LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....

ಬೆಂಗಳೂರು -

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ದಸರಾ ಅಥವಾ ದೀಪಾವಳಿ ಸಂದರ್ಭದಲ್ಲಿ ತುಟ್ಟಿ ಭತ್ಯೆ ಘೋಷಿಸುತ್ತದೆ. ಆದರೆ, ಈ ಬಾರಿ ಕೇಂದ್ರದ ನೌಕರರಿಗೆ ಹಬ್ಬಕ್ಕೂ ಮೊದಲೇ ತುಟ್ಟಿಭತ್ಯೆ ಲಭಿಸುವ, ಆ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಹೌದು, ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಘೋಷಣೆಯನ್ನು ಶೀಘ್ರವೇ ಮಾಡಬೇಕು ಎಂದು ನೌಕರರ ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಇದನ್ನು ಪರಿಗಣಿಸಿದರೆ ಶೀಘ್ರವೇ ತುಟ್ಟಿ ಭತ್ಯೆ ಸಿಗಲಿದೆ.ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು, ಗ್ರಾಹಕ ಬೆಲೆ ಸೂಚ್ಯಂಕದ ದತ್ತಾಂಶ ಆಧರಿಸಿ 2026ರ ಜುಲೈ ತುಟ್ಟಿಭತ್ಯೆ ಹೆಚ್ಚಳದ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಕೋರಿದೆ

ಪ್ರಸ್ತುತ ಜನವರಿ 2026ರಿಂದ ಜಾರಿಗೆ ಬರುವಂತೆ ಡಿಎ ಪ್ರಮಾಣವು ಶೇ.60ರಷ್ಟಿದೆ. ಹಣದುಬ್ಬರವನ್ನು ಸರಿದೂಗಿಸಲು ವರ್ಷಕ್ಕೆ ಎರಡು ಬಾರಿ (ಜನವರಿ ಮತ್ತು ಜುಲೈನಲ್ಲಿ) ಡಿಎ ಪರಿಷ್ಕರಿಸಲಾಗುತ್ತದೆ. ಹಣ ದುಬ್ಬರ ದತ್ತಾಂಶದ ಆಧಾರದ ಮೇಲೆ ಇದು ಶೇ.64ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಹಬ್ಬದ ಸೀಸನ್, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಗೃಹೋಪಯೋಗಿ ಖರ್ಚುಗಳು ಹೆಚ್ಚಿರುವ ಈ ಸಮಯದಲ್ಲಿ ನೌಕರರಿಗೆ ಈ ಹೆಚ್ಚಳವು ಆರ್ಥಿಕ ವಾಗಿ ಬಹಳ ಮುಖ್ಯವಾಗಿದೆ ಎಂದು ಒಕ್ಕೂಟವು ತಿಳಿಸಿದೆ. ಆದಾಗ್ಯೂ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೊಗದ ಶಿಫಾರಸುಗಳ ಜಾರಿಗಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆಯೇ, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸುವ ಕುರಿತು ಘೋಷಣೆ ಮಾಡಿದರೆ ಅದು ನೌಕರರ ಪಾಲಿಗೆ ಮಹತ್ವದ ಸಂಗತಿಯಾಗಲಿದೆ. ಕಳೆದ ಬಾರಿ ಕೇಂದ್ರ ಸರ್ಕಾರವು ಶೇ.2ರಷ್ಟು ತುಟ್ಟಿಭತ್ಯೆಯನ್ನು ಏರಿಕೆ ಮಾಡಿತ್ತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತಿ ಯೋಜನೆಗೆ ಬಂತು 15 ಮಹತ್ವದ ಬದಲಾವಣೆಗಳು.....ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....ದಯಮಾಡಿ ಶಿಕ್ಷಕರ ವರ್ಗಾವಣೆ ಮಾಡಿ‌ ಮಾಡಿ ಆರಂಭಗೊಂಡ ಅಭಿಯಾನ‌.....ನೂತ‌ನ CEO ರನ್ನು ಸ್ವಾಗತ ಕೋರಿದ ಸರ್ಕಾರಿ ನೌಕರರ ಟೀಮ್.....ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಜನವರಿ 1, 2026 ರಿಂದ ಬಾಕಿ ವೇತನ ಇಲ್ಲಿದೆ ಲೆಕ್ಕಾಚಾರ.....ರಾಜ್ಯ ಸರ್ಕಾರಿ ನೌಕರರ ಮಹತ್ವದ ಸಭೆ..... ನಿವೃತ್ತಿಯಾದ ನೌಕರರಿಗೆ ಸನ್ಮಾನ ಗೌರವ.... ‌ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬಜೆಟ್ ಕುಸಿತ.....ಆತಂಕದಲ್ಲಿ ಕ್ಷೇತ್ರ.....ಶಿಕ್ಷಕಿ ಪೊಟೊ ಗಳು ವೈರಲ್.....ಶಾಲೆಯಲ್ಲಿ ಶಿಕ್ಷಕಿ ಮಾಡಿದ ಕೆಲಸ ನೋಡಿ.....ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಅರ್ಜಿ ಆಹ್ವಾನ.....ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....