ಬೆಂಗಳೂರು -
2026-27ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅ. 17ರವರೆಗೆ ಅವಕಾಶ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ ಪ್ರಾಥಮಿಕ ಶಾಲೆಗಳ ಪ್ರತಿ ವಿಭಾಗಕ್ಕೆ 40 ಹಾಗೂ ಪ್ರೌಢಶಾಲೆಗಳ ಪ್ರತಿ ವಿಭಾಗಕ್ಕೆ 70 ವಿದ್ಯಾರ್ಥಿಗಳ ಸಂಖ್ಯಾಬಲ ನಿಗದಿಪಡಿಸಲಾಗಿದೆ.ಶಾಲಾ ಆಡಳಿತ ಮಂಡಳಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್‌ನಲ್ಲೇ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.
ಅನಧಿಕೃತ ವಿಭಾಗಗಳನ್ನು ಹೊಂದಿರುವ ಶಾಲೆಗಳು ಸಹ ಈ ಅವಧಿಯಲ್ಲಿ ಕಡ್ಡಾಯವಾಗಿ ನಿಯಮಾನು ಸಾರ ಅನುಮತಿ ಪಡೆಯಬೇಕಿದ್ದು, ತಪ್ಪಿದರೆ ವಿಭಾಗ ಗಳನ್ನು ಮುಂದುವರಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸುವಾಗ 'ಸ್ಯಾಟ್ಸ್ ಕರ್ನಾಟಕ' ಆಯಪ್ ಮೂಲಕ ಶಾಲೆಯ ಮೂಲಸೌಕರ್ಯಗಳ ಜಿಯೋ ಟ್ಯಾಗ್ ಫೋಟೋ ಮತ್ತು ವೀಡಿಯೋಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ ಗೊಳಿಸ ಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....