ಶಿವಮೊಗ್ಗ -
ಸರ್ಕಾರಿ ನೌಕರರೇ ಟಾರ್ಗೆಟ್ ಜೀರೋ ಪರ್ಸೆಂಟ್ ಬಡ್ಡಿ' ಹೆಸರಲ್ಲಿ ಕೋಟ್ಯಂತರ ವಂಚನೆ ಬಿಲ್ಡರ್ಸ್ ವಿರುದ್ಧ FIR ದಾಖಲು ಹೌದು ಇಂತಹ ದೊಂದು ಪ್ರಕರಣ ಶಿವಮೊಗ್ಗ ದಲ್ಲಿ ಬೆಳಕಿಗೆ ಬಂದಿಗೆ ಶೂನ್ಯ ಬಡ್ಡಿ ದರ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ನಂಬಿಸಿ ಸರ್ಕಾರಿ ನೌಕರ ರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಭಾರೀ ಜಾಲವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮುಖ್ಯವಾಗಿ ಖಚಿತ ಆದಾಯ ಹೊಂದಿರುವ ಸರ್ಕಾರಿ ನೌಕರರನ್ನೇ ಗುರಿಯಾಗಿಸಿಕೊಂಡ ಈ ವಂಚಕರು, ಅವರ ವೇತನ ಪತ್ರಗಳನ್ನು (ಸ್ಯಾಲರಿ ಸ್ಲಿಪ್) ಬಳಸಿಕೊಂಡು ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚನೆ ಎಸಗಿದ್ದಾರೆ.ಶಿವಮೊಗ್ಗದ 'ಆಶಿರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್' ಸಂಸ್ಥೆಯ ( Aarshiraj Builders and Developers Ltd) ಹೆಸರಿನಲ್ಲಿ ಈ ಕೃತ್ಯ ನಡೆದಿದೆ
ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣ ಗೆರೆ ಹಾಗೂ ಹಾಸನ ಜಿಲ್ಲೆಗಳ ನೂರಾರು ಮುಗ್ಧ ಸರ್ಕಾರಿ ನೌಕರರಿಗೆ ವಂಚಿಸಲಾಗಿದೆ.ಆಕರ್ಷಕ ಆಫರ್ ನೀಡಿ 16 ಕೋಟಿ ರೂ.ಹೆಚ್ಚು ಸಾಲದ ದಂಧೆ ಬೆಳಕಿಗೆ ಬಂದಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪಾಂಪ್ಲೆಟ್‌ಗಳನ್ನು ಹಂಚಿ ಪ್ರಚಾರ ನಡೆಸುತ್ತಿದ್ದ ಆರೋಪಿಗಳು, ಶೂನ್ಯ ಬಡ್ಡಿಯಲ್ಲಿ ಹಣ ನೀಡಿ ಕಡಿಮೆ ಅವಧಿಯಲ್ಲಿ ಮನೆ ಕಟ್ಟಿಸಿಕೊಡುವುದಾಗಿ ಆಮಿಷ ಒಡ್ಡುತ್ತಿದ್ದರು.
ಮನೆ ಕಟ್ಟಿಸಿಕೊಳ್ಳುವ ಆಸೆಯಿಂದ ಬಂದ ಜನರಿಂದ ಆರಂಭದಲ್ಲಿ ನೋಂದಣಿ ಶುಲ್ಕ, ಕಂತುಗಳು ಹಾಗೂ ವಿವಿಧ ವೆಚ್ಚಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು. ಇದುವರೆಗೆ 50ಕ್ಕೂ ಹೆಚ್ಚು ಜನರಿಗೆ ಬಲೆ ಬೀಸಿ ಸುಮಾರು 16 ಕೋಟಿ ರೂಪಾಯಿಗೂ ಅಧಿಕ ಹಣದ ವಹಿವಾಟು ನಡೆಸ ಲಾಗಿದ್ದು, ಪ್ರಾಥಮಿಕವಾಗಿ 5 ಕೋಟಿ ರೂಪಾಯಿಗೂ ಹೆಚ್ಚಿನ ವಂಚನೆ ಬಹಿರಂಗವಾಗಿದೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ನೌಕರರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಇದನ್ನು ನೋಡಿ ಪೊಲಿಸರೇ ಶಾಕ್ ಆಗಿದ್ದಾರೆ
ಸಂತ್ರಸ್ತರ ಹೆಸರಲ್ಲೇ ಬ್ಯಾಂಕ್ ಸಾಲ ಎತ್ತಿ ವಂಚಕರು ಎಸ್ಕೇಪ್ ಆಗಿದ್ದಾರೆಮನೆ ಕಟ್ಟಿಸಿಕೊಳ್ಳಲು ಬಂದ ಸಂತ್ರಸ್ತರ ಮೂಲ ದಾಖಲೆಗಳು ಹಾಗೂ ಸ್ಯಾಲರಿ ಸ್ಲಿಪ್‌ಗಳನ್ನು ದುರುಪಯೋಗಪಡಿಸಿಕೊಂಡ ವಂಚಕರು, ಅವರ ಹೆಸರಿನಲ್ಲೇ ವಿವಿಧ ಬ್ಯಾಂಕು ಗಳಲ್ಲಿ ಲಕ್ಷಾಂತರ ರೂಪಾಯಿ ಗೃಹ ಸಾಲ ಪಡೆದು ಕೊಂಡಿದ್ದಾರೆ. ಆದರೆ, ಹೇಳಿದಂತೆ ಮನೆಗಳನ್ನು ಪೂರ್ಣಗೊಳಿಸದೆ, ಅತ್ತ ಬ್ಯಾಂಕ್ ಸಾಲದ ಮೊತ್ತ ವನ್ನೂ ತಾವೇ ಗುಳುಂ ಮಾಡಿ ಸ್ಥಳದಿಂದ ಪರಾರಿ ಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಬೃಹತ್ ಮೊತ್ತದ ಸಾಲ ಬಾಕಿ ಉಳಿದಿರುವುದನ್ನು ಕಂಡು, ಬ್ಯಾಂಕುಗ ಳಿಂದ ನೋಟಿಸ್ ಬರಲಾರಂಭಿಸಿದಾಗ ಸಂತ್ರಸ್ತರು ಕಂಗಾಲಾಗಿದ್ದಾರೆ.
ಈ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ತುಂಗಾನಗರ ಪೊಲೀಸರು ಎಫ್‌ಐಆರ್ ದಾಖಲಿ ಸಿಕೊಂಡಿದ್ದಾರೆ. ಆಶಿರಾಜ್ ಬಿಲ್ಡರ್ಸ್ ( Aarshiraj Builders and Developers Ltd) ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ಖಾನ್, ನಾರದಮುನಿ ಅಸೋಸಿಯೇಟ್ಸ್‌ನ ಹರೀಶ್ ಹಾಗೂ ಸೂರ್ಯ ಫೈನಾನ್ಸ್‌ನ ಮೋಹನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತುಂಗಾನಗರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ......