LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದಲ್ಲಿ ದೀಪಾವಳಿ ಪಟಾಕಿ ಗೆ ಶಾಲಾ ಬಾಲಕ ಸಾವು.....ಛಿದ್ರ ಛಿದ್ರ ವಾಯಿತು ತಲೆ.....

ಕಲಬುರಗಿ -

ರಾಜ್ಯದಲ್ಲಿ ಪಟಾಕಿಗೆ ಮೊದಲ ಬಲಿ  ಕಲಬುರ್ಗಿ ಯಲ್ಲಿ ಹಂದಿಗೆ ಇರಿಸಿದ್ದ ಸ್ಪೋಟಕ ಸಿಡಿದು ಬಾಲಕನ ತಲೆ ಛಿದ್ರ ಹೌದು ಬೆಳೆ ರಕ್ಷಣೆಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಾಗಿ ಕಾಡಾನೆಯೊಂದು ಮೃತಪಟ್ಟ ಘಟನೆ ಮಾಸುವ ಮುನ್ನವೇ, ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹಾಗೂ ಹೃದಯ ವಿದ್ರಾವಕ ದುರಂತ ಸಂಭವಿಸಿದೆ ಕಾಡು ಹಂದಿ ಗಳಿಂದ ಬೆಳೆ ರಕ್ಷಿಸಲು ಹೊಲಗಳಲ್ಲಿ ಇರಿಸಲಾಗುತ್ತಿದ್ದ ಅಪಾಯಕಾರಿ ಸ್ಫೋಟಕವೊಂದನ್ನು ಪಟಾಕಿ ಎಂದು ಭಾವಿಸಿ ಬೆಂಕಿ ಹಚ್ಚಿದ 12 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಹಂದರಕಿ ಗ್ರಾಮದಭೀಮರಾಯ ಹಣಮಂತ ಬುಡಿಲೇರ (12) ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಬಾಲಕನಿಗೆ ಮನೆಯ ಮುಂಭಾಗ ದಲ್ಲಿ ಈ ಸಿಡಿಮದ್ದು ಸಿಕ್ಕಿದೆ. ಅದನ್ನು ಸಾಮಾನ್ಯ ಪಟಾಕಿ ಎಂದೇ ತಿಳಿದುಕೊಂಡ ಬಾಲಕ, ಕುತೂಹ ಲದಿಂದ ಅದಕ್ಕೆ ಕಿಚ್ಚಿಟ್ಟಿದ್ದಾನೆ ಆದರೆ ಕಾಡು ಹಂದಿ ಗಳಿಂದ ಬೆಳೆ ರಕ್ಷಣೆಗೆ ಬಳಸುವ ಈ ಸಿಡಿಮದ್ದುಗಳು ಅತ್ಯಂತ ಶೀಘ್ರವಾಗಿ ಹಾಗೂ ತೀವ್ರವಾಗಿ ಹೊತ್ತಿ ಕೊಳ್ಳುವ ಲಕ್ಷಣ ಹೊಂದಿದ್ದರಿಂದ, ಬೆಂಕಿ ತಗುಲಿದ ಕ್ಷಣಾರ್ಧದಲ್ಲೇ ಭಯಾನಕ ರಭಸದೊಂದಿಗೆ ಸಿಡಿದಿದೆ.

ಸ್ಫೋಟಕದ ಭೀಕರ ತೀವ್ರತೆಗೆ ಬಾಲಕನ ರುಂಡ (ತಲೆ) ಸಂಪೂರ್ಣವಾಗಿ ಛಿದ್ರಗೊಂಡು ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಕಣ್ಣೆದುರೇ ಮಗನ ತಲೆ ಛಿದ್ರವಾಗಿ ಬಿದ್ದಿರುವುದನ್ನು ಕಂಡು ಹೆತ್ತವರ ಮತ್ತು ಕುಟುಂಬ ಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬದ ವೇಳೆ ಯಲ್ಲೇ ನಡೆದಿರುವ ಈ ಭೀಕರ ಘಟನೆಯಿಂದಾಗಿ ಹಂದರಕಿ ಗ್ರಾಮದಲ್ಲಿ ಶೋಕಸಾಗರ ಆವರಿಸಿದ್ದು, ಹೊಲಗಳಲ್ಲಿ ಇಂತಹ ಅಪಾಯಕಾರಿ ಸಿಡಿಮದ್ದು ಮತ್ತು ಅಕ್ರಮ ಸ್ಫೋಟಕಗಳನ್ನು ಇಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಸಂಘಟನೆಯ ಹಿರಿಯ ಹೋರಾಟಗಾರ ಬಾಬು ಮೌರ್ಯ ನಿಧನ.....ಸಂತಾಪ ಸೂಚಿಸಿದ ರಾಜ್ಯದ ಶಿಕ್ಷಕ ಬಂಧುಗಳು.....ಶಾಸಕ ವಿನಯ ಕುಲಕರ್ಣಿ ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....ಸರ್ಕಾರಿ ಶಾಲೆಗಳ ಬಿಸಿಯೂಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ.....ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮೀಡಿಯಂ ಆರಂಭ.....ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭ.....ನಾಡಿನ ಶಿಕ್ಷಕ ಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ರಾಜ್ಯದಲ್ಲಿ ದೀಪಾವಳಿ ಪಟಾಕಿ ಗೆ ಶಾಲಾ ಬಾಲಕ ಸಾವು.....ಛಿದ್ರ ಛಿದ್ರ ವಾಯಿತು ತಲೆ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಹೊಸ ಟಾಸ್ಕ್ ನೀಡಿದ ಶಿಕ್ಷಣ ಸಚಿವರು..... ಹೊಸ ಜವಾಬ್ದಾರಿ ಯಿಂದ ಹೊಸ ಆತಂಕ.....ಹೊಸ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಬೋಧನಾ ಯೋಜನೆ.....ಹೊಸ ಮಾಹಿತಿ ಹಂಚಿಕೊಂಡ ಶಿಕ್ಷಣ ಸಚಿವರು.....ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ.....ಮಾದರಿಯಾದ ಸರ್ಕಾರಿ ಶಾಲಾ ಶಿಕ್ಷಕರು.....ಶಾಸಕ ವಿನಯ ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಹೋಟೆಲ್ ಉದ್ಯಮಿ ಯತೀಂದ್ರ ಶೆಟ್ಟಿ.....