LIVE TV LocalCrimeNationalInternationalPoliticsEducationTechnologyEntertainmentSportsFeature
State News

ಟ್ರಾಫಿಕ್ ಚಲನ್ ಮೆಸೇಜ್‌ಗಳ ಹಿಂದೆ ಅಡಗಿದೆ ಭಾರಿ ಅಪಾಯ.....ಅಪ್ಪಿ ತಪ್ಪಿ ಈ ಆಪ್ ಟಚ್ ಮಾಡಿದರೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ ಬ್ಯಾಂಕ್ ಖಾತೆ ಹುಷಾರಾಗಿರಿ.....

ಬೆಂಗಳೂರು -

ಮೊಬೈಲ್ ಬಳಕೆದಾರರೇ ಎಚ್ಚರ ನೀವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದೀರಿ ಎಂದು ಮೊಬೈಲ್‌ ಗೆ ಬರುವ ನಕಲಿ ಇ-ಚಲನ್ ಸಂದೇಶಗಳು ಈಗ ಸೈಬರ್ ವಂಚಕರ ಪ್ರಮುಖ ಅಸ್ತ್ರವಾಗಿ ಬದಲಾಗಿವೆ. ಇಂತಹ ಸಂದೇಶಗಳಲ್ಲಿ ಕಳುಹಿಸಲಾಗುವ ನಕಲಿ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದ ರಿಂದ ನಿಮ್ಮ ಮೊಬೈಲ್ ಸುರಕ್ಷತೆಗೆ ಭಾರಿ ಧಕ್ಕೆಯಾ ಗುವುದಲ್ಲದೆ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಕಣ್ಮರೆಯಾಗುವ ಅಪಾಯವಿದೆ.ಈ ವಂಚನೆ ಕೇವಲ ಒಂದು ಸಣ್ಣ ಸಂದೇಶದಿಂದ ಪ್ರಾರಂಭವಾಗುತ್ತದೆ. ಏಪ್ರಿಲ್ 2026ರಲ್ಲಿ ಬೆಳಕಿಗೆ ಬಂದ ಪ್ರಕರಣವೊಂ ದರಲ್ಲಿ, ಅಹಮದಾಬಾದ್‌ನ ನಿಕೋಲ್ ಪ್ರದೇಶದ 50 ವರ್ಷದ ಅಕೌಂಟೆಂಟ್ ಒಬ್ಬರಿಗೆ ಅವರ ಮಾಲೀಕರ ವಾಟ್ಸಾಪ್ ನಂಬರ್‌ನಿಂದ 'RTO E-challan.apk' ಎಂಬ ಫೈಲ್ ಬಂದಿತ್ತು ಅದನ್ನು ಸರ್ಕಾರದ ಅಧಿಕೃತ ಚಲನ್ ಎಂದು ಭಾವಿಸಿದ ಅವರು, ತಕ್ಷಣವೇ ಆ ಫೈಲ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರು.

ಇದರ ಬೆನ್ನಲ್ಲೇ ಅವರ ಮೊಬೈಲ್ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದ್ದ ಸೈಬರ್ ವಂಚಕರು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 10.7 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ ಅಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ ಸಾಲವನ್ನೂ ಪಡೆದುವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸೈಬರ್ ಖದೀಮರು ನಕಲಿ ದಂಡದ (ಚಲನ್) ಸಂದೇಶಗಳನ್ನು ಕಳುಹಿಸಿ, ಬಳಕೆದಾರರಿಂದ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿಸುತ್ತಾರೆ.

ಇಂತಹ ಅಪಾಯಕಾರಿ ಆಯಪ್‌ಗಳು ಫೋನ್‌ ನಲ್ಲಿರುವ ಸೂಕ್ಷ್ಮ ಮಾಹಿತಿ ಹಾಗೂ ಬ್ಯಾಂಕಿಂಗ್ ವಿವರಗಳನ್ನು ಸುಲಭವಾಗಿ ಕದಿಯುತ್ತವೆ. ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ OTP ಗಳನ್ನು ಪಡೆದು ಕೊಂಡು, ಬಳಕೆದಾರರ ಅರಿವಿಲ್ಲದೆಯೇ ಅನಧಿಕೃತ ಆರ್ಥಿಕ ವಹಿವಾಟುಗಳನ್ನು ನಡೆಸುತ್ತವೆ.ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ಬರುವ ಅಪರಿಚಿತ APK ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಇನ್‌ಸ್ಟಾಲ್ ಮಾಡಬೇಡಿ ನಿಮ್ಮ ವಾಹನದ ಮೇಲೆ ನಿಜವಾಗಿಯೂ ಚಲನ್ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ಪೋರ್ಟಲ್ ಆದ https://echallan.parivahan.gov.in ನಲ್ಲಿ ಮಾತ್ರ ಪರಿಶೀಲಿಸಿ.

ಅನುಮಾನಾಸ್ಪದ ಲಿಂಕ್‌ಗಳಲ್ಲಿ ನಿಮ್ಮ ಬ್ಯಾಂಕಿಂಗ್ ವಿವರಗಳು ಅಥವಾ OTP ಗಳನ್ನು ನಮೂದಿಸಬೇಡಿ ಅಪ್ಪಿತಪ್ಪಿ ಅನುಮಾನಾಸ್ಪದ ಆಯಪ್ ಇನ್‌ಸ್ಟಾಲ್ ಆಗಿದ್ದರೆ, ತಕ್ಷಣವೇ ಮೊಬೈಲ್ ಇಂಟರ್ನೆಟ್ ಸ್ಥಗಿತ ಗೊಳಿಸಿ, ಆ ಆಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ ಒಂದು ವೇಳೆ ಖಾತೆಯಿಂದ ಹಣ ಕಡಿತಗೊಂಡರೆ, ತಡಮಾಡದೆ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ರಾಫಿಕ್ ಚಲನ್ ಮೆಸೇಜ್‌ಗಳ ಹಿಂದೆ ಅಡಗಿದೆ ಭಾರಿ ಅಪಾಯ.....ಅಪ್ಪಿ ತಪ್ಪಿ ಈ ಆಪ್ ಟಚ್ ಮಾಡಿದರೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ ಬ್ಯಾಂಕ್ ಖಾತೆ ಹುಷಾರಾಗಿರಿ.....ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ ಮುಂದುವರೆದ ಪ್ರತಿಭಟನೆ.....ಮೊಟ್ಟೆ,ಬಾಳೆಹಣ್ಣು ವಿತರಣೆ ನಿಲ್ಲಿಸುವ ಪತ್ರ ನೀಡಿದ ಶಿಕ್ಷಕರು.....ಮೌನವಾಗಿದ್ದಾರೆ ಅಧಿಕಾರಿಗಳು.....ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ 82 ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ..... ‌ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ನಾಲ್ಕು ತಿಂಗಳಿನಿಂದ ಬಿಡುಗಡೆ ಆಗದ ಅನುದಾನ ಡಿಸೆಂಬರ್‌ 1ರಿಂದಲೇ ಶಾಲಾ ಮಕ್ಕಳ ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಬ್ರೇಕ್‌.....ಡಿಸೆಂಬರ್ 1 ರಿಂದ ಸ್ಥಗಿತವಾಗಲಿದೆ ಬಾಳೆಹಣ್ಣು, ಮೊಟ್ಟೆ ವಿತರಣೆ.....ಜೈಲು ಸೇರಿದ ಅಕ್ಷರ ದಾಸೋಹ ಅಧಿಕಾರಿ.....ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ.....ಮುಖ್ಯಶಿಕ್ಷಕ, ಶಿಕ್ಷಕಿ ಮೇಲೆ FIR ದಾಖಲು.....