ರಾಣೆಬೆನ್ನೂರು -
ವಿದ್ಯಾರ್ಥಿ ನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ನೊಬ್ಬರ ಮೇಲೆ ದೂರು ದಾಖಲಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ
ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ, ಅದೇ ಶಾಲೆಯ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.'ಇತ್ತೀಚೆಗೆ ನಡೆದಿದ್ದ ಘಟನೆ ಬಗ್ಗೆ ವಿದ್ಯಾರ್ಥಿಯ ಪೋಷಕರು ಮಾಹಿತಿ ಹಾಗೂ ಹೇಳಿಕೆ ನೀಡಿದ್ದರು.
ಅದನ್ನು ಆಧರಿಸಿ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸರು ಹೇಳಿದರು.ವಿದ್ಯಾರ್ಥಿನಿಯನ್ನು ಕೊಠಡಿಗೆ ಕರೆಸಿದ್ದ ಶಿಕ್ಷಕ, ಅಸಭ್ಯವಾಗಿ ವರ್ತಿಸಿದ್ದ. ಭಯಗೊಂಡ ವಿದ್ಯಾರ್ಥಿನಿ, ಕಚೇರಿಯಿಂದ ಹೊರಗೆ ಓಡಿಹೋಗಲು ಮುಂದಾಗಿದ್ದಳು ಅದೇ ಸಂದರ್ಭ ದಲ್ಲಿ ವಿದ್ಯಾರ್ಥಿನಿಯನ್ನು ತಡೆದಿದ್ದ ಶಿಕ್ಷಕ, ವಿಷಯ ವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊ ಡ್ಡಿದ್ದನೆಂದು ಆರೋಪಿಸಲಾಗಿದೆ' ಎಂದಿದ್ದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ರಾಣೆಬೆನ್ನೂರು.....