ಬೆಂಗಳೂರು -
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ, ದಕ್ಷತೆ ಹಾಗೂ ಶಿಸ್ತು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು 'ಕರ್ನಾಟಕ ನಾಗರಿಕ ಸೇವೆ (ವರ್ತನೆ) ನಿಯಮಗಳು 1966'ರ ಅಡಿಯಲ್ಲಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿ ಗೊಳಿಸಲಾಗಿದೆ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ದಾಖಲೆ ಗಳಲ್ಲಿರುವ ಈ ನಿಯಮಾವಳಿಗಳು ಸರ್ಕಾರಿ ನೌಕರರ ಕರ್ತವ್ಯನಿಷ್ಠೆ, ಆಸ್ತಿ ಘೋಷಣೆ, ಉಡುಗೊರೆ ಸ್ವೀಕಾರ ಹಾಗೂ ವೈಯಕ್ತಿಕ ನಡವಳಿಕೆಗಳ ಮೇಲೆ ಸ್ಪಷ್ಟ ನಿರ್ಬಂಧಗಳನ್ನು ವಿಧಿಸಿವೆ.
ರಾಜ್ಯ ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡ ಮತ್ತು ಸರ್ಕಾರಿ ಕಾರ್ಯಗಳಿಗೆ ನಿಯೋಜನೆಗೊಂಡ ಎಲ್ಲಾ ನೌಕರರಿಗೂ ಈ ನಿಯಮಗಳು ಅನ್ವಯಿಸುತ್ತವೆ. ಆದರೆ, ಅಖಿಲ ಭಾರತ ಸೇವಾ ಸದಸ್ಯರು, ರಾಜ್ಯ ಪಾಲರು ವಿಶೇಷ ಅಧಿಸೂಚನೆ ಮೂಲಕ ವಿನಾಯಿತಿ ನೀಡಿದ ಹುದ್ದೆಯಲ್ಲಿರುವವರು ಹಾಗೂ ಔದ್ಯಮಿಕ ನಿಯೋಜನೆ (ಸ್ಥಾಯೀ ಆದೇಶಗಳು) ಶಾಸನ 1946ರ ವ್ಯಾಪ್ತಿಗೆ ಒಳಪಡುವ ಕೈಗಾರಿಕಾ ಉದ್ಯಮದ ನೌಕರ ರಿಗೆ ಇವು ಅನ್ವಯಿಸುವುದಿಲ್ಲ.
ನಿಯಮ 3ರ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಸಮಯದಲ್ಲೂ ಸಂಪೂರ್ಣ ಪ್ರಾಮಾಣಿಕತೆ ಹೊಂದಿರಬೇಕು, ಕರ್ತವ್ಯ ನಿಷ್ಠನಾ ಗಿರಬೇಕು ಮತ್ತು ಯಾವುದೇ ಅನುಚಿತ ವರ್ತನೆ ಯಲ್ಲಿ ತೊಡಗಬಾರದು ಮೇಲ್ವಿಚಾರಣಾಧಿಕಾರಿಗಳು ತಮ್ಮ ಅಧೀನ ನೌಕರರಲ್ಲೂ ಈ ಗುಣಗಳನ್ನು ಬೆಳೆಸ ಬೇಕು ಹಾಗೂ ಮೌಖಿಕ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸಿದರೂ ತಕ್ಷಣವೇ ಲಿಖಿತ ಒಪ್ಪಿಗೆ ಪಡೆದು ಕೊಳ್ಳಬೇಕು.
ಸರ್ಕಾರಿ ನೌಕರರು ರಾಜಕಾರಣದಲ್ಲಿ ಹಾಗೂ ಚುನಾವಣೆಗಳಲ್ಲಿ ಭಾಗವಹಿಸುವುದು ಸಂಪೂರ್ಣ ನಿಷಿದ್ಧವಾಗಿದೆ. ಮತ ಚಲಾಯಿಸುವುದು ಮತ್ತು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸು ವುದನ್ನು ಹೊರತುಪಡಿಸಿ, ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದು,ಪ್ರಚಾರ ಮಾಡುವುದು ಅಥವಾ ಮನೆ ಹಾಗೂ ವಾಹನಗಳ ಮೇಲೆ ಚುನಾವಣಾ ಚಿಹ್ನೆಗಳನ್ನು ಪ್ರದರ್ಶಿಸುವುದು ನಿಯಮ ಉಲ್ಲಂಘನೆಯಾಗುತ್ತದೆ ಅಲ್ಲದೆ,ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಸೇರುವುದಾಗಲೀ, ಮುಷ್ಕರ ಅಥವಾ ಹರತಾಳಗಳಲ್ಲಿ ಭಾಗವಹಿಸು ವುದಾಗಲೀ ಮಾಡಕೂಡದು.
ಪತ್ರಿಕೆಗಳು ಅಥವಾ ರೇಡಿಯೋ ಮೂಲಕ ಸರ್ಕಾರದ ಕಾರ್ಯನೀತಿಗಳನ್ನು ಟೀಕಿಸುವಂತಿಲ್ಲ ಮತ್ತು ಅಧಿಕಾರದಿಂದ ಪಡೆದ ಗೌಪ್ಯ ಮಾಹಿತಿಯನ್ನು ಇತರರಿಗೆ ಸೋರಿಕೆ ಮಾಡುವಂತಿಲ್ಲ. ಸರ್ಕಾರದ ಪೂರ್ವಾನುಮತಿಯಿಲ್ಲದೆ ಖಾಸಗಿ ಉದ್ಯೋಗ, ಲೇವಾದೇವಿ ವ್ಯವಹಾರ ಅಥವಾ ವ್ಯಾಪಾರದಲ್ಲಿ ತೊಡಗುವಂತಿಲ್ಲ. ವೈದ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆ ಅಥವಾ ಪ್ರಸೂತಿ ಗೃಹಗಳನ್ನು ನಡೆಸುವಂತಿಲ್ಲ ಹಾಗೂ ಪಠ್ಯಪುಸ್ತಕ ಸಮಿತಿಯ ಸದಸ್ಯರಾದವರು ಪಠ್ಯಪುಸ್ತಕ ಬರೆಯುವಂತಿಲ್ಲ ಅಥವಾ ಸಂಪಾದಕತ್ವ ವಹಿಸುವಂತಿಲ್ಲ.
ನಿಯಮ 14ರ ಪ್ರಕಾರ, ಮದುವೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಸಂಬಂಧಿಕರಿಂದ ಪಡೆಯುವ ಉಡು ಗೊರೆಗಳಿಗೂ ಸರ್ಕಾರ ಮಿತಿ ಹೇರಿದೆ. ಸಂಬಂಧಿಕ ರಿಂದ ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳು ₹5,000, ಗ್ರೂಪ್ 'ಸಿ' ನೌಕರರು ₹2,500 ಹಾಗೂ ಗ್ರೂಪ್ 'ಡಿ' ನೌಕರರು ₹1,250 ಮೌಲ್ಯದವರೆಗೆ ಮಾತ್ರ ಉಡುಗೊರೆ ಪಡೆಯಬಹುದು.ಸರ್ಕಾರಿ ವ್ಯವಹಾ ರದಲ್ಲಿ ತೊಡಗಿರದ ವೈಯಕ್ತಿಕ ಸ್ನೇಹಿತರಿಂದ ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳು ₹2,500, ಗ್ರೂಪ್ 'ಸಿ' ನೌಕರರು ₹1,000 ಹಾಗೂ ಗ್ರೂಪ್ 'ಡಿ' ನೌಕರರು ₹500ರವರೆಗೆ ಮತ್ತು ಇತರರಿಂದ ಕ್ರಮವಾಗಿ ₹750 ಹಾಗೂ ₹250ರವರೆಗೆ ಮಾತ್ರ ಕೊಡುಗೆ ಪಡೆಯಲು ಅವಕಾಶವಿದೆ.
ಈ ಮಿತಿಗಿಂತ ಹೆಚ್ಚಿನ ಮೊತ್ತದ ಉಡುಗೊರೆ ಸ್ವೀಕರಿ ಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಇನ್ನು ನಿಯಮ 14(ಎ) ಅಡಿಯಲ್ಲಿ ಯಾವುದೇ ಸರ್ಕಾರಿ ನೌಕರನು ವರದಕ್ಷಿಣೆ ಪಡೆಯುವುದಾಗಲೀ, ನೀಡುವುದಾಗಲೀ ಅಥವಾ ಅದಕ್ಕೆ ಪ್ರೋತ್ಸಾಹ ನೀಡುವುದಾಗಲೀ ಅಪರಾಧವಾಗಿದೆ ಗ್ರೂಪ್ 'ಡಿ' ನೌಕರರನ್ನು ಹೊರತುಪಡಿಸಿ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವೆಗೆ ಸೇರಿದಾಗ ಹಾಗೂ ಪ್ರತಿ ವರ್ಷ ಮಾರ್ಚ್ ಅಂತ್ಯದವರೆಗಿನ ತನ್ನ ಮತ್ತು ಅವಲಂಬಿತ ಕುಟುಂಬ ಸದಸ್ಯರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ವನ್ನು ಏಪ್ರಿಲ್ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಿರ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ನಿಯಮಿತ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು.
ಹಾಗೆಯೇ ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳು ₹10,000ಕ್ಕಿಂತ ಹೆಚ್ಚಿನ ಹಾಗೂ ಗ್ರೂಪ್ 'ಸಿ' ಮತ್ತು 'ಡಿ' ನೌಕರರು ₹5,000ಕ್ಕಿಂತ ಹೆಚ್ಚಿನ ಮೌಲ್ಯದ ಚರ ಸ್ವತ್ತು (ವಾಹನ, ಒಡವೆ, ಟಿವಿ, ಫ್ರಿಡ್ಜ್, ಷೇರು ಇತ್ಯಾದಿ) ಖರೀದಿಸುವಾಗ ಅಥವಾ ಮಾರುವಾಗ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಸರ್ಕಾರಿ ನೌಕರರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದಾಗಲೀ, ಅನುಚಿತವಾಗಿ ವರ್ತಿಸುವುದಾಗಲೀ ಮಾಡಕೂಡದು. ಮೊದಲ ಪತ್ನಿ ಅಥವಾ ಪತಿ ಜೀವಂತವಿರುವಾಗ ಎರಡನೇ ವಿವಾಹ ವಾಗುವುದನ್ನು ನಿಷೇಧಿಸಲಾಗಿದೆ.ಬಾಲಕಾರ್ಮಿಕ ಪದ್ಧತಿಗೆ ಪ್ರೋತ್ಸಾಹ ನೀಡುವುದು ಹಾಗೂ ಲೈಂಗಿಕ ಶೋಷಣಾ ಕ್ರಿಯೆಗಳಲ್ಲಿ ತೊಡಗುವುದನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲಾಗಿದೆ.ಇದರೊಂದಿಗೆ, ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಕುಟುಂಬದ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆ, ವಸತಿ ಹಾಗೂ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಕಡೆಗಣಿ ಸತಕ್ಕದ್ದಲ್ಲ ಎಂದು ನಿಯಮ 29(ಸಿ) ಸ್ಪಷ್ಟವಾಗಿ ಎಚ್ಚರಿಸಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....