LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹುಟ್ಟೂರಿನಲ್ಲಿ ನಡೆಯಿತು ಮುಖ್ಯಶಿಕ್ಷಕ ನ ಅಂತ್ಯಕ್ರಿಯೆ.....

ಬಾಗಲಕೋಟೆ -

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ಬಸವರಾಜ ರಾಮಪ್ಪ ಶೆಟ್ಟಿ (53) ಚಿಕಿತ್ಸೆ ಫಲಕಾರಿಯಾಗದೇ ಬೆಳಗಾವಿ ಯಲ್ಲಿ ಮೃತಪಟ್ಟಿದ್ದು ಇಂದು ಅವರ ಹುಟ್ಟೂರಿನಲ್ಲಿ‌ ಅಂತ್ಯಕ್ರಿಯೆ ನಡೆಯಿತು.ಬೆಳಗಾವಿ ಯಿಂದ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದ ಶಾಲೆ ಗೆ ಪಾರ್ಥಿವ ಶರೀರವನ್ನು ತಗೆದು ಕೊಂಡು ಬರಲಾಯಿತು ನಂತರ ಶಾಲಾ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಠಿ ಅರ್ಪಿಸಿ ಗೌರವ ದೊಂದಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸ ಲಾಯಿತು

ಬಾಗಲಕೋಟೆ ತಾಲೂಕಿನ ಶಿರೂರ ಬಳಿ ಸುಮಾರು ಎರಡು ವಾರಗಳ ಹಿಂದೆ ಬಸವರಾಜ ಅವರು ಬೈಕ್‌ ನಲ್ಲಿ ತೆರಳುತ್ತಿದ್ದಾಗಹಿಂಬದಿಯಿಂದ ಬಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಬೆಳಗಾವಿ ಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ಚಿಕಿತ್ಸೆ ಫಲಿಸದೇ ಮೃತರಾದರು 

ತಮ್ಮ ಪ್ರೀತಿಯ ಶಿಕ್ಷಕನ ಅಂತಿಮ ದರ್ಶನದ ವೇಳೆ ಶಾಲಾ ಮಕ್ಕಳು ಪಾರ್ಥಿವ ಶರೀರದ ಮೇಲೆ ಹೂಮಳೆ ಗೈದು ಭಾವುಕ ವಿದಾಯ ಹೇಳಿ ಕಳುಹಿಸಿ ಕೊಟ್ಟರು ಇನ್ನೂ  14 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿಯಿಂದ ಶಿಕ್ಷಕ ಬಸವರಾಜ ಅವರ ಪಾರ್ಥಿವ ಶರೀರವನ್ನು ಹೊತ್ತ ಅಂಬುಲೆನ್ಸ್ ನೀಲಾನಗರ ತಾಂಡಾಕ್ಕೆ ಆಗಮಿಸಿ ನಂತರ ಅವರ ಊರಿಗೆ ತೆರಳಿತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ತಮ್ಮ ನೆಚ್ಚಿನ ಮುಖ್ಯ ಗುರುಗಳನ್ನು ಕಳೆದುಕೊಂಡ ಶಾಲಾ ಮಕ್ಕಳು ಶಾಲೆಯ ಶಿಕ್ಷಕರು ಗ್ರಾಮಸ್ಥರ ಇಕ್ಕೆಲಗಳಲ್ಲಿ ಸಾಲಾಗಿ ನಿಂತು, ಪಾರ್ಥಿವ ಶರೀರ ಹೊತ್ತು ಸಾಗುತ್ತಿದ್ದ ಅಂಬುಲೆನ್ಸ್‌ಗೆ ಭಾವ ಪೂರ್ಣವಾಗಿ ಹೂಮಳೆ (ಪುಷ್ಪಾರ್ಚನೆ) ಗರೆದು ಕಣ್ಣೀರಿನ ಗೌರವ ಸಲ್ಲಿಸಿದರು.ನಂತರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾನುವಾರವೂ ಕರ್ತವ್ಯ ನಿರ್ವಹಿಸಿದ ಸರ್ಕಾರಿ ನೌಕರರು..... ಕಚೇರಿಗೆ ಹಾಜರ್ ಬಾಕಿ ಕಡರಗಳ ವಿಲೇವಾರಿ.....59ನೇ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಶಿಕ್ಷಕ ಉದ್ಯೋಗ.....27 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ಒಲಿದ ಯಶಸ್ಸು.....ಶಿಕ್ಷಕರ ಸ್ವಂತ ಹಣದಲ್ಲೇ ಸರ್ಕಾರಿ ಸ್ಕೂಲ್ ಅಭಿವೃದ್ಧಿ.....ಇದು ಸರ್ಕಾರಿ ಶಾಲಾ ಶಿಕ್ಷಕರ ಪವರ್.....ಶಿಕ್ಷಕ ಅಮಾನತು.....ಅಮಾನತು ಆದೇಶ ಮಾಡಿದ BEO.....6ನೇ ತರಗತಿಯ ವಿದ್ಯಾರ್ಥಿನಿ ಸಾವು.....ದಾಖಲಾಯಿತು ದೂರು‌.....ಹುಟ್ಟೂರಿನಲ್ಲಿ ನಡೆಯಿತು ಮುಖ್ಯಶಿಕ್ಷಕ ನ ಅಂತ್ಯಕ್ರಿಯೆ.....ಸರ್ಕಾರಿ ಶಾಲೆಯ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಹೆಡ್‌ಮಾಸ್ಟರ್ ನೀಡಿದ ಗಿಫ್ಟ್.....ಸರ್ಕಾರಿ ಅಧಿಕಾರಿ ಡೆತ್ ನೋಟ್ ಪತ್ತೆ.....ಸರ್ಕಾರಿ ಅಧಿಕಾರಿ ನಾಪತ್ತೆ ಪ್ರಕರಣ.....ಸರ್ಕಾರಿ ನೌಕರರೇ ಟಾರ್ಗೆಟ್..... ದಾಖಲಾಯಿತು ದೂರು.....ನೌಕರರೇ ಎಚ್ಚರ ಎಚ್ಚರ.....ಚಿಕಿತ್ಸೆ ಫಲಿಸದೇ ಮುಖ್ಯಶಿಕ್ಷಕ ನಿಧನ.....ಕಣ್ಣೀರಿನ ವಿದಾಯ ಹೇಳಿದ ಶಾಲಾ ಮಕ್ಕಳು ಶಿಕ್ಷಕರು.....