LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ರೇಖಾ ನಿಧನ.....

ಕುಷ್ಟಗಿ -

ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ರೊಬ್ಬರು ನಿಧನ ರಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಯಲ್ಲಿ ನಡೆದಿದೆ ಪೊಲೀಸ್‌ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ವೀರೇಶಕುಮಾರ ಆನೆ ಹೊಸೂರು (33) ಅನಾರೋಗ್ಯದಿಂದ ನಿಧನರಾದರು.

ಗರ್ಭಿಣಿಯಾಗಿದ್ದ ರೇಖಾ ಹೆರಿಗೆ ರಜೆ ಮೇಲೆ ಸ್ವಂತ ಗ್ರಾಮ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇದ್ದಲಗಿಗೆ ತೆರಳಿದ್ದರು.ತೀವ್ರ ಜ್ವರಬಾಧೆ ಯಿಂದ ಬಳಲುತ್ತಿದ್ದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತರ ಪತಿ ವೀರೇಶ ಕುಮಾರ ರಾಮನಗರ ಜಿಲ್ಲೆಯಲ್ಲಿ ನಾಗರಿಕ ಪೊಲೀಸ್‌ ಅಗಿ ನೇಮಕವಾಗಿ ಸದ್ಯ ಧಾರವಾಡದಲ್ಲಿ ಬುನಾದಿ ತರಬೇತಿ ಪಡೆಯುತ್ತಿದ್ದಾರೆ. ಅಂತ್ಯಕ್ರಿಯೆ ಇದ್ದಲಗಿ ಗ್ರಾಮದ ಬಳಿ ನ.24 ರಂದು ಪೊಲೀಸ್‌ ಇಲಾಖೆ ಗೌರವದೊಂದಿಗೆ ನೆರವೇರಿದೆ ಎಂದು ಇಲ್ಲಿಯ ಪೊಲೀಸ್ ಮೂಲಗಳು ತಿಳಿಸಿವೆ.

ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದ ರೇಖಾ ಅವರು, ತಂದೆ– ತಾಯಿಗೆ ಒಬ್ಬಳೇ ಪುತ್ರಿ. ಸಹೋದರ ಇದ್ದಾನೆ. ತಂದೆ– ತಾಯಿ ಇದ್ದಲಗಿ ಗ್ರಾಮದಲ್ಲಿ ಚಿಕ್ಕ ಹೋಟೆಲ್‌ ಇಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದರು. ಬಡತನದಿಂದ ಬೆಳೆದು ಬಂದಿದ್ದ ಪ್ರತಿಭಾವಂತೆಯ ಅಕಾಲಿಕ ನಿಧನದಿಂದ ಇಡೀ ಗ್ರಾಮವೇ ಮಂಗಳವಾರ ಕಂಬನಿಗರೆಯಿತು. ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಸ್ನೇಹಿತರು, ಸಹಪಾಠಿಗಳು ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದರು.

ಸುದ್ದಿ ಸಂತೆ ನ್ಯೂಸ್ ಕುಷ್ಟಗಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ಮೂರು ದಿನ ಸಾಲು ಸಾಲು ರಜೆ.....ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.....ಅಕ್ಷರ ದಾಸೋಹ ಯೋಜನೆ ಅಧಿಕಾರಿಯನ್ನು ಲೋಕಾ ಬಲೆಗೆ ಹಾಕಿದ ಶಿಕ್ಷಕ.....ಲೋಕಾಯುಕ್ತ ಬಲೆಗೆ ಬಿದ್ದ ಅಕ್ಷರ ದಾಸೋಹ ಅಧಿಕಾರಿ.....ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿ ವಿದ್ಯಾರ್ಥಿ.....ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ಬಗ್ಗೆ ಒಂದು ಅವಲೋಕನ..... ನಿಮಗಾಗಿ ಒಂದಿಷ್ಟು ಮಾಹಿತಿ.....ಪ್ರಾಥಮಿಕ ಶಾಲಾ ಶಿಕ್ಷಕ ಬಸವರಾಜ ಅಮಾನತು.....OPS' ಜಾರಿ ಕುರಿತಂತೆ 'ಕರ್ನಾಟಕ ಹೈಕೋರ್ಟ್' ಮಹತ್ವದ ತೀರ್ಪು..... ರಾಜ್ಯ ಸರ್ಕಾರಿ ನೌಕರರಿಗೆ ಬಹುಮುಖ್ಯ ಮಾಹಿತಿ.....ಬಿಸಿಯೂಟ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.....ದೂರವಾಯ್ತು ಬಹುದೊಡ್ಡ ಆತಂಕ.....