ಪತ್ತೆಗೆ ಕ್ರಮ ವಹಿಸಲಾಗಿದೆ. ಎರಡು ದಿನಗಳ ಹಿಂದೆ ಆಂಧ್ರಪ್ರದೇಶದ ವಿಜಯವಾಡ ಬಳಿ ಕೊನೆಯ ಬಾರಿ ಮೊಬೈಲ್‌ಫೋನ್ ಸಂಪರ್ಕಕ್ಕೆ ಸಿಕ್ಕಿರುವುದು ಗೊತ್ತಾಗಿದೆ. ಅಲ್ಲಿಗೆ, ಗದಗ ಪೊಲೀಸರ ತಂಡ ಕಳುಹಿಸಲಾಗಿದ್ದು, ಅವರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಿದ್ದಾರೆ. ಸದ್ಯ ದೊರೆತಿರುವ ಪತ್ರವು ಫರ್ವೀಜ್ ಅವರದ್ದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ತಿಳಿಸಿದ್ದಾರೆ‌

ಸುದ್ದಿ ಸಂತೆ ನ್ಯೂಸ್ ಗದಗ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾನುವಾರವೂ ಕರ್ತವ್ಯ ನಿರ್ವಹಿಸಿದ ಸರ್ಕಾರಿ ನೌಕರರು..... ಕಚೇರಿಗೆ ಹಾಜರ್ ಬಾಕಿ ಕಡರಗಳ ವಿಲೇವಾರಿ.....59ನೇ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಶಿಕ್ಷಕ ಉದ್ಯೋಗ.....27 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ಒಲಿದ ಯಶಸ್ಸು.....ಶಿಕ್ಷಕರ ಸ್ವಂತ ಹಣದಲ್ಲೇ ಸರ್ಕಾರಿ ಸ್ಕೂಲ್ ಅಭಿವೃದ್ಧಿ.....ಇದು ಸರ್ಕಾರಿ ಶಾಲಾ ಶಿಕ್ಷಕರ ಪವರ್.....ಶಿಕ್ಷಕ ಅಮಾನತು.....ಅಮಾನತು ಆದೇಶ ಮಾಡಿದ BEO.....6ನೇ ತರಗತಿಯ ವಿದ್ಯಾರ್ಥಿನಿ ಸಾವು.....ದಾಖಲಾಯಿತು ದೂರು‌.....ಹುಟ್ಟೂರಿನಲ್ಲಿ ನಡೆಯಿತು ಮುಖ್ಯಶಿಕ್ಷಕ ನ ಅಂತ್ಯಕ್ರಿಯೆ.....ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಹೆಡ್‌ಮಾಸ್ಟರ್ ನೀಡಿದ ಗಿಫ್ಟ್.....ಸರ್ಕಾರಿ ಅಧಿಕಾರಿ ಡೆತ್ ನೋಟ್ ಪತ್ತೆ.....ಸರ್ಕಾರಿ ಅಧಿಕಾರಿ ನಾಪತ್ತೆ ಪ್ರಕರಣ.....ಸರ್ಕಾರಿ ನೌಕರರೇ ಟಾರ್ಗೆಟ್..... ದಾಖಲಾಯಿತು ದೂರು.....ನೌಕರರೇ ಎಚ್ಚರ ಎಚ್ಚರ.....ಚಿಕಿತ್ಸೆ ಫಲಿಸದೇ ಮುಖ್ಯಶಿಕ್ಷಕ ನಿಧನ.....ಕಣ್ಣೀರಿನ ವಿದಾಯ ಹೇಳಿದ ಶಾಲಾ ಮಕ್ಕಳು ಶಿಕ್ಷಕರು.....