ಇಂಡಿ -
ಶಿಕ್ಷಕರ ಸೊಸೈಟಿಯ ಸದಸ್ಯರ ಗಮನಕ್ಕೆ ದಿನಾಂಕ 20/09/2026 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ಗುರುಭವನ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಶಿಕ್ಷಕರ ಸೊಸೈಟಿಯ 106 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಸದಸ್ಯರ ಮಕ್ಕಳಿಗೆ SSLC ಯಲ್ಲಿ-10 ಮತ್ತು PUC ಯಲ್ಲಿ 10 ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹೆಚ್ಚಿನ ಠೇವಣಿ ಇಟ್ಟ ಸನ್ಮಾನ್ಯರಿಗೆ ಸನ್ಮಾನ ಸಮಾರಂಭ ಇರುವುದರಿಂದ
ವಲಯುದ ಶಿಕ್ಷಕರ ಸೊಸೈಟಿಯ ಎಲ್ಲ ಸದಸ್ಯರು ಭಾಗವಹಿಸಿ ಸೊಸೈಟಿಯ ಶ್ರೇಯೋಭಿವೃದ್ಧಿಗಾಗಿ ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸಬೇಕಾಗಿ ವಿನಂತಿ. ಮತ್ತು ಮರುದಿನ ಎಲ್ಲ ಸದಸ್ಯರಿಗೆ ಡಿವಿಡೆಂಡ್ ತಮ್ಮ ತಮ್ಮ ಖಾತೆಗೆ ಜಮಾ ಮಾಡಲಾಗುವುದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗುರುಗಳು ಹಾಗೂ ಗುರುಮಾತೆ ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಈ ಮೂಲಕ ಎಲ್ಲ ಸದಸ್ಯರಿಗೆ ತಿಳಿಸಲಾಗಿದೆ
ಅಧ್ಯಕ್ಷರು/ಉಪಾಧ್ಯಕ್ಷರು/ನಿರ್ದೇಶಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ದಿಂದ ಮಾಹಿತಿ ನೀಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಇಂಡಿ......