LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸ್ವಯಂ ನಿವೃತ್ತಿ ತೆಗೆದುಕೊಂಡ ಶಿಕ್ಷಕಿ.....

ಹೊಸಪೇಟೆ -

ಲೌಕಿಕ ಆಸ್ತಿಗಿಂತ ಅಂತರಂಗದ ನೆಮ್ಮದಿಯೇ ಶಾಶ್ವತ. ಕರ್ತವ್ಯ ಮುಗಿದ ತೃಪ್ತಿಯಲ್ಲಿ ಕುಟುಂಬ ಮತ್ತು ಅಧ್ಯಾತ್ಮಕ್ಕಾಗಿ ನಿವೃತ್ತಿಯ ಹೆಜ್ಜೆ ಇಡುತ್ತಿದ್ದೇನೆ ಎಂದು ಸ್ವಯಂ ನಿವೃತ್ತಿ ಪಡೆದ ಶಿಕ್ಷಕಿ ಅನ್ನಪೂರ್ಣ ದೇವಿ ಹೇಳಿದರು. ಹೊಸಪೇಟೆತಾಲ್ಲೂಕಿನ ಕಮಲಾಪುರ ಕೆರೆತಾಂಡ ಸರ್ಕಾರಿ ಶಾಲೆಯ ಶಿಕ್ಷಕಿ ಅನ್ನಪೂರ್ಣ ದೇವಿ ಅವರ ಸ್ವಯಂ ನಿವೃತ್ತಿ ಹಿನ್ನಲೆಯಲ್ಲಿ ಶಾಲಾ ಆವರಣದಲ್ಲಿ  ಬೀಳ್ಕೊಡುಗೆ ಸಮಾರಂಭದಲ್ಕಿ ಮಾತನಾಡಿದರು.ಶಿಕ್ಷಕ ವೃತ್ತಿ ಪರಮಾತ್ಮ ನೀಡಿದ ಪ್ರಸಾದವಿದ್ದಂತೆ. ಇಲಾಖೆಯ ಒತ್ತಡಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಕಳೆದ 23 ವರ್ಷಗಳ ಕಾಲ ಯಾವುದೇ ಕುಂದು ಬಾರದಂತೆ, ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಶಾಲೆ ಹಾಗೂ ಸಾರ್ವಜನಿಕರಿಂದ ದೊರೆತ ಪ್ರೀತಿ-ವಿಶ್ವಾಸವೇ ನನ್ನ ಬದುಕಿನ ದೊಡ್ಡ ಆಸ್ತಿ ಎಂದು ಭಾವುಕರಾಗಿ ಸ್ಮರಿಸಿದರು.

ಕೇವಲ ಮನೆ, ಆಸ್ತಿ ಗಳಿಸುವುದೇ ಜೀವನವಲ್ಲ. ಲೌಕಿಕ ಉಪಜೀವನದ ಜತೆಗೆ ಮನುಷ್ಯ ಅಂತ ರಂಗದ ಸಂಪತ್ತನ್ನು ಮಾಡುವುದು ಮುಖ್ಯ. ಯಾವುದೇ ಬಾಹ್ಯ ಒತ್ತಡವಿಲ್ಲದೆ, ಸಂಪೂರ್ಣ ಆತ್ಮತೃಪ್ತಿಯಿಂದ ಸ್ವಯಂ ನಿವೃತ್ತಿ ಪಡೆಯುತ್ತಿದ್ದೇನೆ. ಇನ್ನುಳಿದ ಬದುಕನ್ನು ಅಧ್ಯಾತ್ಮ ಚಿಂತನೆ, ವೈಯಕ್ತಿಕ ಬೆಳವಣಿಗೆ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು ಮೀಸಲಿಡಲಿದ್ದೇನೆ ಎಂದು ಹೇಳಿದರು.

ಅನ್ನಪೂರ್ಣ ದೇವಿ ಅವರ ನಿವೃತ್ತಿಯ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು ಕಣ್ಣೀರಿಟ್ಟು ಭಾವುಕರಾದರು. ತಾಯಿಯಂತೆ ಪ್ರೀತಿಯಿಂದ ವಿದ್ಯಾದಾನ ಮಾಡಿದ ನೆಚ್ಚಿನ ಗುರುಗಳನ್ನು ತಬ್ಬಿಕೊಂಡು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರು ಕಣ್ಣಾಲಿಗಳನ್ನೂ ತೇವಗೊಳಿಸಿತು. ಕಷ್ಟಪಟ್ಟು ತಮ್ಮ ಕಣ್ಣೀರನ್ನು ತಡೆದುಕೊಂಡ ಶಿಕ್ಷಕಿ, ಪ್ರತಿಯೊಬ್ಬ ಮಗುವಿಗೂ ಪ್ರೀತಿಯಿಂದ ಸಮಾಧಾನ ಪಡಿಸಿ, ಆಶೀರ್ವದಿಸಿ ವಿದಾಯ ಹೇಳಿದರು.

ತಾಂಡಾದ ನಾಯಕ ಜಾನ್ಯನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಎಸ್‌.ಎಸ್‌.ನಾಯ್ಕ, ಉಪಾಧ್ಯಕ್ಷೆ ಲಕ್ಷ್ಮೀ ಬಾಯಿ, ಪುರಸಭೆ ಮಾಜಿ ಸದಸ್ಯೆ ಜ್ಯೋತಿಬಾಯಿ, ಶಿಕ್ಷಕರಾದ ಮುಖ್ಯಶಿಕ್ಷಕಿ ಸಂಕ್ರಾಂತಿ, ಬಿ.ಎನ್.ಶಿಲ್ಪಾ, ಎಂ.ಶಿಲ್ಪಾ, ಗುರುಬಸವರಾಜ್, ಕೆ‌.ಬಸವಾರಜ್,ಕಡ್ಲಿ ವೀರಭದ್ರೇಶ, ಬಸವರಾಜ್, ಶಿವಕುಮಾರ್, ಸೋಮಶೇಖರ್ ಇತರರಿದ್ದರು

ಸುದ್ದಿ ಸಂತೆ ನ್ಯೂಸ್ ಹೊಸಪೇಟೆ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 64 ಸಾವಿರ ನೋಟ್ ಬುಕ್ ವಿತರಣೆ.....ಸ್ವಯಂ ನಿವೃತ್ತಿ ತೆಗೆದುಕೊಂಡ ಶಿಕ್ಷಕಿ.....ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ.....ತುಟ್ಟಿಭತ್ಯೆ ಹೆಚ್ಚಳ‌ ಮಾಡಿ ಆದೇಶ.....ಧಾರವಾಡ ಬಿಗ್ ಮಿಶ್ರಾ ಸಂಸ್ಥೆಗೆ ರಾಷ್ಟ್ರಮಟ್ಟದ ಗೌರವದ ಗರಿ.....‘PILLARS OF WMNC 2026’ ವಿಶೇಷ ಮನ್ನಣೆಗೆ ಸಂಜಯ್ ಮಿಶ್ರಾ ಆಹ್ವಾನ.....ದೀಪಾವಳಿ ಹಬ್ಬಕ್ಕೆ ಬಿಗ್ ಮಿಶ್ರಾದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ.....ಮುಂಗಡ ಬುಕ್ಕಿಂಗ್‌ಗೆ ಶೇ.10ರಷ್ಟು ರಿಯಾಯಿತಿ.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ..... ರಾಜ್ಯದಲ್ಲಿ ಕಡಿಮೆಯಾಗದ ಟ್ರ್ಯಾಪ್ ಪ್ರಕರಣ ಗಳು.....ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ ಪಡೆದ ಸರ್ಕಾರಿ ನೌಕರನ ಮೇಲೆ FIR ದಾಖಲು.....ಸರ್ಕಾರಿ ಶಾಲೆಗೆ ಬಂದ ಶಿಕ್ಷಕರಿಗೆ ಶಾಕ್.....15 ತಿಂಗಳಿಂದ ಸಿಕ್ಕಿಲ್ಲ ವೇತನ ಜೀವನವೇ ಕಂಗಾಲು.....ಶಿಕ್ಷಕರ ವೇತನ ಬಿಡುಗಡೆಗೆ ಇಲಾಖೆಯ ಆಯುಕ್ತರ ಭೇಟಿ ಮಾಡಿದ ನೂತನ MLC ಎ.ಪಿ.ರಂಗನಾಥ್.....ಜೈಲು ಸೇರಿದ BEO ಕಚೇರಿ ಅಧೀಕ್ಷಕ‌‌‌‌‌‌....ತನಿಖೆ ಕೈಗೊಂಡ ಲೋಕಾ ಅಧಿಕಾರಿಗಳು.....