ಬೆಂಗಳೂರು -
ಸರ್ಕಾರಿ ಶಾಲೆಗಳ ಬಿಸಿಯೂಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ: 'ಕ್ಲಸ್ಟರ್ ಕಿಚನ್ ಸೆಂಟರ್' ವ್ಯವಸ್ಥೆ ಜಾರಿಗೆ ಪರಿಶೀಲನೆ ಹೌದುರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಬಡಿಸುವ ಪ್ರಸ್ತುತ ವ್ಯವಸ್ಥೆ ಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಚಿಂತನೆ ಆರಂಭಿಸಿದೆ.ಶಾಲೆಗಳಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡುವ ಬದಲು, ಹಲವು ಶಾಲೆಗಳನ್ನು ಒಳಗೊಂಡ ಕ್ಲಸ್ಟರ್ ವ್ಯಾಪ್ತಿಗೆ ಒಂದೊಂದು 'ಕ್ಲಸ್ಟರ್ ಕಿಚನ್ ಸೆಂಟರ್' ಸ್ಥಾಪಿಸಿ, ಅಲ್ಲಿಂದಲೇ ಬಿಸಿಯೂಟವನ್ನು ತಯಾರಿಸಿ ಶಾಲೆ ಗಳಿಗೆ ಪೂರೈಸುವ ಪ್ರಸ್ತಾವನೆ ಪರಿಶೀಲನೆಗೆ ಬಂದಿದೆ.
ಈ ಸಂಬಂಧ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ನಿರ್ದೇಶಕರ ಕಚೇರಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ಲಸ್ಟರ್ ಕಿಚನ್ ಸೆಂಟರ್‌ಗಳನ್ನು ಪ್ರಾರಂಭಿಸುವ ಸಾಧ್ಯತೆ ಹಾಗೂ ಇದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....