ಧಾರವಾಡ -
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ ಈ ಒಂದು ಹಿನ್ನೆಲೆಯಲ್ಲಿ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೊಟೇಲ್ ಉದ್ಯಮಿ ಯತೀಂದ್ರ ಶೆಟ್ಟಿ ಅವರು ಕೋರಿದ್ದಾರೆ:
ಶಾಸಕ ವಿನಯ ಕುಲಕರ್ಣಿ ಅವರನ್ನು ಹೋಟೆಲ್ ಉದ್ಯಮಿ ಯತೀಂದ್ರ ಶೆಟ್ಟಿ ಅವರು ಭೇಟಿಯಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ವಿನಯ ಕುಲಕರ್ಣಿ ಅವರಿಗೆ ಪುಷ್ಪಗುಚ್ಛ ನೀಡಿ ಗೌರವ ಪೂರ್ವಕವಾಗಿ ಶುಭ ಹಾರೈಸಿದ ಯತೀಂದ್ರ ಶೆಟ್ಟಿ ಅವರು, ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನ ಸುಖಮಯವಾಗಿರಲಿ, ಉತ್ತಮ ಆರೋಗ್ಯ ಮತ್ತು ಯಶಸ್ಸು ಲಭಿಸಲಿ ಎಂದು ಹಾರೈಸಿದರು.
ಇಬ್ಬರೂ ಆತ್ಮೀಯವಾಗಿ ಭೇಟಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಈ ಭೇಟಿಯ ಕ್ಷಣವು ಆತ್ಮೀಯತೆ ಮತ್ತು ಸ್ನೇಹಭಾವಕ್ಕೆ ಸಾಕ್ಷಿಯಾ ಯಿತು.ಶಾಸಕ ವಿನಯ ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ.....