LIVE TV LocalCrimeNationalInternationalPoliticsEducationTechnologyEntertainmentSportsFeature
State News

CM ಪದಕ ವಿಜೇತ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು.....

ಕಲಬುರಗಿ -

ಅಕ್ಕಿ ಕಳ್ಳರ ಜತೆ ಪೊಲೀಸರ 'ಡೀಲ್': ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಸೇರಿ ನಾಲ್ವರು ಅಮಾನತು ಹೌದು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ, ಪ್ರಕರಣ ದಾಖಲಿಸದೆ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಆಳಂದ ಸಿಪಿಐ ಸೇರಿ ನಾಲ್ವರನ್ನು ಅಮಾನತ್ತುಗೊಳಿಸಲಾಗಿದೆ

ಮುಖ್ಯಮಂತ್ರಿ ಪದಕ ವಿಜೇತ, ಆಳಂದ ಸಿಪಿಐ ಶರಣಬಸಪ್ಪ ಕೋಡ್ಲಾ ಸೇರಿ ನಾಲ್ವರು ಸಿಬ್ಬಂದಿಯೇ ಅಮಾನತ್ತುಗೊಂಡಿದ್ದಾರೆ.ಸಿಪಿಐ ಶರಣಬಸಪ್ಪ ಕೋಡ್ಲಾ, ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಹಾಗೂ ಸಾಯಬಣ್ಣ ಅಮಾನತುಗೊಂಡವರಾಗಿದ್ದಾರೆ

112ಕ್ಕೆ ದೂರು ಬಂದ ಮಾಹಿತಿ ಆಧರಿಸಿ ಆಳಂದ ಪೊಲೀಸರು ಆಳಂದ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ವನ್ನು ಜಪ್ತಿ ಮಾಡಿದ್ದರು. ವಾಹನವನ್ನು ಠಾಣೆಗೆ ತಂದ ಬಳಿಕ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ₹1 ಲಕ್ಷಕ್ಕೆ 'ಡೀಲ್' ನಡೆಸಿ ವಾಹನವನ್ನು ಬಿಟ್ಟು ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು

ಈ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಗೃಹ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗಿ, ತನಿಖೆಯಲ್ಲಿ ಕರ್ತವ್ಯ ಲೋಪ ಹಾಗೂ ಪ್ರಕರಣದ ನಿರ್ವಹಣೆಯಲ್ಲಿ ನಿಯಮಬಾಹಿರ ನಡೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಿಪಿಐ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.

ಮುಖ್ಯಮಂತ್ರಿ ಪದಕ ಪಡೆದಿದ್ದ ಆಳಂದ ಸಿಪಿಐ ಶರಣಬಸಪ್ಪ ಕೋಡ್ಲಾ ಅವರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದು ಅಮಾನತು ಕ್ರಮಕ್ಕೆ ಒಳಗಾಗಿರುವುದು ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಲಾಗಿದೆ.

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಜಪ್ತಿ ಮಾಡಿದ ಬಳಿಕ ನಡೆದಿರುವ ಬೆಳವಣಿಗೆ, ವಾಹನ ಬಿಟ್ಟುಕಳುಹಿಸಿದ ಆರೋಪ ಹಾಗೂ ಹಣದ ವ್ಯವಹಾರದ ಕುರಿತು ಇಲಾಖಾ ತನಿಖೆಯಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತಿ ಯೋಜನೆಗೆ ಬಂತು 15 ಮಹತ್ವದ ಬದಲಾವಣೆಗಳು.....ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....ದಯಮಾಡಿ ಶಿಕ್ಷಕರ ವರ್ಗಾವಣೆ ಮಾಡಿ‌ ಮಾಡಿ ಆರಂಭಗೊಂಡ ಅಭಿಯಾನ‌.....ನೂತ‌ನ CEO ರನ್ನು ಸ್ವಾಗತ ಕೋರಿದ ಸರ್ಕಾರಿ ನೌಕರರ ಟೀಮ್.....ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಜನವರಿ 1, 2026 ರಿಂದ ಬಾಕಿ ವೇತನ ಇಲ್ಲಿದೆ ಲೆಕ್ಕಾಚಾರ.....ರಾಜ್ಯ ಸರ್ಕಾರಿ ನೌಕರರ ಮಹತ್ವದ ಸಭೆ..... ನಿವೃತ್ತಿಯಾದ ನೌಕರರಿಗೆ ಸನ್ಮಾನ ಗೌರವ.... ‌ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬಜೆಟ್ ಕುಸಿತ.....ಆತಂಕದಲ್ಲಿ ಕ್ಷೇತ್ರ.....ಶಿಕ್ಷಕಿ ಪೊಟೊ ಗಳು ವೈರಲ್.....ಶಾಲೆಯಲ್ಲಿ ಶಿಕ್ಷಕಿ ಮಾಡಿದ ಕೆಲಸ ನೋಡಿ.....ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಅರ್ಜಿ ಆಹ್ವಾನ.....ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....