LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಾಲಾ ಪ್ರವಾಸದಲ್ಲಿ ಬಹುದೊಡ್ಡ ದುರಂತ ಎಂಟು ವಿದ್ಯಾರ್ಥಿ ಗಳು‌ ಸಾವು.....

ಮಹಾರಾಷ್ಟ್ರ -

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದಿವಿಯಾಗರ್ ಗೆ ಪಿಕ್ನಿಕ್ ಗೆ ತೆರಳಿದ್ದ ಎಂಟು ವಿದ್ಯಾರ್ಥಿಗಳು ಸಮುದ್ರ ದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಮೃತಪಟ್ಟಿರುವ ಎಲ್ಲಾ ವಿದ್ಯಾರ್ಥಿಗಳೂ 16 ವರ್ಷ ವಯಸ್ಸಿನ ವಯೋಮಾನ ದವರಾಗಿದ್ದು ಸ್ಥಳೀಯ ಕೋಚಿಂಗ್ ಸಂಸ್ಥೆ 'ವಿನ್ನರ್ಸ್ ಅಕಾಡೆಮಿ ವತಿಯಿಂದ ಸಮುದ್ರ ತೀರಕ್ಕೆ ಪಿಕ್ನಿಕ್ ಗೆ ತೆರಳಿದ್ದರು ಎನ್ನಲಾಗಿದೆ.

11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಮೃತದೇಹ ವನ್ನು ಅಲಂಡಿಗೆ ತರಲಾಗಿದ್ದು, ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿತ್ತು.ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯೊಬ್ಬರು, "ಈ ಘಟನೆಯಿಂದ ನಮಗೆ ಆಘಾತವಾಗಿದೆ. ವಿದ್ಯಾರ್ಥಿಗಳ ಸಾವಿಗೆ ಸಂತಾಪ ಸೂಚಿಸಲು ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಬಂದ್ ಗೆ ಕರೆ ನೀಡಿದ್ದಾರೆಂದರು

ಮೃತಪಟ್ಟಿರುವ ವಿದ್ಯಾರ್ಥಿಗಳಲ್ಲಿ ರಾಜ್ ವೀರ್ ವಹಿಲೆ, ಸೋಹಂ ಬಂಡ್ವಾಲ್ಕರ್, ಸುಮಿತ್ ಅಹಿರೆ ಹಾಗೂ ತನ್ಮಯ್ ವಹಿಲೆಯ ಅಂತ್ಯಕ್ರಿಯೆಯನ್ನು ಇನ್ನಿಬ್ಬರು ವಿದ್ಯಾರ್ಥಿಗಳ ಅಂತ್ಯಸಂಸ್ಕಾರವನ್ನು ಅಲಂಡಿಯಲ್ಲಿ ನೆರವೇರಿಸಲಾಗುತ್ತದೆ. ಕೌಸ್ತುಭ್ ದೌಂದ್ ಮತ್ತು ಯಶ್ ವಾಂಖೇಡೆಯ ಮೃತದೇಹಗ ಳನ್ನು ಕ್ರಮವಾಗಿ ಅಹಿಲ್ಯಾನಗರ್ ಜಿಲ್ಲೆಯ ರಹುರಿ ಹಾಗೂ ಅಮರಾವತಿಗೆ ಕೊಂಡೊಯ್ದು, ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

25 ಬಾಲಕರು, 17 ಬಾಲಕಿಯರು ಹಾಗೂ ಆರು ಶಿಕ್ಷಕರನ್ನೊಳಗೊಂಡ ತಂಡವೊಂದು ಸಮುದ್ರ ತೀರ ಹಾಗೂ ಐತಿಹಾಸಿಕ ದೇವಾಲಯಗಳಿಗೆ ಪ್ರಸಿದ್ಧವಾದ ದಿವಿಯಾಗರ್ ಗೆ ಪಿಕ್ನಿಕ್ ಗೆಂದು ತೆರಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪೈಕಿ ಎಂಟು ಮಂದಿ ವಿದ್ಯಾರ್ಥಿಗಳು ಈಜಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ, ಸಮುದ್ರದ ಆಳ ಹಾಗೂ ಪ್ರವಾಹವನ್ನು ಅಂದಾಜಿಸಲು ವಿಫಲರಾದ ಅವರು, ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶೋಧ ಮತ್ತು ರಕ್ಷಣಾ ತಂಡಗಳು,ಮೃತದೇಹಗಳನ್ನು ವಶಪಡಿ ಸಿಕೊಂಡವು ಎಂದು ಅವರು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಹಾರಾಷ್ಟ್ರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತಿ ಯೋಜನೆಗೆ ಬಂತು 15 ಮಹತ್ವದ ಬದಲಾವಣೆಗಳು.....ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....ದಯಮಾಡಿ ಶಿಕ್ಷಕರ ವರ್ಗಾವಣೆ ಮಾಡಿ‌ ಮಾಡಿ ಆರಂಭಗೊಂಡ ಅಭಿಯಾನ‌.....ನೂತ‌ನ CEO ರನ್ನು ಸ್ವಾಗತ ಕೋರಿದ ಸರ್ಕಾರಿ ನೌಕರರ ಟೀಮ್.....ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಜನವರಿ 1, 2026 ರಿಂದ ಬಾಕಿ ವೇತನ ಇಲ್ಲಿದೆ ಲೆಕ್ಕಾಚಾರ.....ರಾಜ್ಯ ಸರ್ಕಾರಿ ನೌಕರರ ಮಹತ್ವದ ಸಭೆ..... ನಿವೃತ್ತಿಯಾದ ನೌಕರರಿಗೆ ಸನ್ಮಾನ ಗೌರವ.... ‌ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬಜೆಟ್ ಕುಸಿತ.....ಆತಂಕದಲ್ಲಿ ಕ್ಷೇತ್ರ.....ಶಿಕ್ಷಕಿ ಪೊಟೊ ಗಳು ವೈರಲ್.....ಶಾಲೆಯಲ್ಲಿ ಶಿಕ್ಷಕಿ ಮಾಡಿದ ಕೆಲಸ ನೋಡಿ.....ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಅರ್ಜಿ ಆಹ್ವಾನ.....ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....