LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕ ಬಾಲಾಜಿ ಬಿರಾದಾರಗೆ ಬೀಳ್ಕೊಡುಗೆ - 33 ವರ್ಷ ಸೇವಾ ಬದುಕಿಗೆ ಸನ್ಮಾನ ಗೌರವ.....

ಬೀದರ್:

ಕಳೆದ 33 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಧ್ಯ ಮುಖ್ಯಶಿಕ್ಷಕ ರಾಗಿದ್ದ ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಾಲಾಜಿ ಬಿರಾದಾರ ನಿವೃತ್ತರಾಗಿದ್ದಾರೆ ಹುದ್ದೆಯಿಂದ ನಿವೃತ್ತಿ ಹೊಂದಿದ ಬಾಲಾಜಿ ಬಿರಾದಾರ ಅವರನ್ನು ಶಾಲೆ ಯಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಡ ಲಾಯಿತು

ಪೂಜ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಕರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.32 ವರ್ಷ ಶಿಕ್ಷಕ, ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯಶಿಕ್ಷಕ ನಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಸೇವಾ ಅವಧಿ ಯಲ್ಲಿ ವಿದ್ಯಾರ್ಥಿಗಳು,ಪಾಲಕರು ಹಾಗೂ ಗ್ರಾಮಸ್ಥರು ತೋರಿದ ಪ್ರೀತಿ ಹಾಗೂ ವಿಶ್ವಾಸವನ್ನು ಜೀವನದಲ್ಲಿ ಎಂದೂ ಮರೆಯಲಾರೆ ಎಂದು ಬಾಲಾಜಿ ಬಿರಾದಾರ ನುಡಿದರು.

ಬಾಲಾಜಿ ಬಿರಾದಾರ ಅವರ ಸರಳತೆ, ಸೌಜನ್ಯತೆ, ಸಮಾಜ ಹಾಗೂ ವಿದ್ಯಾರ್ಥಿಗಳ ಪರ ಕಾಳಜಿಯನ್ನು ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಶ್ಲಾಘಿಸಿದರು.SDMC ಅಧ್ಯಕ್ಷ ಓಂಕಾರ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪ ನಿರ್ದೇಶಕ (ಅಭಿವೃದ್ಧಿ) ಎಂ.ಡಿ. ಗುಲ್ಶನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ,

ಬೀದರ್ ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಮದರ್ ಖಾನ್ ಪಠಾಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ, ಖಜಾಂಚಿ ಅಶೋಕ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಸಹಾಯಕ ಅಕ್ಷರ ದಾಸೋಹ ಯೋಜನಾಧಿಕಾರಿ ಝಾಕೀರ್ ಹುಸೇನ್, ಕ್ಷೇತ್ರ ಸಮನ್ವಯಾಧಿಕಾರಿ ಕುಶಾಲರಾವ್ ಯರನಳ್ಳೆ,

ನ್ಯಾಯವಾದಿ ಪೀರಪ್ಪ ಔರಾದೆ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಚ್ಚೇಂದ್ರನಾಥ ಗಾಯಕವಾಡ್, ಜನವಾಡ ಠಾಣೆ ಪಿಎಸ್‍ಐ ಬಾಷುಮಿಯಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಪಂಡಿತ, ಅಧ್ಯಕ್ಷ ರಾಮಶೆಟ್ಟಿ ಕೆಂಚಾ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಸ್ವಾಮಿ, ರಾಜು ಸಾಗರ್, ಸೋಮಶೇಖರ, ಸೂರ್ಯಕಾಂತ, ಎಂ.ಡಿ. ಖಾಲಿದ್, ಎಂ.ಡಿ. ಲತೀಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ತಾನಾಜಿ ಕಾರಬಾರಿ, ಅಶೋಕ್, ಮಹೇಶ ಬಚ್ಚಣ ಇದ್ದರು.

ಸುದ್ದಿ ಸಂತೆ ನ್ಯೂಸ್ ಬೀದರ್.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ - ಪ್ರಶಸ್ತಿ ವಿಜೇತ ಶಿಕ್ಷಕರ ಸಂಪೂರ್ಣ ಮಾಹಿತಿ.....ನಾಡಿನ ಜನತೆಗೆ Big Mishra ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು - ನಾಡಿನ ಜನತೆಗೆ ಶುಭ ಕೋರಿದ ಸಂಜಯ ಮಿಶ್ರಾ.....ಶಿಕ್ಷಕಿಯಿಂದ ಅಮಾನವೀಯ ಕೃತ್ಯ.....ಕ್ರಮಕ್ಕೆ ಪೋಷಕರ ಒತ್ತಾಯ.....ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆಗಳು.....IAS ಅಧಿಕಾರಿ ಸೇವೆಯಿಂದ ಅಮಾನತು - ಸೇವೆಯಿಂದ ಅಮಾನತುಗೊಳಿ ಆದೇಶ ಮಾಡಿದ ರಾಜ್ಯ ಸರ್ಕಾರ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ - ಬಹುದಿನಗಳ ಬೇಡಿಕೆ ಈಡೇರಿಕೆ 'ಸಂಧ್ಯಾ ಕಿರಣ' ಯೋಜನೆ ಜಾರಿ.....ಇಬ್ಬರ ಶಿಕ್ಷಕರ ಅಮಾನತು ಆದೇಶ ರದ್ದು - ಅಮಾನತು ಮಾಡಿದ ಇಲಾಖೆಗೆ ಅಧಿಕಾರಿಗಳಿಗೆ ಮುಖ ಭಂಗ..... ಗೆದ್ದ ಶಿಕ್ಷಕರು.....ಮುಖ್ಯಶಿಕ್ಷಕ ಬಾಲಾಜಿ ಬಿರಾದಾರಗೆ ಬೀಳ್ಕೊಡುಗೆ - 33 ವರ್ಷ ಸೇವಾ ಬದುಕಿಗೆ ಸನ್ಮಾನ ಗೌರವ.....ರಾಜ್ಯದ ಸರ್ಕಾರಿ ಶಾಲೆಗಳಿಗೆ ಮತ್ತೊಂದು ಹೊಸ ಜವಾಬ್ದಾರಿ - ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಹೊಸ ತಲೆನೋವಿನ ಕೆಲಸದ ಆದೇಶ.....ಡಿಗ್ರಿ ಯಲ್ಲಿ ಎರಡು ಬಾರಿ ಫೇಲ್‌ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್.....ಇದು KPSC ಪರೀಕ್ಷೆ ಪ್ರಪಂಚ.....