ಬೆಂಗಳೂರು -
ಪ್ರಾಥಮಿಕ ಶಿಕ್ಷಕರಿಗೆ ಹೊಸದಾಗಿ 'ಬ್ರಿಡ್ಜ್ ಕೋರ್ಸ್' ಜಾರಿ ಮಾಡಲಾಗುತ್ತಿದ್ದು ತಳಮಟ್ಟದಿಂದಲೇ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆ ತೆಗೆದುಕೊಂಡಿದೆ ಹೌದು ಶೈಕ್ಷಣಿಕ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಇದೀಗ ಪ್ರಾಥಮಿಕ ಶಿಕ್ಷಕರಿಗೆ ಹೊಸದಾಗಿ 6 ತಿಂಗಳ ‘ಬ್ರಿಡ್ಜ್ ಕೋರ್ಸ್’ ಜಾರಿಗೊಳಿಸಿದೆ.ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ ಆರು ತಿಂಗಳ ಪ್ರಮಾಣಪತ್ರ (ಬ್ರಿಡ್ಜ್) ಕೋರ್ಸ್ ಗೆ ಚಾಲನೆ ನೀಡಿದ್ದಾರೆ.
ಅಲ್ಲದೆ ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲೆಂದು ಈಗಾಗಲೇ ಸೇವೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬ್ರಿಡ್ಜ್ ಕೋರ್ಸ್ ಸಮಗ್ರ ತರಬೇತಿ ಒದಗಿಸ ಲಿದೆ ಎಂದೂ ಪ್ರತಿಪಾದಿಸಿದ್ದಾರೆ.ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ (PTE) ಆರು ತಿಂಗಳ ಅವಧಿಯ ಈ ಪ್ರಮಾಣಪತ್ರ (ಬ್ರಿಡ್ಜ್) ಕೋರ್ಸ್ ಅನ್ನು ಬಿ.ಇಡಿ. ಪದವಿಧರರು ಮತ್ತು ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ.
ಪ್ರಾಥಮಿಕ ಹಂತದಲ್ಲಿ ಬೋಧನೆಗೆ ಅನುವಾಗುವಂತೆ ಶಿಕ್ಷಕರು ಅಗತ್ಯ ಪ್ರಮಾಣಪತ್ರ ಪಡೆಯಲು ಈ ಹೊಸ ಕೋರ್ಸ್ ಸಹಾಯಕವಾಗಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯ ಬೆಳೆಸಿಕೊ ಳ್ಳಲು ನಿಟ್ಟಿನಲ್ಲಿ ಶಿಕ್ಷಕರಿಗೆ ಸಮಗ್ರ ತರಬೇತಿ ನೀಡಲಿದೆ
‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್’ ಮೂಲಕ ಶಿಕ್ಷಕರಿಗಾಗಿ ಈ ಬ್ರಿಡ್ಜ್ ಕೋರ್ಸ್ ಜಾರಿಗೊಳಿಸುತ್ತಿದ್ದು ಮಕ್ಕಳ ವಿಕಾಸಕ್ಕೆ ಸೂಕ್ತವ ಬೋಧನಾ ಪದ್ಧತಿ ಅಳವಡಿಕೆಗೆ ಶಿಕ್ಷಕರನ್ನು ಸಜ್ಜುಗೊಳಿಸುವುದು ಹಾಗೂ ತಳಹದಿಯಿಂದಲೇ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....