LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ ಮುಂದುವರೆದ ಪ್ರತಿಭಟನೆ.....

ಬೆಂಗಳೂರು -

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹೋರಾಟ ತೀವ್ರಗೊಂಡಿದೆ ಹೌದು ಸರಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊ ರೇಟ್ ಕಂಪೆನಿಗಳಿಗೆ ದತ್ತು ನೀಡುವ ಅಥವಾ ಮೆಂಟರ್ಶಿಪ್ ಯೋಜನೆಯನ್ನು ಕೈಬಿಡ ಬೇಕು ಹಾಗೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪ ಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸರಕಾರಿ ಶಾಲೆ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

ನ.26ರಿಂದ ಆರಂಭವಾಗಿರುವ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕ ಮಹಿಳೆಯರು, ವಿದ್ಯಾರ್ಥಿಗಳು, ಪೋಷಕರು,ಶಿಕ್ಷಣ ಹಕ್ಕು ಹೋರಾಟ ಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೂ ವೇದಿಕೆ ಆಗ್ರಹಿಸಿದೆ.

ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ,ಮೂರು ದಿನಗಳಿಂದ ಕೂಲಿ ಕೆಲಸ ಮಾಡುವ ಮಹಿಳೆಯರು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಅಹೋರಾತ್ರಿ ಧರಣಿ ನಡೆಸುತ್ತಿ ದ್ದಾರೆ. ಆದರೆ ಅವರ ಹಕ್ಕೊತ್ತಾಯಗಳನ್ನು ಆಲಿಸ ಬೇಕಾದ ಶಿಕ್ಷಣ ಸಚಿವ ಕನಿಷ್ಠ ಸ್ಪಂದನೆಯನ್ನೂ ನೀಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರು, ಮೂಲಸೌಕರ್ಯ ಮತ್ತು ಅನುದಾನ ಒದಗಿಸುವ ಬದಲು ಖಾಸಗಿ ಸಂಸ್ಥೆಗಳು ಹಾಗೂ ಕಾರ್ಪೊ ರೇಟ್ ಕಂಪೆನಿಗಳಿಗೆ ಶಾಲೆಗಳನ್ನು ದತ್ತು ಅಥವಾ ಮೆಂಟರ್ಶಿ ಪ್‍ಗೆ ನೀಡುವ ಸರಕಾರದ ನೀತಿ ಸಾರ್ವಜನಿಕ ಶಿಕ್ಷಣದ ಆಶಯಕ್ಕೆ ವಿರುದ್ಧವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾ ನಕ್ಕೂ ಸರಕಾರ ಕನಿಷ್ಠ ಕ್ರಿಯಾ ಯೋಜನೆ ರೂಪಿಸಿಲ್ಲ ಎಂದು ನಿರಂಜನಾರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೆರೆ ಮಾತನಾಡಿ, ರಾಜ್ಯದ ಪ್ರತಿ ಯೊಂದು ಮಗುವಿಗೂ ಶಿಕ್ಷಣದ ಹಕ್ಕು ಖಾತ್ರಿಪಡಿ ಸಲು ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು. ಶಾಲಾವಾರು ಅಗತ್ಯಗಳು, ಶಿಕ್ಷಕರ ನೇಮಕಾತಿ, ಮೂಲಸೌಕರ್ಯ, ಅನುದಾನ ಹಾಗೂ ಅನುಷ್ಠಾ ನದ ಕಾಲಮಿತಿಯನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸರಕಾರ ರೂಪಿಸಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಸರಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೊ ರೇಟ್ ಕಂಪೆನಿಗಳಿಗೆ ದತ್ತು ಅಥವಾ ಮೆಂಟರ್ಶಿಪ್‍ಗೆ ನೀಡುವ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕು. ಸರಕಾರಿ ಶಾಲೆಗಳ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು. ಸಾರ್ವಜನಿಕ ಶಿಕ್ಷಣದ ಆಡಳಿತ, ಹೊಣೆಗಾರಿಕೆ ಮತ್ತು ನಿಯಂತ್ರಣ ಸರಕಾರದ ಬಳಿಯೇ ಇರಬೇಕು ಎಂದು ಸರೋವರ್ ಬೆಂಕಿಕೆರೆ ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಸಚಿವ ಡಾ.ಅಜಯ್ ಸಿಂಗ್ ಹೋರಾಟಗಾರರ ಮನವಿ ಯನ್ನು ಸ್ವೀಕರಿಸಿ ಮಾತನಾಡಿದರು. ಸರಕಾರ ನಿಮ್ಮ ಪರವಾಗಿದೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರ ಸಿದ್ಧವಿದೆ. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಚಿವರ ಭರವಸೆಯನ್ನು ಸ್ವಾಗತಿಸಿದ ಹೋರಾಟ ಗಾರರು, ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಗಳೊಂದಿಗೆ ನೇರ ಸಭೆ ನಡೆಯಬೇಕು ಹಾಗೂ ಸ್ಪಷ್ಟವಾದ ಲಿಖಿತ ಭರವಸೆ ದೊರೆಯಬೇಕು ಎಂದು ಒತ್ತಾಯಿಸಿದರು. ಅಲ್ಲಿಯವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅದರಂತೆ ಮುಖ್ಯಮಂತ್ರಿಗಳೊಂದಿಗಿನ ಸಭೆ ನಿಗದಿ ಯಾಗುವವರೆಗೆ ಫ್ರೀಡಂಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ.

ಧರಣಿಯಲ್ಲಿ ಗ್ರಾಹಕರ ಸಂಘಟನೆಯ ಪ್ರಮುಖರಾದ ವಿದ್ಯಾ ಪಾಟೀಲ್, ಅಭಯ್, ಪೋಷಕರ ಸಂಘಟನೆ ಯ ಅಧ್ಯಕ್ಷ ಯೋಗಾನಂದ, ಎಸ್‍ಡಿಎಂಸಿ ಸಮನ್ವಯ ವೇದಿಕೆಯ ಕೆ.ಆರ್.ಸೌಮ್ಯ, ವಿದ್ಯಾರ್ಥಿ ಮುಖಂಡ ದುರ್ಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.... ‌

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ರಾಫಿಕ್ ಚಲನ್ ಮೆಸೇಜ್‌ಗಳ ಹಿಂದೆ ಅಡಗಿದೆ ಭಾರಿ ಅಪಾಯ.....ಅಪ್ಪಿ ತಪ್ಪಿ ಈ ಆಪ್ ಟಚ್ ಮಾಡಿದರೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ ಬ್ಯಾಂಕ್ ಖಾತೆ ಹುಷಾರಾಗಿರಿ.....ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ ಮುಂದುವರೆದ ಪ್ರತಿಭಟನೆ.....ಮೊಟ್ಟೆ,ಬಾಳೆಹಣ್ಣು ವಿತರಣೆ ನಿಲ್ಲಿಸುವ ಪತ್ರ ನೀಡಿದ ಶಿಕ್ಷಕರು.....ಮೌನವಾಗಿದ್ದಾರೆ ಅಧಿಕಾರಿಗಳು.....ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ 82 ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ..... ‌ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ಡಿಸೆಂಬರ್ 1 ರಿಂದ ಸ್ಥಗಿತವಾಗಲಿದೆ ಬಾಳೆಹಣ್ಣು, ಮೊಟ್ಟೆ ವಿತರಣೆ.....ಜೈಲು ಸೇರಿದ ಅಕ್ಷರ ದಾಸೋಹ ಅಧಿಕಾರಿ.....ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ.....ಮುಖ್ಯಶಿಕ್ಷಕ, ಶಿಕ್ಷಕಿ ಮೇಲೆ FIR ದಾಖಲು.....