LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ ಮನವಿ.....

ಹಾವೇರಿ -

ಆರೋಗ್ಯ ಇಲಾಖೆಯ ನೌಕರರ ಬಗ್ಗೆ ಬೇಜವಾಬ್ದಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‍ಒ) ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿ ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರು ಮನವಿ ಸಲ್ಲಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಸಿಎಚ್‌ಒ ಸಂಘಟನೆಯ ಪದಾಧಿಕಾರಿಗಳು ಹೇಳಿಕೆ ನೀಡಿದ್ದರು ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅದನ್ನು ಗಮನಿಸಿದ್ದ ಕಾಯಂ ನೌಕರರು, ಸಿಎಚ್‌ಒ ಪದಾಧಿಕಾರಿಗಳ ಹೇಳಿಕೆ ಆಕ್ರೋಶ ಹೊರಹಾಕುತ್ತಿ ದ್ದಾರೆ. ಜಿಲ್ಲೆಯಲ್ಲಿಯೂ ಸಿಎಚ್‌ಒ ಸಂಘಟನೆ ಪದಾಧಿಕಾರಿಗಳ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. 'ಕಾಯಂ ನೌಕರರ ಪರವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಸಿಎಚ್‌ಒ ಸಂಘಟನೆ ಪದಾಧಿ ಕಾರಿಗಳನ್ನು ತಾತ್ಕಾಲಿಕ ಕೆಲಸದಿಂದಲೇ ವಜಾ ಮಾಡಬೇಕು' ಎಂದು ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ.

ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಜಿಲ್ಲಾ ಆರೋಗ್ಯಾಧಿಕಾರಿ ನಾಗರಾಜ್ ಅವರನ್ನು ನಿಯೋಗದ ಮೂಲಕ ಭೇಟಿಯಾದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿ ಕಾರಿ ಗಳು, ಮನವಿ ಸಲ್ಲಿಸಿದರು.ಎನ್‍ಎಚ್‍ಎಂ ಯೋಜನೆ ಯಡಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿ ರುವ ಸಮುದಾಯ ಆರೋಗ್ಯ ಅಧಿಕಾರಿ ಗಳು, ಪ್ರತಿಭಟನೆ ಸಂದರ್ಭದಲ್ಲಿ ಕಾಯಂ ನೌಕರರ ಬಗ್ಗೆ ಅವಹೇಳ ನಕಾರಿ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಗಳ ಮೂಲಕ ಕಾಯಂ ನೌಕರರಿಗೆ ಅವಮಾನ ಮಾಡು ತ್ತಿದ್ದಾರೆ. ಈ ವರ್ತನೆ ಸರಿಯಲ್ಲ' ಎಂದು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದರು.

'ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದ ಸಿಎಚ್‌ಒ ಸಂಘದ ಪದಾ ಧಿಕಾರಿಗಳು, 'ಆರೋಗ್ಯ ಇಲಾಖೆಯ ಕಾಯಂ ನೌಕರರಾದ ಆರೋಗ್ಯ ನಿರೀಕ್ಷಣಾಧಿಕಾರಿ (ಎಚ್‍ಐಒ) ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು (ಪಿಎಚ್‍ಸಿಒ) ಯಾವುದೇ ಕೆಲಸ ಮಾಡುವುದಿಲ್ಲ. ಎಲ್ಲ ಕೆಲಸ ವನ್ನೂ ನಾವೇ ಮಾಡುವಂತಾಗಿದೆ' ಎಂದು ಹೇಳಿಕೆ ನೀಡಿದ್ದಾರೆ' ಎಂದು ಹೇಳಿದರು.

ನಮ್ಮ ಕೆಲಸದ ಉತ್ಸಾಹ ಕುಂದಿ ಸುವ ರೀತಿಯಲ್ಲಿ ಸಿಎಚ್‍ಒ ಸಂಘಟನೆ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ' ಎಂದು ದೂರಿದರು.ಆಯುಕ್ತರಿಗೆ ಮಾಹಿತಿ: ಮನವಿ ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ನಾಗರಾಜ್, 'ನಿಮ್ಮ ಮನವಿಯ ವಿಷಯ ವನ್ನು ಆಯುಕ್ತರಿಗೆ ತಿಳಿಸಲಾ ಗುವುದು' ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಕಂಬಳಿ, ಖಜಾಂಚಿ ಸುಧಾ ಕಾಮಣ್ಣವರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಅಧ್ಯಕ್ಷರಾದ ಪುಷ್ಪಾ ಕೊಪ್ಪದ, ಸರೋಜಾ ಹರಿಜನ, ಜಿಲ್ಲಾ ನೌಕರರ ಸಂಘದ ನಿರ್ದೇಶಕ ಪರಮೇಶ ಪಾಟೀಲ, ಅಣ್ಣಪ್ಪ ತೋಟದ, ಸಿದ್ಧಿ ಸಿಸ್ಟರ್, ಚಂದ್ರಶೇಖರ ಹಿತ್ತಲಮನಿ ಹಾಗೂ ಇತರರು ಇದ್ದರು

ಸುದ್ದಿ ಸಂತೆ ನ್ಯೂಸ್ ಹಾವೇರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST