ಬೆಳಗಾವಿ -
ಚಿಕ್ಕೋಡಿ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಲ್ಲಿ ಕಂಡು ಬಂದ ನ್ಯೂನತೆ ಅನುಸಾರ 232 ಸರ್ಕಾರಿ ನೌಕರರ ಮೇಲೆ 27 ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಚಿಕ್ಕೋಡಿಯ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿ ರುವ ಸಾರ್ವಜನಿಕರಿಗೆ ವಿವಿಧ ಸೌಲಭ್ಯ ಸಕಾಲಕ್ಕೆ ಸಿಗದಿರುವ ಬಗ್ಗೆ ದೂರು ಬಂದಿದ್ದವು
ಈ ಹಿನ್ನೆಲೆಯಲ್ಲಿ ಎರಡು ದಿನ ಸರಣಿಯಂತೆ, ವಿವಿಧ ಇಲಾಖೆಗಳ ಕಚೇರಿಗಳು, ಆಸ್ಪತ್ರೆಗಳು, ಗ್ರಾಮ ಪಂಚಾಯಿತಿಗಳು,ಹಾಸ್ಟೆಲ್‌ಗಳಿಗೆ ಉಪಲೋಕಾಯು ಕ್ತರು ಭೇಟಿ ನೀಡಿ ಸಂಚಲನ ಮೂಡಿಸಿದ್ದರು 'ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತದ ರಜಿಸ್ಟರ್ ಪರಿಶೀಲಿಸಿ ದಾಗ, ಅದರಲ್ಲಿ ತಾಯಿ ಕಾರ್ಡ್ ಸಂಖ್ಯೆ, ಆಧಾರ್ ಗುರುತಿನ ಚೀಟಿ ಸಂಖ್ಯೆ, ಒಪ್ಪಿಗೆ ಪತ್ರ ಮತ್ತು ವಯಸ್ಸಿನ ಪುರಾವೆ ಇರಲಿಲ್ಲ.
ಆಸ್ಪತ್ರೆಗೆ ಬರುವ ಗರ್ಭಿಣಿಯರು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿದ ಫಲಿತಾಂಶ ಪರಾಮರ್ಶಿಸದೆ ಸರ್ಕಾರಿ ಪ್ರಯೋಗಾಲ ಯಗಳಲ್ಲಿ ಪರೀಕ್ಷೆಗೆ ಸೂಚಿಸದೆ ಅಕ್ರಮವಾಗಿ ಗರ್ಭಪಾತ ಮಾಡುತ್ತಿರುವುದು ದಾಖಲೆಗಳಿಂದ ಕಂಡುಬಂದಿದೆ' ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಊಟದ ಸಮಯ ಬದಲಿಸಿ: 'ನಾನು ಚಿಕ್ಕೋಡಿ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 2.15ಕ್ಕೆ ಭೇಟಿ ನೀಡಿದಾಗ, ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಆದರೆ, ಬಸ್‌ಗಳ ಚಾಲಕರು ಊಟಕ್ಕೆ ಹೋಗಿದ್ದರಿಂದ ಪ್ರಯಾಣಿಕರು ಪರದಾ ಡುವಂತಾಗಿತ್ತು. ಹಾಗಾಗಿ ಚಾಲಕರ ಊಟದ ಸಮಯವನ್ನು ಮಧ್ಯಾಹ್ನ 1ರಿಂದ 1.30ಕ್ಕೆ ಬದಲಿಸಬೇಕು' ಎಂದು ಆದೇಶಿಸಿದ್ದಾರೆ.
ಕನಿಷ್ಠ ವೇತನ ಸಿಗುತ್ತಿಲ್ಲ: 'ಚಿಕ್ಕೋಡಿಯ ಬಸ್ ನಿಲ್ದಾಣ, ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ಎಪಿಎಂಸಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ಜರುಗಿಸಿಲ್ಲ. ಈ ವರ್ಷ ಕಾರ್ಮಿಕ ಕಾಯ್ದೆಯಡಿ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ ಎಂದು ತಿಳಿಸಿಲ್ಲ' ಎಂದು ವೀರಪ್ಪ ಹೇಳಿದ್ದಾರೆ.
'ಚಿಕ್ಕೋಡಿ ಪುರಸಭೆ ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರ ಪೈಕಿ, ಹಲವರು ತಮ್ಮ ವೇತನಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ದಾರೆ. ಒಬ್ಬ ಸಿಬ್ಬಂದಿ ಅನಧಿಕೃತವಾಗಿ ಚಿಟ್ ಫಂಡ್ ವ್ಯವಹಾರ ಮಾಡುತ್ತಿದ್ದಾರೆ' ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ.....