LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 64 ಸಾವಿರ ನೋಟ್ ಬುಕ್ ವಿತರಣೆ.....

ಚಳ್ಳಕೆರೆ -

ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿ ಗಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸುಂದರ ಭಾರತ ಪ್ರತಿಷ್ಠಾನ ಹಾಗೂ ನೀಡ್ ಬೇಸ್ ಇಂಡಿಯಾ ಸಂಸ್ಥೆಯ ವತಿಯಿಂದ ಒಟ್ಟು 64 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾ ಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.

ತಾಲ್ಲೂಕಿನ ಬೋಸೆದೇವರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು ಬಿಆರ್‌ಸಿ ಮಂಜುಬಾಬು ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಮಹತ್ವದ ಶೈಕ್ಷಣಿಕ ಪ್ರೋತ್ಸಾಹ ದೊರೆ ತಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಗೆ ಹೆಚ್ಚಿನ ಚೈತನ್ಯ ನೀಡಿದೆ ಎಂದರು.

ಮೊದಲ ಹಂತದಲ್ಲಿ ಬೆಂಗಳೂರಿನ ಸುಂದರ ಭಾರತ ಪ್ರತಿಷ್ಠಾನದ ವತಿಯಿಂದ 7 ಸಾವಿರ ನೋಟ್ ಪುಸ್ತಕ ಗಳನ್ನು ನೀಡಲಾಗಿತ್ತು. ಎರಡನೇ ಹಂತದಲ್ಲಿ ನೀಡ್ ಬೇಸ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ 57 ಸಾವಿರ ನೋಟ್ ಪುಸ್ತಕಗಳನ್ನು ಸರ್ಕಾರಿ ಶಾಲೆ ಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ತಾಲ್ಲೂಕಿನ ಅಂದಾಜು 13 ಸಾವಿರ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ನೆರವು ತಲುಪಿದೆ ಎಂದು ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಆರ್. ಮಾರುತೇಶ್ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಕ್ಷೇತ್ರ ಸಮನ್ವಯಾಧಿಕಾರಿ ಮಂಜುಬಾಬು, ಬಡ್ತಿ ಮುಖ್ಯ ಶಿಕ್ಷಕ ಆರ್.ಮಾರುತೇಶ್, ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.

ಸುದ್ದಿ ಸಂತೆ ನ್ಯೂಸ್ ಚಳ್ಳಕೆರೆ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 64 ಸಾವಿರ ನೋಟ್ ಬುಕ್ ವಿತರಣೆ.....ಸ್ವಯಂ ನಿವೃತ್ತಿ ತೆಗೆದುಕೊಂಡ ಶಿಕ್ಷಕಿ.....ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ.....ತುಟ್ಟಿಭತ್ಯೆ ಹೆಚ್ಚಳ‌ ಮಾಡಿ ಆದೇಶ.....ಧಾರವಾಡ ಬಿಗ್ ಮಿಶ್ರಾ ಸಂಸ್ಥೆಗೆ ರಾಷ್ಟ್ರಮಟ್ಟದ ಗೌರವದ ಗರಿ.....‘PILLARS OF WMNC 2026’ ವಿಶೇಷ ಮನ್ನಣೆಗೆ ಸಂಜಯ್ ಮಿಶ್ರಾ ಆಹ್ವಾನ.....ದೀಪಾವಳಿ ಹಬ್ಬಕ್ಕೆ ಬಿಗ್ ಮಿಶ್ರಾದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ.....ಮುಂಗಡ ಬುಕ್ಕಿಂಗ್‌ಗೆ ಶೇ.10ರಷ್ಟು ರಿಯಾಯಿತಿ.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ..... ರಾಜ್ಯದಲ್ಲಿ ಕಡಿಮೆಯಾಗದ ಟ್ರ್ಯಾಪ್ ಪ್ರಕರಣ ಗಳು.....ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ ಪಡೆದ ಸರ್ಕಾರಿ ನೌಕರನ ಮೇಲೆ FIR ದಾಖಲು.....ಸರ್ಕಾರಿ ಶಾಲೆಗೆ ಬಂದ ಶಿಕ್ಷಕರಿಗೆ ಶಾಕ್.....15 ತಿಂಗಳಿಂದ ಸಿಕ್ಕಿಲ್ಲ ವೇತನ ಜೀವನವೇ ಕಂಗಾಲು.....ಶಿಕ್ಷಕರ ವೇತನ ಬಿಡುಗಡೆಗೆ ಇಲಾಖೆಯ ಆಯುಕ್ತರ ಭೇಟಿ ಮಾಡಿದ ನೂತನ MLC ಎ.ಪಿ.ರಂಗನಾಥ್.....ಜೈಲು ಸೇರಿದ BEO ಕಚೇರಿ ಅಧೀಕ್ಷಕ‌‌‌‌‌‌....ತನಿಖೆ ಕೈಗೊಂಡ ಲೋಕಾ ಅಧಿಕಾರಿಗಳು.....