LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪ್ರಾಥಮಿಕ ಶಾಲಾ ಶಿಕ್ಷಕ ಬಸವರಾಜ ಅಮಾನತು.....

ಹಾವೇರಿ -

ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಪಟ್ಟಂತೆ, ಶಿಗ್ಗಾವಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಸವಡಿ ಅವರನ್ನು ಅಮಾನತು ಮಾಡಲಾಗಿದೆ ಕಾಲೇಜಿನ ಕೇಂದ್ರದಲ್ಲಿ ಅಕ್ಟೋಬರ್ 4ರಂದು ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿ ಶಂಕರ ಬನ್ನೂರು, ಮೊಬೈಲ್‌ ಬಳಸಿ ಅಕ್ರಮ ಎಸಗಿದ್ದರು. ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ಶಂಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಪರೀಕ್ಷಾ ಕೇಂದ್ರದವರ ನಿರ್ಲಕ್ಷ್ಯ ಹಾಗೂ ಲೋಪವೂ ಅಕ್ರಮಕ್ಕೆ ಕಾರಣ’ ಎಂಬುದು ವಿಚಾರಣೆ ಯಿಂದ ಗೊತ್ತಾಗಿತ್ತು. ಕೇಂದ್ರದ ಮುಖ್ಯಸ್ಥರೂ ಆಗಿದ್ದ ಪ್ರಾಂಶುಪಾಲ ರಮಾಕಾಂತ್ ಭಟ್ ಹಾಗೂ ಕೊಠಡಿ ಮೇಲ್ವಿಚಾರಕ- ಬಸವರಾಜ ಸವಡಿ ಅವರಿಗೆ ನೋಟಿಸ್ ನೀಡಿದ್ದ ಡಿಡಿಪಿಯು ಮಹದೇವಸ್ವಾಮಿ, ಲಿಖಿತ ಉತ್ತರಗಳನ್ನೂ ಪಡೆದು ಪರಿಶೀಲಿಸಿದ್ದರು.

ಕೇಂದ್ರದವರ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಕೇಂದ್ರ ಮುಖ್ಯಸ್ಥ ಹಾಗೂ ಮೇಲ್ವಿಚಾರಕರನ್ನು ಅಮಾನತು ಮಾಡಿ’ ಎಂದು ಕಾಲೇಜಿನ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರು. ಅದರನ್ವಯ ನ.23ರಂದು ಆದೇಶ ಹೊರಡಿಸಿರುವ ಆಡಳಿತ ಮಂಡಳಿ, ಇಬ್ಬರನ್ನೂ ಕೆಲಸದಿಂದ ಅಮಾನತು ಮಾಡಿದೆ

‘ಜಿಲ್ಲಾಧಿಕಾರಿಯವರ ಸೂಚನೆಯಂತೆ ತಪ್ಪಿತಸ್ಥರನ್ನು ಅಮಾನತು ಮಾಡಲಾಗಿದೆ. ಮುಂದಿನ ವಿಚಾರಣೆ ಹಾಗೂ ಇತರೆ ಕಾನೂನು ಕ್ರಮಗಳ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು. ಮುಂಬರುವ ದಿನಗಳಲ್ಲಿ ಇಂಥ ಘಟನೆಗಳು ಮರುಕ ಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.

ಇದೇ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈಗಾಗಲೇ, ಕಾನ್‌ಸ್ಟೆಬಲ್‌ಗಳಾದ ಶಿಗ್ಗಾವಿ ಠಾಣೆಯ ಸಿ.ಎ. ಮರೆಣ್ಣನವರ, ಪಿ.ಸಿ.ಹೊನ್ನಾಳಿ, ಸವಣೂರು ಠಾಣೆಯ ಆರ್‌.ಎಂ.ಮಣಕವಾಡ ಹಾಗೂ ಆಡೂರು ಠಾಣೆಯ ಎಸ್.ಆರ್. ನಾಗನೂರು ಅವರನ್ನು ಅಮಾನತು ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.....ಅಕ್ಷರ ದಾಸೋಹ ಯೋಜನೆ ಅಧಿಕಾರಿಯನ್ನು ಲೋಕಾ ಬಲೆಗೆ ಹಾಕಿದ ಶಿಕ್ಷಕ.....ಲೋಕಾಯುಕ್ತ ಬಲೆಗೆ ಬಿದ್ದ ಅಕ್ಷರ ದಾಸೋಹ ಅಧಿಕಾರಿ.....ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿ ವಿದ್ಯಾರ್ಥಿ.....ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ಬಗ್ಗೆ ಒಂದು ಅವಲೋಕನ..... ನಿಮಗಾಗಿ ಒಂದಿಷ್ಟು ಮಾಹಿತಿ.....ಪ್ರಾಥಮಿಕ ಶಾಲಾ ಶಿಕ್ಷಕ ಬಸವರಾಜ ಅಮಾನತು.....OPS' ಜಾರಿ ಕುರಿತಂತೆ 'ಕರ್ನಾಟಕ ಹೈಕೋರ್ಟ್' ಮಹತ್ವದ ತೀರ್ಪು..... ರಾಜ್ಯ ಸರ್ಕಾರಿ ನೌಕರರಿಗೆ ಬಹುಮುಖ್ಯ ಮಾಹಿತಿ.....ಬಿಸಿಯೂಟ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.....ದೂರವಾಯ್ತು ಬಹುದೊಡ್ಡ ಆತಂಕ.....ಶಿಕ್ಷಕ ನರೇಂದ್ರ ಬಂಧನ.....ಶಾಲೆಯಲ್ಲಿ ವಶಕ್ಕೆ ತೆಗೆದುಕೊಂಡ ಪೊಲೀಸರು.....