LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....

ಖಾನಾಪುರ -

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸುನೀಲ ಚಿಗುಳಕರ ಆಯ್ಕೆ ಅವರನ್ನು ಆಯ್ಕೆ ಮಾಡಲಾಯಿತು ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಮಾವುಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುನೀಲ ಚಿಗುಳಕರ ಅವರನ್ನು ಬೆಳಗಾವಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ ಬೂದಿಹಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯದರ್ಶಿಯಾಗಿ ಎಂ.ಬಿ. ಅಂಗಡಿ, ಉಪಾಧ್ಯಕ್ಷರಾಗಿ ಸಂಜೀವ ಕೋಷ್ಟಿ, ಬಿ.ಜಿ.ಹಿರೇಮಠ, ನಾಗೇಶ ಡೊಂಕರಿ, ಡಾ.ನವೀನ ಶೆಟ್ಟಿಗಾರ, ಮಹಿಳಾ ಘಟಕದ ಅಧ್ಯಕ್ಷರಾಗಿ ಚಂದಾ ನರಸಗೌಡ, ಸಂಘಟನಾ ಕಾರ್ಯದರ್ಶಿಯಾಗಿ ವಸಂತ ಪಾಟೀಲ, ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವಾಸ ಗಾವಡೆ, ಜಿಲ್ಲಾ ಸಂಚಾಲಕರಾಗಿ ಸಂಜಯ ಪವಾರ, ಸಿ.ಐ.ಪಾಟೀಲ, ಸಿದ್ಧಪ್ಪ ನಾಯ್ಕ, ಮಹೇಶ ಸಡೇಕರ, ಸಚಿನ್ ಕುಡಚಿ, ವೈ.ಎಸ್ ಪಾಟೀಲ, ಎನ್.ಡಿ. ಪಾಟೀಲ, ಉಮೇಶ್ ಕುಲಕರ್ಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ವಿಶ್ವಜಿತ್ ಹಸ್ತೆ, ದಯಾನಂದ ತಾರಿಹಾಳಕರ, ರಾಜಾರಾಮ ಕುಕಡೋಳಕರ, ಅಶೋಕ ಪರಮಾಜ, ಅರುಣ ಪಾಟೀಲ, ಸುರೇಳ ಕಳ್ಳೇಕರ, ಎನ್.ಡಿ. ಪಾಟೀಲ, ವಾಮನರಾವ ಕುಲಕರ್ಣಿ, ಪರಶುರಾಮ ಗೋರಲ, ಅನೀಲ ಕದಮ, ಅಶೋಕ ಅಣ್ಣಿಗೇರಿ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಹೊಸ ಕಾರ್ಯಕಾರಿ ಸಮಿತಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು. ಆರ್.ಪಿ. ವಂಟಗುಡಿ ಸ್ವಾಗತಿಸಿದರು. ಬಿ.ಜಿ ಹಿರೇಮಠ ಸಭೆ ನಿರ್ವಹಿಸಿದರು, ಎಂ.ಬಿ. ಅಂಗಡಿ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಖಾನಾಪುರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತಿ ಯೋಜನೆಗೆ ಬಂತು 15 ಮಹತ್ವದ ಬದಲಾವಣೆಗಳು.....ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....ದಯಮಾಡಿ ಶಿಕ್ಷಕರ ವರ್ಗಾವಣೆ ಮಾಡಿ‌ ಮಾಡಿ ಆರಂಭಗೊಂಡ ಅಭಿಯಾನ‌.....ನೂತ‌ನ CEO ರನ್ನು ಸ್ವಾಗತ ಕೋರಿದ ಸರ್ಕಾರಿ ನೌಕರರ ಟೀಮ್.....ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಜನವರಿ 1, 2026 ರಿಂದ ಬಾಕಿ ವೇತನ ಇಲ್ಲಿದೆ ಲೆಕ್ಕಾಚಾರ.....ರಾಜ್ಯ ಸರ್ಕಾರಿ ನೌಕರರ ಮಹತ್ವದ ಸಭೆ..... ನಿವೃತ್ತಿಯಾದ ನೌಕರರಿಗೆ ಸನ್ಮಾನ ಗೌರವ.... ‌ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬಜೆಟ್ ಕುಸಿತ.....ಆತಂಕದಲ್ಲಿ ಕ್ಷೇತ್ರ.....ಶಿಕ್ಷಕಿ ಪೊಟೊ ಗಳು ವೈರಲ್.....ಶಾಲೆಯಲ್ಲಿ ಶಿಕ್ಷಕಿ ಮಾಡಿದ ಕೆಲಸ ನೋಡಿ.....ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಅರ್ಜಿ ಆಹ್ವಾನ.....ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....