ಬೆಂಗಳೂರು -
ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆ ಗಳೊಂದಿಗೆ ಜೋಡಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಆರಂಭ ದಲ್ಲಿ 2 ಸಾವಿರ ಸರ್ಕಾರಿ ಶಾಲೆ ಖಾಸಗಿಗೆ ಜೋಡಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದರು'ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಆಶಯದಡಿ ಎರಡು ಸಾವಿರ ಸರ್ಕಾರಿ ಶಾಲೆ ಗಳನ್ನು ಖಾಸಗಿ ಶಾಲೆಗಳ ಜತೆ ಜೋಡಣೆ ಮಾಡ ಲಾಗುವುದು' ಎಂದರು ವಿಧಾನಸೌಧದಲ್ಲಿ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ ಪ್ರತಿನಿಧಿಗಳ ಸಭೆಯಲ್ಲಿ 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸರ್ಕಾರ ಇಂತಹ ನಿರ್ಧಾರ ತೆಗೆದು ಕೊಳ್ಳುತ್ತಿದೆ. 6 ಸಾವಿರ ಪಂಚಾಯಿತಿಗಳಲ್ಲಿ ಮೂರು ವಿಭಾಗ ಮಾಡಲಾಗಿದ್ದು, ಮೊದಲ ಹಂತದಲ್ಲಿ 1 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜತೆ ಜೋಡಿಸಲಾಗುವುದು' ಎಂದರು.'ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ ಸರ್ಕಾರಿ ಶಾಲೆಗೆ ಖಾಸಗಿ ಶಾಲೆ ಹೆಸರು ಸೇರಿಸಲು ಅನುಮತಿ ನೀಡಲಾಗುವುದು. ತಮಿಳುನಾಡಿನ ಗಡಿಯಲ್ಲಿರುವ ಹೆಗ್ಗನೂರು ಶಾಲೆಗೆ, ಹೆಗ್ಗನೂರು ಸರ್ಕಾರಿ ಟೊಯೋಟೊ ಶಾಲೆ ಎಂದು ಹೆಸರು ಬಳಸಿಕೊಳ್ಳಲು ಅವಕಾಶ ಕೊಟ್ಟಿದ್ದೇವೆ' ಎಂದು ಮಾಹಿತಿ ನೀಡಿದರು.
'ಸರ್ಕಾರವು ಖಾಸಗಿ ಶಾಲೆಗಳ ವಿಚಾರವಾಗಿ ಮೃದು ಧೋರಣೆ ಹೊಂದಿದೆ ಗುಣಮಟ್ಟದ ಶಿಕ್ಷಣ,ಸಾಮರ್ಥ್ಯ ಬಹಳ ಚೆನ್ನಾಗಿದೆ. ಅದರ ಸ್ವಲ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬ ಹುದು' ಎಂದು ಹೇಳಿದರು.'ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಗೆ (ಸಿಎಸ್‌ಆರ್) ಹೊಸ ನೀತಿ ರೂಪಿಸಲಾಗಿದೆ. ವಾರ್ಷಿಕ ₹8,800 ಕೋಟಿ ಸಿಎಸ್‌ಆರ್ ನಿಧಿ ಇದೆ. ರಾಜ್ಯದಲ್ಲಿ ನೋಂದಣಿ ಯಾದ ಕೆಲ ಕಂಪನಿಗಳು ಬೇರೆ ರಾಜ್ಯಗಳಲ್ಲಿ ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜತೆಗೂ ಮಾತುಕತೆ ನಡೆಸ ಲಾಗುವುದು' ಎಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ'ವಿಶ್ವಬ್ಯಾಂಕ್‌ನಿಂದ ₹2 ಸಾವಿರ ಕೋಟಿ ಸಾಲ ಮಾಡಿ ಕೆಪಿಎಸ್ ಶಾಲೆ ಗಳಿಗೆ ಬಳಸಿದ್ದೇವೆ. ಸರ್ಕಾರಿ ಶಿಕ್ಷಕರಿಗೆ ಗರಿಷ್ಠ ₹1.5 ಲಕ್ಷ ಸಂಬಳ ಕೊಡಲಾಗುತ್ತಿದೆ. ಆದರೆ ಗುಣಮಟ್ಟ ಸುಧಾರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
'ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಯಾವ ಶಾಲೆಗಳನ್ನು ಪಡೆಯಬೇಕು ಎನ್ನುವ ಆಯ್ಕೆಯು ಸರ್ಕಾರದ ತೀರ್ಮಾನವಾಗಿರುವುದಿಲ್ಲ. ಅನು ಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು ಎಂದರು'ಒಂದು ಖಾಸಗಿ ಶಾಲೆಗೆ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶ ನೀಡ ಲಾಗಿದೆ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಲು ಅವಕಾಶ ನೀಡಲಾಗುತ್ತದೆ.ದುಬಾರಿ ವೆಚ್ಚದ ಕಟ್ಟಡಗಳನ್ನು ಕಟ್ಟಿಕೊಡದೇ ಇದ್ದರೂ ನಿಪುಣ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕಳುಹಿಸಿಕೊಡಬಹುದು. ಸಂಬಳವನ್ನೂ ಖಾಸಗಿಯವರೇ ಭರಿಸಬೇಕು. ಬಸ್ ಸೇವೆ ಲ್ಯಾಬ್ ಕಂಪ್ಯೂಟರ್ ಒದಗಿಸಬೇಕು' ಎಂದರು
'ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಖಾಸಗಿ ಸಂಸ್ಥೆಗಳು ಕಾರ್ಪೊರೇಟ್ ವಲಯ ಕೈಜೋಡಿಸಬೇಕು' ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ 1.12 ಕೋಟಿ ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಯೊಂದು ಮಗುವಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಆತ್ಮವಿಶ್ವಾಸ ವ್ಯಕ್ತಿತ್ವ ವಿಕಸನ ಮತ್ತು ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಕ್ರಮ ಕೈಗೊಳ್ಳಲಾಗಿದೆ' ಎಂದರು.
'ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಮುಂದಿನ ಶೈಕ್ಷಣಿಕ ವರ್ಷದ ಒಳಗೆ 18000 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳ ಲಾಗುತ್ತಿದೆ. ಪ್ರಸ್ತುತ 43553 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ಸರ್ಕಾರದ ಪ್ರಯತ್ನ ಸಾಕಾಗುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಉದ್ಯಮಗಳು ಕಾರ್ಪೊರೇಟ್ ವಲಯ ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಿಎಸ್‌ಆರ್ ಪಾಲುದಾರರ ಸಹಕಾರವೂ ಅಗತ್ಯ' ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....